ನಾಡಪ್ರಭು ಕೆಂಪೇಗೌಡ ನಾಡಿನ ಹೆಮ್ಮೆಯ ಪುತ್ರ

ಬಾಗಲಕೋಟೆ27: ಕನ್ನಡ ನಾಡ, ನುಡಿಗಾಗಿ ಹಾಗೂ ಇಲ್ಲಿಯ ನೆಲ, ಜಲಕ್ಕಾಗಿ ಇತಿಹಾಸ ನಿಮರ್ಿಸಿ ಮರೆಯಾದ ಇತಿಹಾಸ ಪುರುಷರ ಕಾಲದಲ್ಲಿ ಒಬ್ಬರಾದವರು ನಾಡಿನ ಹೆಮ್ಮೆಯ ಪುತ್ರ ನಾಡಪ್ರಭು ಕೆಂಪೇಗೌಡ ಎಂದು ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು.

ನಗರದ ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೆಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಜನರ ಒಳಿತಿಗಾಗಿ ತಮ್ಮ ಸ್ವಾರ್ಥ ಬದುಕು ಬಿಟ್ಟು ಜನರಿಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇಂತಹ ಮಹಾತ್ಮರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ವಿದ್ಯಾಥರ್ಿಗಳು ಕೆಂಪೇಗೌಡರ ಆದರ್ಶ, ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಅನೇಕ ಕೂಲಿ ಕಾಮರ್ಿಕರ ಮಕ್ಕಳು ಕೆ.ಎ.ಎಸ್, ಐ.ಎ.ಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣ ಆಗುವದರ ಮೂಲಕ ಯಾವುದು ಅಸಾಧ್ಯವಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮ ಯುವಜನತೆ ಎಚ್ಚೆತ್ತಾಗ ಮಾತ್ರ ಶ್ವಸ್ಥ ದೇಶವನ್ನು ನಿಮರ್ಿಸುಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಕ್ರಿ ಕಾಲೇಜಿನ ಪ್ರಾಚಾರ್ಯ ಪ್ರೊ|| ಅಶೋಕ ಕಂದಗಲ್ಲ ಮಾತನಾಡಿ ನಾಡು, ನುಡಿ, ಸಂಸ್ಕೃತಿ ಬೆಳೆಸಲು ನಾಡಿನಲ್ಲಿ ಹಲವಾರು ಮಾಹಾನ್ ವ್ಯಕ್ತಿಗಳು ಶ್ರಮಿಸಿದ್ದು, ಅವರಲ್ಲಿ ನಾಡಪ್ರಭು ಕೆಂಪೇಗೌಡರು ಸಹ ಒಬ್ಬರಾಗಿದ್ದಾರೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಹಾಗೂ ತಾಂತ್ರಿಕ ಲೋಕದಲ್ಲಿ ಹೆಸರು ಮಾಡುವದರ ಜೊತೆಗೆ ಜಗತ್ತೆ ಬೆಂಗಳೂರಿನತ್ತ ನೋಡುತ್ತಿರುವದು ನಾವೆಲ್ಲರು ಹೆಮ್ಮೆಯ ಪಡುವ ವಿಷಯ ಎಂದು ಹೇಳಿದರು.

ಉಪನ್ಯಾಸಕರಾಗಿ ಅಗಮಿಸಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ. ಆನಂದ ಕುಲಕಣರ್ಿ ಮಾತನಾಡಿ ಮದ್ಯಯುಗದಲ್ಲಿ ಆಡಳಿತ ನಡೆಸಿದಂತಹ ಕೆಂಪೇಗೌಡರು ಸಮರ್ಥ ಆಡಳಿತಗಾರಿದ್ದರು. ಅವರ ಮನೆ ದೇವರು ಕೆಂಪಮ್ಮ ಆಗಿದ್ದರಿಂದ ಅವರಿಗೆ ಕಂಪೇಗೌಡ ಎಂದು ಹೆಸರು ಬಂದಿತು. ಕೆಂಪೇಗೌಡರ ಜೀವನ, ಸಾಧನೆ, ಆಡಳಿತ ವೈಖರಿ, ಕುರಿತು ವಿವರವಾಗಿ ತಿಳಿಸಿಕೊಟ್ಟರು.

ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಸಕ್ರಿ ಕಾಲೇಜಿನ ಪ್ರೊ.ಗೋಪಾಲ ಕುಲಕಣರ್ಿ ವಂದಿಸಿದರು.