ಲೋಕದರ್ಶನ ವರದಿ
ಕೊಪ್ಪಳ 31: ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ನಾಗರಾಜ್ ಚಳ್ಳೋಳ್ಳಿಯವರು ಶುಕ್ರವಾರದಂದು ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನಕ್ಕೆ ಜಡಿಯಪ್ಪ ಬಂಗಾಳಿ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಚಳ್ಳೋಳ್ಳಿಯವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ತಹಶೀಲ್ದಾರ ಹಾಗೂ ಚುನಾವಣಾಧಿಕಾರಿ ಜೆ.ಬಿ.ಮಜ್ಜಿಗಿ ಘೋಷಿಸಿದರು.
ನಂತರ ನೂತನ ಅಧ್ಯಕ್ಷ ನಾಗರಾಜ್ ಚಳ್ಳೋಳ್ಳಿ ಪತ್ರಿಕೆಯೊಂದಿಗೆ ಮಾತನಾಡಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಎಪಿಎಂಸಿ ಸಮಗ್ರ ಅಭಿವೃದ್ದಿಗೆ ಎಲ್ಲಾ ಸದಸ್ಯರ ಸಲಹೆ-ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಮನಗೌಡ ಪೋ.ಪಾಟೀಲ್, ಸದಸ್ಯರಾದ ಹನುಮರಡ್ಡಿ ಹಂಗನಕಟ್ಟಿ, ವೆಂಕನಗೌಡ ಹಿರೇಗೌಡ್ರ,ಜಡಿಯಪ್ಪ ಬಂಗಾಳಿ, ವೆಂಕಣ್ಣ ವರಕನಹಳ್ಳಿ, ಚೌಡಪ್ಪ ಜಂತ್ಲಿ, ಗೌರಮ್ಮ ಪೊಲೀಸ್ಪಾಟೀಲ್, ಜಿ.ವಿಶ್ವನಾಥರಾಜು, ನೇಮರಡ್ಡಿ ಮೇಟಿ, ಶ್ರೀಶೈಲಪ್ಪ ಅಂಗಡಿ, ಕಾರ್ಯದಶರ್ಿ ಸಿದ್ದಯ್ಯಸ್ವಾಮಿ ಉಪಸ್ಥಿತರಿದ್ದರು.
ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್, ಜಿ.ಪಂ. ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಎಸ್.ಬಿ.ನಾಗರಳ್ಳಿ,ಕೆ.ರಾಜಶೇಖರ ಹಿಟ್ನಾಳ್, ಸೈಯದ್ಜುಲ್ಲು ಖಾದ್ರಿ, ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷ ನಾಗರಾಜ್ ಚಳ್ಳೋಳ್ಳಿಯನ್ನು ಅಭಿನಂದಿಸಿದರು.