ಬೆಳಗಾವಿ, 9: ಇತ್ತೀಚೆಗೆ ನಾಡಹಬ್ಬ ದಸರಾ ಪ್ರಯುಕ್ತ ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶಿವ ಛತ್ರಪತಿ ಸ್ವಾಭಿಮಾನಿ ಗೋಟಮಾರಾ ಇಲೆವನ್ ಪ್ರಥಮ (ಬಿ.ಪಿ.ಎಲ್) ಬೆನಕನಹಳ್ಳಿ ಪ್ರೀಮಿಯರ್ ಲಿಗ್ ವತಿಯಿಂದ ಕ್ರಿಕೆಟ್ ಟೊರ್ನಾಮೆಂಟ್ನ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆನಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಶೈನಾಜಬೆಗಮ್ ಎಮ್ ದಗರ್ಾ ವಹಿಸಿದ್ದರು.
ಈ ಸ್ಪರ್ಧೆ ಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಪೋಟೋ ಪೂಜೆಯನ್ನು ಮಾಡುವ ಮುಖಾಂತರ ಕ್ರೀಡೆಯನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಉದ್ಧೇಶಿಸಿ ಮಾತನಾಡುತ್ತ ಇಂದಿನ ದಿನಗಳಲ್ಲಿ ಯುವ ಜನಾಂಗವು ಬರೀ ಮೊಬೈಲ್ನಲ್ಲಿ ಫೇಸಬುಕ್, ವ್ಹಾಟ್ಸಪ್ ಮುಂತಾದವುಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದು ಇಂತಹ ಕ್ರೀಡೆಗಳು ನಶಿಸಿ ಹೋಗುವ ಹಂತ ತಲುಪುತ್ತಿವೆ, ಆದ್ದರಿಂದ ಇಂದಿನ ಯುವಜನಾಂಗವು ಕಬ್ಬಡಿ, ಕುಸ್ತಿ ಮುಂತಾದ ಕ್ರೀಡೆಗಳಲ್ಲಿಯೂ ಸಹ ಆಸಕ್ತಿಯಿಂದ ಸೋಲು ಗೆಲುವು ಎಂಬ ತಾರತಮ್ಯವಿಲ್ಲದೆ ಭಾಗವಹಿಸಿ ತಮ್ಮ ಆರೋಗ್ಯವನ್ನು ಸದೃಡಗೊಳಿಸುವದರ ಜೊತೆಗೆ ಉತ್ತಮ ಕ್ರೀಡಾಪಟುಗಳಾಗಿ ತಮ್ಮ ಗ್ರಾಮಕ್ಕೆ ಹಾಗೂ ದೇಶಕ್ಕೆ ಕೀತರ್ಿ ತರುವತ್ತ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಉಪಸ್ಥಿತರು: ಗ್ರಾಮ ಪಂಚಾಯತಿ ಅಧ್ಯಕ್ಷ ಶೈನಾಜಬೇಗಮ್ ದಗರ್ಾ, ಯಲ್ಲಪ್ಪಾ ಚಿಕ್ಕಲಕರ, ತಾ.ಪಂ.ಸದಸ್ಯ ರಂಜನಾ ಕೋಲಕಾರ, ಮಾಜಿ ಗ್ರಾ.ಪಂ.ಅದ್ಯಕ್ಷ ಉಮೇಶ ಚೋಪಡೆ, ವಿಠ್ಠಲ ಪಾಟೀಲ, ಮಾರುತಿ ದೇಸೂರಕರ, ಮಹೇಶ ಪಾಟೀಲ, ರಾಮಚಂದ್ರ ಮನ್ನೋಳಕರ, ಮಾರುತಿ ಪಾಟೀಲ, ರಾಮಾ ಗಾವಡು ಪಾಟೀಲ, ಲಕ್ಷ್ಮಣ ದೇಸೂರಕರ, ಕಲ್ಲಪ್ಪಾ ದೇಸೂರಕರ, ಮದನ ಪಾಟೀಲ, ಹಾಗೂ ವಯಕ್ತಿಕ ಬಹುಮಾನಗಳನ್ನು ಪೂರೈಸಿದ ನಾಗೇಶ ಪರಶರಾಮ ಜಾಧವ, ಜೋತಿಬಾ ರಮೇಶ ಮಂಡಲಿಕ, ಪರಶುರಾಮ ಗುರುನಾಥ ದೇಸೂರಕರ, ಚನ್ನಪ್ಪಾ ಶಿವಾಜಿ ಪಾಟೀಲ, ಕೃಷ್ಣಾ ತಾನಾಜಿ ಕಾಟಕರ, ರಾಮಾ ಗಾವಡು ಪಾಟೀಲ, ಡಾ||ರಾಜು ಪಾಟೀಲ, ಕ್ರೀಡಾಪಟುಗಳು ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.