200 ವರ್ಷಗಳ ಇತಿಹಾಸ ಹೊಂದಿದ ನಾಗನೂರು ರುದ್ರಾಕ್ಷಿಮಠ

ಲೋಕದರ್ಶನ ವರದಿ

ಬೈಲಹೊಂಗಲ 09: ನಾಗನೂರು ರುದ್ರಾಕ್ಷಿಮಠ 200 ವರ್ಷಗಳ ಇತಿಹಾಸ ಹೊಂದಿದೆ. ಡಾ.ಶಿವಬಸವ ಸ್ವಾಮೀಜಿ,ಡಾ.ಸಿದ್ದರಾಮ ಸ್ವಾಮೀಜಿಗಳಿಂದ ಮಠಕ್ಕೆ ಒಳ್ಳೆಯ ಕೊಡುಗೆ ಸಿಕ್ಕಿದೆ ಎಂದು  ಸುತ್ತೂರ ಜಗದ್ಗುರು ವೀರಶಿಂಹಾಸನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

     ತಾಲೂಕಿನ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮೀಜಿ ಪುಣ್ಯಸ್ಮರಣೆ ರಜತಮಹೋತ್ಸವ, ಬಸವ ಪುರಾಣ, ಡಾ.ಸಾವಳಗೀಶ್ವರ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ  ಶಿವಬಸವ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಸಿದ್ದರಾಮೇಶ್ವರ ಮಹಾದ್ವಾರ ಲೋಕಾರ್ಪನೆ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದ ಜನರ ಕಲ್ಯಾಣ ಬಯಸದೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಲು ಮಠಗಳು ಕಾರಣ. ಮನುಷ್ಯ ಮಾಡಿದ ಪುಣ್ಯ ಮಾತ್ರ ಉಳಿಯುತ್ತದೆ. ಮನುಷ್ಯರುಮತ್ತೊಬ್ಬರಿಗೆ ನೋವಾಗದಂತೆ ವರ್ತಿಸಬೇಕು ಎಂದರು.

    ಬಿಜಾಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣವರಿಗೆ ಇನ್ನೊಬ್ಬರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಅವರು ತಮಗೆ ಯಾವುದನ್ನು ಬಯಸಲಿಲ್ಲ. ದೇಶದ ಉದ್ಧಾರಕ್ಕೆ ಪ್ರಯತ್ನಿಸಿದರು.  ಕೂಡಲಸಂಗಮನನ್ನು ನಾವು ನೆನೆದರೆ ಸಕಲ ಕಷ್ಟಗಳು ಪರಿಹಾರವಾಗುತ್ತದೆ. ಮೈಮನಸ್ಸು ಹೊಲಸು ಮಾಡಿಕೊಳ್ಳದೆ ನಿಷ್ಕಾಮ ಕಾರ್ಯ ಮಾಡಬೇಕು ಎಂದರು.

     ಕೇಂದ್ರ ಸಚಿವ ಸುರೇಶ ಅಂಗಡಿ ಮಾತನಾಡಿ,ಜಗತ್ತಿಗೆ ಪ್ರಜಾಪ್ರಭುತ್ವವನ್ನು ಕೊಟ್ಟವರು 12 ನೇ ಶತಮಾನದಲ್ಲಿ ಬಸವಣ್ಣವರು. ನಾನು ಈ ದೊಡ್ಡ ಸ್ಥಾನದಲ್ಲಿರಬೇಕಾದರೆ ನಮಗೆ  ಡಾ.ಶಿವಬಸವ ಸ್ವಾಮೀಜಿ ಆಶೀರ್ವಾದ ಕಾರಣ. ತಾಯಿ ಪ್ರೀತಿಯನ್ನು ಅವರಲ್ಲಿ ಕಂಡಿದ್ದೇನೆಂದರು.

       ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ನಾಗನೂರ ರುದ್ರಾಕ್ಷಿಮಠ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಮಠಕ್ಕಿದೆ. ಸರಕಾರ ಮಾಡದ ಕಾರ್ಯವನ್ನು ನಾಗನೂರ ಮಠ ಮಾಡಿದೆ. ಹುಬ್ಬಳ್ಳಿಯಲ್ಲಿ ರೈಲು ನಿಲ್ದಾಣಕ್ಕೆ ಸಿದ್ದಾರೂಡರ ಹೆಸರನ್ನು ನಾಮಕರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

     ಹಿರಿಯ ಸಾಹಿತಿ ಸಾಹಿತಿ ಗೋ.ರು.ಚನ್ನಬಸಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾವಳಗೀಶ್ವರರ ಪಿಎಚ್ಡಿ ಗ್ರಂಥ ಬಸವಣ್ಣವರು ಮತ್ತು ಮಾರ್ಟಿನ್ ಲೂಥರ ಗ್ರಂಥ ಬಿಡುಗಡೆಗೊಳಿಸಲಾಯಿತು.

    ಗದಗ ಜಗದ್ಗುರು ಡಾ.ಸಿದ್ದರಾಮ ಸ್ವಾಮೀಜಿ, ಧಾರವಾಡದ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬೆಳಗಾವಿ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಸುತ್ತೂರ ಮಠದ ಜಯರಾಜೇಂದ್ರ ದೇವರು, ಈಶಪ್ರಭು ಸ್ವಾಮೀಜಿ, ಮುತ್ತಿನಕಂಠಿ ಸ್ವಾಮೀಜಿ, ಕುಂಟೋಜಿಯ ಚನ್ನವೀರ ಸ್ವಾಮೀಜಿ,ಡಾ.ಸಾವಳಗೀಶ್ವರರು, ಸಾನಿಧ್ಯ ವಹಿಸಿದ್ದರು.

ಮುಖ್ಯಮಂತ್ರಿ ಕಾರ್ಯದರ್ಶಿಶಂಕರಗೌಡ ಪಾಟೀಲ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಉಚ್ಚ ನ್ಯಾಯಾಲಯದ ನ್ಯಾಯಾದೀಶ ರವಿ ನಾಯಕ, ಉಪಸ್ಥಿತರಿದ್ದರು. ಶೇಗುಣಶಿ ಮಹಾಂತ ದೇವರು ಸ್ವಾಗತಿಸಿದರು.