ಪಿಡಿಓ ಆಫ್ ದಿ ಮಂತ್ ಪ್ರಶಸ್ತಿಗೆ ನಾಗೇಂದ್ರ ನಾಯ್ಕ ಭಾಜನ
Nagendra Nayka selected for PDO of the Month Award
ಕಾರವಾರ 07: ಜೂನ್-2025 ಮಾಹೆಯ “ಬೆಸ್ಟ್ ಪಿಡಿಓ ಆಪ್ ದಿ ಮಂತ್” ಪ್ರಶಸ್ತಿಗೆ ಭಾಜನರಾದ ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮಹಾದೇವ ನಾಯ್ಕ ಅವರಿಗೆ ನಗರದ ಜಿಲ್ಲಾ ಪಂಚಾಯತ ಕೇಸ್ವಾನ್ ಹಾಲ್‌ನಲ್ಲಿ ಸೋಮವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರು ಪ್ರಶಸ್ತಿ ನೀಡಿ, ಅಭಿನಂದಿಸಿದರು.
ಬಳಿಕ ಸಿಇಓ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಎಲ್ಲ ಪಿಡಿಓಗಳು ತುಂಬ ಚೆನ್ನಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮ ಜಿಲ್ಲಾ ಪಂಚಾಯತ ಕರ್ನಾಟಕದ ಪ್ರಮುಖ ಐದರಲ್ಲಿ ಒಂದು ಎಂದು ಗುರುತಿಸಲು ಪಿಡಿಓಗಳ ಕಾರ್ಯ ಮಹತ್ತರವಾಗಿದೆ. ಹಾಗಾಗಿ ಅವರುಗಳನ್ನು ಗುರುತಿಸಿ ಸತ್ಕಾರ ಮಾಡಿ, ಅಭಿನಂದಿಸುವುದರಿಂದ ಎಲ್ಲರಲ್ಲಿ ಕಾರ್ಯಪ್ರವರ್ತತೆ ಹೆಚ್ಚಿಸಲು ಸಾಧ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಕರೀಂ ಆಸದಿ, ಆಡಳಿತ ಶಾಖೆಯ ಸಹಾಯಕ ನಿರ್ದೇಶಕ ವೆಂಕಟ್ರಾಯ ನಾಯ್ಕ, ಸಹಾಯಕ ಯೋಜನಾ ಅಧಿಕಾರಿ ಕೃಷ್ಣಾ ಶಾಸ್ತ್ರಿ ಹಾಗೂ ಲೆಕ್ಕ ಅಧಿಕ್ಷಕ ಸೂರ್ಯಕಾಂತ ಸೇರಿದಂತೆ ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 