ಕಲೆ, ಸಾಹಿತ್ಯ, ಸಂಗೀತದಿಂದ ನಾಡು ಶ್ರೀಮಂತ: ಶ್ರೀಧರ ಮುರಡಿ ಮಠ

ಲೋಕದರ್ಶನ ವರದಿ

ಕೊಪ್ಪಳ 17: ಕಲೆ, ಸಾಹಿತ್ಯ, ಮತ್ತು ಸಂಗೀತ ಸೇರಿದಂತೆ ಇತರೆ ಕಲೆಗಳಿಗೆ ನಮ್ಮ ಪ್ರದೇಶದ ಜನರು ಅನೇಕ ಕೊಡುಗೆಯನ್ನು ನೀಡಿ, ಶ್ರೀಮಂತಗೊಳಿಸಿದ್ದಾರೆ, ಆ ಮೂಲಕ ನಾಡಿನ ಕಿರ್ತಿಯನ್ನು ಹೆಚ್ಚಿಸಿದ್ದು, ನಾವು ಸಂಗೀತದ ವಿವಿಧ ಪ್ರಕಾರಗಳನ್ನು ಕಲಿತು ಅದನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಶ್ರೀ ಬಸವಲಿಂಗೇಶ್ವರ ಮಹಾಸ್ವಾಮೀ, ಶ್ರೀಧರ ಮುರಡಿ ಮಠ ಹೇಳಿದರು. 

ನಗರದ ಸಾಹಿತ್ಯ ಭವನದಲ್ಲಿ ಖಾಸಗಿ ಸುದ್ದಿ ವಾಹಿನಿ ಏರ್ಪಡಿಸಿದ್ದ ಗಾನ ಸಮರ ಕೊಪ್ಪಳ-2019 ಅತ್ಯುತ್ತಮ ಗಾಯಕರ ಆಯ್ಕೆ ಸ್ಪಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ನಾಡಿನ ಶ್ರೀಮಂತಿಕೆ ಹೆಚ್ಚಿಸಿದ್ದು ಸಂಗೀತ, ಇದಕ್ಕೆ ತನ್ನದೆ ಆದ ಗೌರವವಿದೆ, ಹಾಡುವದರಿಂದ, ಕೇಳುವದರಿಂದ ಎಷ್ಟೊ ಕಾಯಿಲೆಗಳು ದೂರವಾಗಿವೆ, ಸ್ಪಧರ್ೆ ಎನ್ನುವದು ನಮ್ಮಲ್ಲಿರುವ ಪ್ರತಿಭೆಯ ಅನಾವರಣ, ಉತ್ತಮ ಗಾಯಕರಾಗಿ ಹೊರಮ್ಮುಲು ಸಿಕ್ಕಿರುವ ಅವಕಾಸವಾಗಿದೆ ಎಂದ ಅವರು ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಟಿವಿ4 ಕನ್ನಡ ಸುದ್ದಿ ಚಾನಲ್ ಉತ್ತಮ ವೇದಿಕೆಯನ್ನು ನಿಮರ್ಿಸಿಕೊಟ್ಟಿದೆ ಎಂದು ಹೇಳಿದರು. 

ಸಾನಿಧ್ಯವನ್ನು ವಹಿಸಿದ್ದ ಗುರುಶಾಂತವೀರ ಮಹಾಸ್ವಾಮೀಜಿ ಮೇಲುಗದ್ದುಗೆ ಮಠ ವಿಜಯಪುರ ಇಟಗಿ ಮಾತನಾಡಿ ಗದುಗಿನ ಪಂಡಿತ ಪುಟ್ಟರಾಜ ಪಂಚಾಕ್ಷರಿ ಗವಾಯಿಗಳು ಈ ನಾಡಿನ ದೊಡ್ಡ ಆಸ್ತಿ, ಅವರು ಸಂಗೀತ ಲೋಕಕ್ಕೆ ಮಹಾಕೊಡುಗೆಯನ್ನು ನೀಡಿದ್ದು, ಅವರ ಆಶ್ರಮದಿಂದ ಅನೇಕ ಪ್ರತಿಭೆಗಳು ಬೆಳಗಿವೆ, ನಾವು ಸಂಗೀತದಿಂದ ಸಾಧನೆ ಮಾಡಬಹುದು ಎಂದರು. 

ಗಣ್ಯರಾದ ಜೋಗದ ನಾರಾಯಣಪ್ಪ, ವೀರಣ್ಣ ಹುಬ್ಬಳ್ಳಿ, ಮುಖ್ಯಾಧಿಕಾರಿ ನಾಗೇಶ್, ಮುಖ್ಯೋಪಾದ್ಯಯ ಬೀರಪ್ಪ ಅಂಡಗಿ, ಮಾತನಾಡಿದರು, ಮುಖಂಡರಾದ ವೀರುಪಾಕ್ಷಪ್ಪ ಸಿಂಗನಾಳ, ತಿಪ್ಪೆರುದ್ರಯ್ಯ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಗಡಾದ, ಶರಣಬಸವರಾಜ ಕಮಾಲಪೂರ, ಪತ್ರಕರ್ತ ಎಂ.ಸಾದಿಕ ಅಲಿ, ವಕೀಲ ಸೈಯದ್ ಹಶುಮುದೀನ್, ಚಲನಚಿತ್ರ ಸಂಗೀತ ನಿದರ್ೆಶಕ ರವೀಶ್, ಚಲನಚಿತ್ರ ಗಾಯಕಿ ಅನನ್ಯ ಪ್ರಕಾಶ ಸೇರಿದಂತೆ ಇತರರು ಇದ್ದರು. 

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು, ವಿವಿಧಡೆಯಿಂದ ಬಂದಿದ್ದ ಅನೇಕ ಕಲಾವಿದರು ಗಾನಸಮರದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು. ವರದಿಗಾರ ಇಮಾಮಹುಸೇನ ಸಂಕನೂರ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ರವಿಕುಮಾರ ಚಲವಾದಿ, ವಿರೇಶ ಸ್ಟಾಂಪಿನ್ ಕಾರ್ಯಕ್ರಮ ನಿರೂಪಿಸಿದರು, ಕೊನೆಗೆ ಕಾಸಿಂ ಕೋನಿ ವಂದಿಸಿದರು.