ಲೋಕದರ್ಶನ ವರದಿ
ನಾಲತವಾಡ 27: ವಿದ್ಯಾರ್ಥಿಗಳು ಪರೀಕ್ಷಾ ಭಯ ನಿವಾರಿಸಿಕೊಳ್ಳಲು ನಿಯಮಿತ ಓದು, ಬರಹ ರೂಢಿಸಿಕೊಳ್ಳಬೇಕು. ಓದಿದ್ದನ್ನು, ಕೇಳಿದ್ದನ್ನು ಮನನ ಮಾಡಿಕೊಳ್ಳುವ ಶಕ್ತಿ ಸಂಪಾದಿಸಬೇಕು ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಸರ್ಕಾರಿ ಪ್ರಥಮ ದಜರ್ೆ ಕಾಲೇಜು ಉಪನ್ಯಾಸಕ ಪ್ರೊ.ಮುರಳಿಧರ ಬಿ.ಹೇಳಿದರು.
ನಾಗರಬೆಟ್ಟದ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಅಡಿ ನಡೆಯುತ್ತಿರುವ ಆಕ್ಸರ್ಡ್ ಪಾಟೀಲ್ಸ್ ವಿಜ್ಞಾನ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾಥರ್ಿಗಳಿಗೆ ಪರೀಕ್ಷಾ ಭಯ ನಿವಾರಣೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಯಾವತ್ತಿಗೂ ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದುವುದನ್ನು ರೂಢಿಸಿಕೊಳ್ಳಬೇಕು. 45 ನಿಮಿಷ ಓದು, 5 ನಿಮಿಷ ವಿಶ್ರಾಂತಿ, 10 ನಿಮಿಷ ಓದಿದ್ದನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಸಹ ಮುಖ್ಯಸ್ಥ ಕುಮಾರಗೌಡ ಪಾಟೀಲ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಜಹಾಂಗೀರ ಮುಲ್ಲಾ, ಶಾಲೆಯ ಉಪನ್ಯಾಸಕರು, ಶಿಕ್ಷಕರು ಇದ್ದರು. ಪ್ರಾಂಶುಪಾಲ ರೇವಣಸಿದ್ದ ಚಲವಾದಿ(ಮುರಾಳ) ಸ್ವಾಗತಿಸಿದರು. ಮುಖ್ಯಾಧ್ಯಾಪಕ ಇಸ್ಮಾಯಿಲ್ ನಿರೂಪಿಸಿದರು.