ಕಲ್ಮಠದಲ್ಲಿ ಡಿ,14 ರವರೆಗೆ ನಮ್ಮೂರ ಉತ್ಸವ ಪ್ರಾರಂಭ

Nammur Utsav begins in Kalmath till December 14

ಬೀಳಗಿ 04: ಶ್ರೀ ಕಲ್ಮಠ ಶ್ರೀಷ,ಬ್ರ.ಲಿಂ.ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳವರ 53ನೇ ಪುಣ್ಯಸ್ಮರೋತ್ಸವ ನಿಮಿತ್ಯವಾಗಿ ಡಿ 4 ರಿಂದ ಡಿ,14 ರವರೆಗೆ ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಜೀಯವರ ನೇತೃತ್ವದಲ್ಲಿ ನಮ್ಮೂರು ಉತ್ಸವ 2024-25ರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.  

ಡಿ 4 ರಿಂದ ಡಿ,14 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ತಾಯಿ ಸಜ್ಜಲಗುಡ್ಡದ ಶರಣಮ್ಮನವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವು ನಡೆಯಲಿದೆ. ಪ್ರವಚನದ ಉದ್ಘಾಟನಾ ಸಮಾರಂಭವು ಡಿ, 4 ರಂದು ನಡೆಯಲಿದ್ದು ಕಾರ್ಯಕ್ರಮದಲ್ಲಿ ಗಿರಿಸಾಗರ ಕಲ್ಯಾಣ ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ. ಬೀಳಗಿ ಸೋಮಪ್ಪಯ್ಯನ ಮಠದ ಚನ್ನಬಸವ ಮಹಾಸ್ವಾಮಿಗಳು ನೇತೃತ್ವ. ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಸ್ವಾಮಿಗಳು ಸಮುಖ. ದೊಡ್ಡಿಹಾಳ ಬ್ರಹನ್ಮಠ ಶಿವಾನಂದ ದೇವರು. ಹುಚ್ಚಪ್ಪಯ್ಯನ ಮಠದ ಸಿದ್ದಯ್ಯ ಸ್ವಾಮಿಗಳು, ಕುಂದರಗಿ ಜಮ್ ಶುಗರ​‍್ಸ‌ ನಿರ್ದೇಶಕ ರಾಮನಗೌಡ ಜಕ್ಕನಗೌಡ ಅಧ್ಯಕ್ಷತೆ ವಹಿಸುವರು.  

ಬೀಳಗಿ ಕೃ.ಮೇ.ಯೋ ವಿಶೇಷ ಭೂಸ್ವಾಧಿನಾಧಿಕಾರಿ ಉದಯ ಕುಂಬಾರ ವೇ.ಮೂ.ಸದಾನಂದ ಶಾಸ್ತ್ರಿಯವರಿಂದ ಪ್ರವಚನ ನುಡಿ, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ವಿನೋದ ಹತ್ತಳ್ಳಿ, ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಅಖಿಲ ಭಾರತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಜತ್ತಿ, ಗಣ್ಯರಾದ ವೀರಭದ್ರ​‍್ಪ ನಾಗರಾಳ, ನಿಂಗಯ್ಯ ಸ್ವಾಮಿ ಎಂ.ಗುಂಡಗುರ್ತಿ ಗಾಯಕ. ಅಡವೀಶ ಕುಮಾರ ಪಿ.ಎಮ್‌.ತಬಲಾ ವಾದಕರು ಹಾಗೂ ಇನ್ನೂ ಅನೇಕ ಗಣ್ಯರು ಈ ನಮ್ಮೂರ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಲ್ಮಠದ ಪೀಠಾಧಿಪತಿ ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.