ರೇಷನ್ ಕಾರ್ಡ ಪರಿಷ್ಕರಣೆ ಕೈಬಿಟ್ಟ ರಾಜ್ಯ ಸರ್ಕಾರ ಬಡವರ ಪರವಾದ ಹೋರಾಟಕ್ಕೆ ಸಿಕ್ಕ ಜಯವಾಗಿದೆ-ಇಮ್ತಿಯಾಜ ಮಾನ್ವಿ


ರೇಷನ್ ಕಾರ್ಡ ಪರಿಷ್ಕರಣೆ ಕೈಬಿಟ್ಟ ರಾಜ್ಯ ಸರ್ಕಾರ ಬಡವರ ಪರವಾದ ಹೋರಾಟಕ್ಕೆ ಸಿಕ್ಕ ಜಯವಾಗಿದೆ-ಇಮ್ತಿಯಾಜ ಮಾನ್ವಿ 


ಗದಗ-21, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರಚನೆ ಅದ ನಂತರ ಚುನಾವಣೆಯಲ್ಲಿ ಘೋಷಿಸಿರುವಂತ ಪಂಚ್ ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ, ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿರುವುದು ರಾಜ್ಯದ ಮುಖ್ಯಮಂತ್ರಿಗಳು ನಾಡಿನ ಜನತೆಗೆ ನೀಡಿದ ಮಾತನು ಉಳಿಸಿಕೊಳ್ಳುವಲ್ಲಿ ನುಡಿದಂತೆ ನಡೆದಿದ್ದಾರೆ, ಆದರೆ ಇತ್ತಿಚ್ಚಿಗೆ ರೇಷನ್ ಕಾರ್ಡಗಳ ಪರಿಷ್ಕರಣೆ ನೆಪ್ಪದಲ್ಲಿ ರಾಜ್ಯದ ಅರ್ಹರ ಕಾರ್ಡಗಳನ್ನು ರದ್ದು ಮಾಡಿ ಸರ್ಕಾರದ ಪಂಚ್ ಗ್ಯಾರಂಟಿ ಯೋಜನೆಗಳಿಂದ ಬಡವರನ್ನು ವಂಚಿಸಲಾಗುತ್ತಿದೆ ಎಂದು ಖಂಡಿಸಿ ಸ್ಲಂ ಜನಾಂದೋಲನ-ಕರ್ನಟಕ ರಾಜ್ಯ ಸಮಿತಿಯ ಸಹಕಾರದಲ್ಲಿ ಕಳೆದ 19-08-2024 ರಂದು ರಾಜ್ಯದಂತ ಹೋರಾಟವನ್ನು ನಡೆಸಿ ಸರ್ಕಾರದ ಗಮನಕ್ಕೆ ತರಲಾಗಿತ್ತು, ನಂತರ ನಿರಂತರ ಹೋರಾಟಗಳನ್ನು ನಡೆಸುತ್ತ ಕೊಳಗೇರಿಗಳಲ್ಲಿ ಕೊಲಿ-ನಾಲಿ ಕೆಲಸವನ್ನು ಮಾಡುತ್ತ ರೇಷನ್ ಕಾರ್ಡನಿಂದ ಪಡೆದುಕೊಂಡ ಆಹಾರ ಧಾನ್ಯಗಳಿಂದ ತಮ್ಮ ಬದುಕನ್ನು ನಡೆಸುತ್ತಿದ್ದ ಬಡ ಕುಟುಂಬಗಳ ಆಧಾರ ಸ್ತಂಭ ಆಗಿರುವ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸುವ ಸರ್ಕಾರದ ಕ್ರಮದಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆಘಾತ ಉಂಟಾಗಿ ಜನಾಕ್ರೋಶಕ್ಕೆ ಕಾರಣವಾಗಿತ್ತು, ಇದನ್ನು ಗಂಭೀರವಾಗಿ ಗಮನಿಸಿದ ರಾಜ್ಯ ಸರ್ಕಾರ ರಾಜ್ಯದಂತ ನಡೆಸಲಾಗುತ್ತಿದ್ದ ರೇಷನ್ ಕಾರ್ಡ ಪರಿಷ್ಕರಣೆ ಕೈಬಿಟ್ಟಿದ್ದು ಬಡವರ ಪರವಾದ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್‌.ಮಾನ್ವಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ, ಗದಗ ಜಿಲ್ಲೆಯಲ್ಲಿ ನೂರಾರು ಕೊಳಗೇರಿ ನಿವಾಸಿಗಳ, ಮಧ್ಯಮ ವರ್ಗಗಳ ಹಾಗೂ ದುಡಿಯುವ ವರ್ಗಗಳ ಕುಟುಂಬದ ಕಾರ್ಡಗಳನ್ನು ರದ್ದು ಮಾಡಿ ಕಚೇರಿಗಳಿಗೆ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು, ಇದನ್ನು ಗಮನಿಸಿದ ರಾಜ್ಯದ ಮುಖ್ಯಮಂತ್ರಿಗಳು ಸರ್ಕಾರಿ ನೌಕರರು ಮತ್ತು ಆದಾಯತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡದಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೊಚನೆಯನ್ನು ನೀಡಿದ್ದಾರೆ, ಒಂದು ವೇಳೆ ಅರ್ಹರ ಕಾರ್ಡಗಳನ್ನು ರದ್ದಾಗಿದ್ದರೆ ತಕ್ಷಣ ವಾಪಸು ನೀಡಲು ಹಾಗೂ ವಿನಾಕಾರಣ ಅರ್ಹರ ಕುಟುಂಬಗಳ ಪಡಿತರ ಚೀಟಿಗಳನ್ನು ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುಧ್ದ ಕ್ರಮ ಜರುಗಿಸಲಾಗುವುದೆಂದು ಮುಖ್ಯಮಂತ್ರಿಗಳು ಎಚ್ಚರಿಕ್ಕೆ ನೀಡಿದ್ದಾರೆ, ಹಾಗೂ ಆಹಾರ ಇಲಾಖೆ ಸಚಿವರು ಆದಾಯ ತೆರಿಗೆ ಪಾವತಿಸುವರು ಹಾಗೂ ಸರ್ಕಾರಿ ನೌಕರರು ಇದ್ದರೆ ಮಾತ್ರ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಲಾಗುವುದು ಉಳಿದಂತೆ ಎಲ್ಲಾ ಅರ್ಹರ ಕಾರ್ಡಗಳನ್ನು ಯಾವುದೇ ಕಾರಣಕ್ಕೊ ರದ್ದು ಮಾಡುವುದಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಸ್ಪಷ್ಟ ಪಡಿಸಿರುವುದ್ದರಿಂದ ಅರ್ಹರ ಬಡ ಕುಟುಂಬಗಳಿಗೆ ಸಂತೋಷ ತಂದಿದೆ, ಆದರೆ ಮುಖ್ಯಮಂತ್ರಿಗಳ ಹಾಗೂ ಆಹಾರ ಇಲಾಖೆ ಸಚಿವರ ಸೊಚನೆಯಂತೆ ಈಗಾಗಲೇ ಅರ್ಹರ ಕಾರ್ಡಗಳನ್ನು ರದ್ದು ಮಾಡಿರುವುದನ್ನು ಅಧಿಕಾರಿಗಳು ಪ್ರಮಾಣಿಕವಾಗಿ ಅಂತಹ ಬಡ ಕುಟುಂಬಗಳಿಗೆ ಕಾರ್ಡಗಳನ್ನು ವಾಪಸು ನೀಡುತ್ತಾರೆ ಎಂದು ಗೊಂದಲ ಸೃಷ್ಟಿಯಾಗಿದೆ, ಗದಗ ಜಿಲ್ಲೆಯಲ್ಲಿ ವಿನಾಕಾರಣ ನೂರಾರು ಅರ್ಹರ ಕುಟುಂಬಗಳ ಬಿಪಿಎಲ್ ಕಾರ್ಡಗಳನ್ನು ರದ್ದುಗೊಳಿಸಿದ್ದು ರಾಜ್ಯದ ಮುಖ್ಯಂತ್ರಿಗಳ ಹಾಗೂ ಆಹಾರ ಇಲಾಖೆ ಸಚಿವರ ಆದೇಶದಂತೆ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಅಂತಹ ಕುಟುಂಬಗಳಿಗೆ ಕಾರ್ಡಗಳನ್ನು ವಾಪಸು ನೀಡಿ ಆಹಾರ ಧಾನ್ಯ ಪಡೆಯಲು ಹಾಗೂ ಇನ್ನಿತರ ಯೋಜನೆಗಳ ಲಾಭ ಪಡೆದುಕೊಳ್ಳಲು ಅನುಕೊಲ ಮಾಡಿಕೊಡಬೇಕು, ಇಂದು ವೇಳೆ ಸರ್ಕಾರದ ಆದೇಶಕ್ಕೆ ಆಹಾರ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಆಹಾರ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್‌.ಮಾನ್ವಿ ಮತ್ತು ಕಾರ್ಯದರ್ಶಿ ಅಶೋಕ ಕುಸಬಿ ಎಚ್ಚರಿಕ್ಕೆ ನೀಡಿದ್ದಾರೆ.