ಮುಂಬೈ, ನ 30- ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಸ್ಪೀಕರ್ ಹುದ್ದೆಗೆ ಮಹಾ ವಿಕಾಸ್ ಅಘಾದಿ ಅಭ್ಯರ್ಥಿಯಾಗಿ ಶನಿವಾರ ನಾನಾ ಪಟೋಲೆ ನಾಮಪತ್ರ ಸಲ್ಲಿಸಿದ್ದಾರೆ.
ವಿಶ್ವಾಸಮತದ ಹಿನ್ನೆಲೆಯಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ತಮ್ಮ ಶಾಸಕರಿಗೆ ವಿಪ್ ನೀಡಿ, ವಿಧಾನಸಭೆಗೆ ಹಾಜರಾಗುವಂತೆ ನಿರ್ದೇಶನ ನೀಡಿತ್ತು.
ಈ ನಡುವೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ನಾಯಕಿ ಸುಪ್ರಿಯಾ ಸುಲೇ ಈಗಾಗಲೇ ಮಹಾರಾಷ್ಟ್ರ ವಿಧಾನಸಭೆ ಬಂದಿದ್ದಾರೆ.
ರಾಜ್ಯಪಾಲರ ಸೂಚನೆ ಮೇರೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ವಿಧಾನಸಭೆಯಲ್ಲಿ ಶನಿವಾರ ಬಲಾಬಲ ಸಾಬೀತುಪಡಿಸುತ್ತಿದ್ದಾರೆ.
ಡಿ 3 ರೊಳಗೆ ತಮಗಿರುವ ಬಹುಮತವನ್ನು ಸದನದಲ್ಲಿ ಸಾಬೀತುಪಡಿಸಬೇಕೆಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನೂತನ ಮುಖ್ಯಮಂತ್ರಿ ಅವರಿಗೆ ನಿರ್ದೇಶನ ನೀಡಿದ್ದರು.
ಇದಕ್ಕೂ ಮುನ್ನ ನಾಟಕೀಯ ಮತ್ತು ರೋಚಕ ವಿದ್ಯಮಾನದಲ್ಲಿ ಬಿಜೆಪಿ, ಎನ್ ಸಿ ಪಿ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿತ್ತು. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಸದನದಲ್ಲಿ ಬಹುಮತ ಸಾಬೀತುಪಡಿಸುವ ಮುನ್ನವೇ ಇಬ್ಬರು ನಾಯಕರೂ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆನಂತರ ಕಾಂಗ್ರೆಸ್ – ಎನ್ ಸಿ ಪಿ ಮತ್ತು ಶಿವಸೇನೆ ಒಟ್ಟಿಗೆ ಸೇರಿ ಉದ್ಧವ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಕೊಂಡಿವೆ.