ಗ್ರಾಮ ಪಂಚಾಯತ ನೂತನ ಉಪಾಧ್ಯಕ್ಷರಾಗಿ ನಾಗರಾಜ ಬಹದ್ದೂರಬಂಡಿ ಆಯ್ಕೆ

Nagaraja Bahadurbandi was elected as the new vice president of Gram Panchayat

ಗ್ರಾಮ ಪಂಚಾಯತ ನೂತನ ಉಪಾಧ್ಯಕ್ಷರಾಗಿ ನಾಗರಾಜ ಬಹದ್ದೂರಬಂಡಿ ಆಯ್ಕೆ

ಹುಲಿಗಿ 03: ಸಮೀಪದ ಬೇವಿನಹಳ್ಳಿ ಗ್ರಾಮ ಪಂಚಾಯತಗೆ ಇತ್ತೀಚಿಗೆ ತೆರವಾಗಿದ್ದ ಸಾಮಾನ್ಯ ಮೀಸಲಾತಿ ಉಪಾಧ್ಯಕ್ಷ ಹುದ್ದೆಗೆ ಬುಧವಾರ ಚುನಾವಣೆ ಜರುಗಿತು.  14 ಜನರ ಸದಸ್ಯ ಬಲ ಬಲಾ ಹೊಂದಿರುವ ಬೇವಿನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಬೇವಿನಹಳ್ಳಿ ಗ್ರಾಮದ ನಾಗರಾಜ ಬಹದ್ದೂರಬಂಡಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ಕೊಪ್ಪಳ ತಹಸೀಲ್ದಾರ್ ವಿಠಲ್ ಚೌಗಳಿ ಫಲಿತಾಂಶ ಪ್ರಕಟಣೆ ಮಾಡಿದರು.  

ಲಿಂಗದಹಳ್ಳಿ ಗ್ರಾಮದ ಮುರುಳಿದರ್ ಬಸಿರಾಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ. ಸಾಮಾನ್ಯ ಮೀಸಲಾತಿ ಸ್ಥಾನಕ್ಕೆ ಬುಧವಾರ ನಿಗದಿತ ಅವಧಿಯೊಳಗೆ ನಾಗರಾಜ್ ಅವರ ನಾಮಪತ್ರ ಹೊರತುಪಡಿಸಿ ಉಳಿದ ಯಾವ ಸದಸ್ಯರು ಕೂಡ ನಾಮಪತ್ರ ಸಲ್ಲಿಸದೆ ಇರುವರಿಂದ ನಾಗರಾಜ್ ಅವರನ್ನು ಅವಿರೋಧ ಆಯ್ಕೆ ಆಗಿದ್ದಾರೆ ಎಂದರು, ಅವಿರೋಧವಾಗಿ ಆಯ್ಕೆಗೆ ಸಹಕಾರ ನೀಡಿದ  ಗ್ರಾಮ ಪಂಚಾಯತ್ ಅಧ್ಯಕ್ಷ ರಿಗೆ, ಎಲ್ಲ ಸದಸ್ಯರಿಗೆ ಹಾಗೂ ಬಂಧುಗಳಿಗೆ ನೂತನ ಉಪಾಧ್ಯಕ್ಷ ಧನ್ಯವಾದಗಳನ್ನು ತಿಳಿಸಿ ಮಾತನಾಡಿದ ಅವರು ನಮ್ಮ ಪಂಚಾಯತ್ ವ್ಯಾಪ್ತಿಯ ಜನರಿಗೆ  ಮೂಲಬೂತ ಸೌಲಭ್ಯ ಒದಗಿಸಿಕೊಡುವಲ್ಲಿ ಮೊದಲ ಆದ್ಯತೆ ನೀಡುತ್ತೇನೆ ಎಂದು ನೂತನ ಉಪಾಧ್ಯಕ್ಷ ನಾಗರಾಜ್ ಬಹದ್ದೂರಬಂಡಿ ಹೇಳಿದರು. 

 ಗ್ರಾಮ ಪಂಚಾಯತ ಅಧ್ಯಕ್ಷರಾದ ತಿಪ್ಪವ್ವ ಶಿವಪ್ಪ ನಾಯಕ ಮರುಳಿದರ್, ಅಭಿವೃದ್ಧಿ ಅಧಿಕಾರಿ ಗೀತಾಕುಮಾರಿ, ಕಾರ್ಯದರ್ಶಿ ಶಿವಾನಂದಪ್ಪ ಪಂಥರ್  ಸದಸ್ಯರಾದ ಯಂಕನಗೌಡ ಪಾಟೀಲ್,  ಹಾಲಪ್ಪ ಶಹಪುರ್,  ಹನುಮಂತಪ್ಪ ಗೊಲ್ಲರ,  ಶಿವಮೂರ್ತಿ ಮೂಲಿಮನಿ,  ಶಾಂತಮ್ಮ ಕೃಷ್ಣಪ್ಪ ಮಡ್ಡಿ,  ಪಾರ್ವತಿ ಮಾರುತಿ ಬಹಾದ್ದೂರಬಂಡಿ,  ಸುಮಂಗಲ ನಿಂಗಪ್ಪ ಶಹಪುರ, ,ಹೊನ್ನವ್ವ ದೇವೇಂದ್ರ ಲಿಂಗದಹಳ್ಳಿ,  ಪದ್ಮಾವತಿ ನಾಗರಾಜ್,  ಗಂಗಮ್ಮ ಶಹಾಪುರ,  ಅಂಜಿನಪ್ಪ ಲಿಂಗದಹಳ್ಳಿ, ಗಣ್ಯರಾದ ಮಾರುತಿ ಬಹಾದ್ದೂರ್ ಬಂಡಿ, ನಿಂಗಜ್ಜ ಚೌದರಿ, ನಿಂಗಪ್ಪ ನಾಗಲಾಪುರ, ನಾಗರಾಜ್ ಶಾಪುರ, ಮುದ್ದಪ್ಪ ಬೇವಿನಹಳ್ಳಿ, ಯೋಗಾನಂದ ಲೇಬಗೇರ, ಮಾರುತಿ ಸಿಂದೋಗಿ, ಮರಿಯಪ್ಪ ಹೂವಿನಾಳ, ಭೀಮಣ್ಣ ಮುಲಿಮಲಿ, ಬಸವರಾಜ್ ಸಾಹುಕಾರ್, ಮಾರ್ಕಠಪ್ಪ ಅಜಗಾರ್, ಅಮರೇಗೌಡ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.