ನಮ್ಮೂರು ನಮ್ಮ ಕೆರೆ ಹಸ್ತಾಂತರ
ಯರಗಟ್ಟಿ 21: ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಿಂದ ಕೆರೆಗಳ ಅಭಿವೃದ್ಧಿಯಾಗಿ ಪರಿಸರದ ಅಂತರ್ಜಲ ವೃದ್ಧಿಯಾಗುತ್ತಿದ್ದು, ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಕೋಟದ ಶಿಂದೋಗಿಯ ಪೂಜ್ಯ ಮುಕ್ತಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು-ನಮ್ಮ ಕೆರೆ ಯೋಜನೆಯಡಿ ಯರಗಟ್ಟಿ ಸಮೀಪದ ರೈನಾಪೂರ ಗ್ರಾಮದ ಅಭಿವೃದ್ಧಿ ???ಂಡ ಪುರಾತನ ಕೆರೆ ಹಸ್ತಾಂತರ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಆಧುನಿಕತೆಗೆ ಸಿಲುಕಿ ಕೆರೆಗಳು ಮಾಯವಾಗುತ್ತಿವೆ. ನೀರಿನ ಉಳಿವಿಗಾಗಿ ಕೆರೆಗಳ ಉಳಿವು ಅತ್ಯಗತ್ಯ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಬಿ. ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ಇದುವರೆಗೆ 765 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 36 ಕೋಟಿ ರೂ.ಗೂ ಅಧಿಕ ಹಣವನ್ನು ಇದಕ್ಕೆ ವಿನಿಯೋಗ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದು ವರೆಗೆ 20 ಕೆರೆಗಳನ್ನು ಅಭಿವೃದ್ಧಿಪಡಿಸಿ, ಸಮಿತಿಯನ್ನು ರಚಿಸಿ ಸಾರ್ವಜನಿಕರ ಉಪಯೋಗಕ್ಕೆ ಹಸ್ತಾತರಿಸಲಾಗಿದೆ ಎಂದರು.
ರೈನಾಪೂರ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋವಿಂದಪ್ಪ ಕಳ್ಳಿಗುದ್ದಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಧೇಶಿಕ ನಿರ್ದೇಶಕ ಮನೋಜ್ ಮಿನೇಜನ್, ಗ್ರಾ. ಪಂ. ಅಧ್ಯಕ್ಷೆ ಸತ್ಯವ್ವ ಗೊರಗುದ್ದಿ, ಯೋಜನೆಯ ಜಿಲ್ಲಾ ನಿರ್ದೇಶಕ ಹೆಚ್. ಆರ್. ಲಕುಮಾರ, ತಾಲೂಕು ಯೋಜನಾಧಿಕಾರಿ ಸತೀಶ ಡಿ, ಗ್ರಾ. ಪಂ. ಸದಸ್ಯ ನಂದಗೋಪಾಲ ಕಡೇಮನಿ, ರಂಗಪ್ಪ ಜೋಗನವರ, ವೇಂಕಪ್ಪ ಹುಲಕುಂದ, ವೀರಣಗೌಡ ಪಾಟೀಲ, ಬಸಪ್ಪ ತೋರಣಗಟ್ಟಿ, ನಿಂಗರಾಜ ಮಾಳವಾಡ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ಸದಸ್ಯರು, ಮೇಲ್ವಿಚಾರಕರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಯೋಜನೆಯ ವಲಯದ ಮೇಲ್ವಿಚಾರಕ ನಾಗರಾಜ ನಾಯಕ ಸ್ವಾಗತಿಸಿದರು. ಕೃಷಿ ಅಧಿಕಾರಿ ನಾಗಪ್ಪ ನಾಯಕ, ನಿರೂಪಿಸಿ ವಂದಿಸಿದರು.