ನವದೆಹಲಿ, ಡಿ 24 2019ರ ಆವೃತ್ತಿಯಲ್ಲಿ ಮೂವರು ಅಂತಾರಾಷ್ಟ್ರೀಯ ಅಥ್ಲಿಟ್‌ಗಳು ಕ್ರೀಡಾ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ.
12 ತಿಂಗಳಲ್ಲಿ ಅವರು ತೋರಿರುವ ಪ್ರದರ್ಶನ ಈ ಸಾಧನೆಗೆ ಸಾಕ್ಷಿಯಾಗಿದೆ. ಈ ಸಾಲಿನಲ್ಲಿ ವಿಶ್ವದ ಅಗ್ರ
ಶ್ರೇಯಾಂಕಿತ ರಫೆಲ್ ನಡಾಲ್, ಗಾಲ್ಫ್ ಸ್ಟಾರ್ ಟೈಗರ್ ವುಡ್ ಹಾಗೂ ಫಾರ್ಮುಲಾ ಓನ್ ಚಾಲಕ ಹ್ಯಾಮಿಲ್ಟನ್
ಒಳಗೊಂಡಿದ್ದಾರೆ. 1. ರಫೆಲ್ ನಡಾಲ್: ನವೆಂಬರ್ 18 ರಂದು ಎಟಿಪಿ ಬಿಡುಗಡೆ ಮಾಡಿದ್ದ
ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ ರಫೆಲ್ ನಡಾಲ್ ವರ್ಷಾಂತ್ಯದಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.
ಲಂಡನ್ ನಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ ಎಟಿಪಿ ಫೈನಲ್ಸ್ ಹಣಾಹಣಿಯಲ್ಲಿ ರಫೆಲ್ ಗುಂಪು ಹಂತದಲ್ಲೇ
ಮುಗ್ಗರಿಸಿದ್ದರು. ಆದರೂ, ವರ್ಷಾಂತ್ಯದಲ್ಲಿ ಅವರು 6,985 ರನ್ ಅಂಕ ಕಲೆ ಹಾಕಿದ್ದಾರೆ. ಜತೆಗೆ,
ನೊವಾಕ್ ಜೊಕೊವಿಚ್ ಮತ್ತು ರೋಜರ್ ಫೆಡರರ್ ಅಗ್ರ ಐದರೊಳಗೆ 2019ರ ಆವೃತ್ತಿಯನ್ನು ಮುಗಿಸಿದ್ದಾರೆ. ವೃತ್ತಿ ಜೀವನದ 13ನೇ ಫ್ರೆಂಚ್ ಓಪನ್ ಕಿರೀಟವನ್ನು ರಫೆಲ್
ಇದೇ ವರ್ಷದಲ್ಲಿ ಮುಡಿಗೇರಿಸಿಕೊಂಡಿದ್ದರು. ಫೈನಲ್ ಹಣಾಹಣಿಯಲ್ಲಿ ಆಸ್ಟ್ರೀಯಾದ ಡೊಮಿನಿಚ್ ಥೀಮ್ ಅವರನ್ನು
6-3,5-7, 6-1, 6-1 ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದಿದ್ದರು. ಇದರೊಂದಿಗೆ ವೃತ್ತಿ ಜೀವನದ
19 ಗ್ರ್ಯಾನ್ ಸ್ಲ್ಯಾಮ್ ಜಯಸಿದ್ದಾರೆ. ಯುಎಸ್ ಓಪನ್‌ನಲ್ಲಿಯೂ ಫೈನಲ್ ಹಣಾಹಣಿಯಲ್ಲಿ ಡೆನಿಯಲ್ ಮೆಡ್ವೆಡೆವ್
ಅವರ ವಿರುದ್ಧ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. 2. ಟೈಗರ್ ವುಡ್: ಕಳೆದ 2013ರಲ್ಲಿ ವಿಶ್ವ ಶ್ರೇಯಾಂಕದಲ್ಲಿ
652ರಲ್ಲಿದ್ದ ಟೈಗರ್ ವುಡ್, 11ವರ್ಷಗಳ ಬಳಿಕ ಪುಟಿದೆದ್ದು, ಇದೇ ವರ್ಷದ ಏಪ್ರಿಲ್ ನಲ್ಲಿ ಯುಎಸ್
ಮಾಸ್ಟರ್ಸ್ ನಲ್ಲಿ ಐದನೇ ಗ್ರೀನ್ ಜಾಕೆಟ್ ಪಡೆದಿದ್ದರು. ಕಳೆದ ಅಕ್ಟೋಬರ್ ನಲ್ಲಿ ಟೈಗರ್ ವುಡ್
ಜಪಾನ್‌ನಲ್ಲಿ ಝೋಝೋ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ಮಾಡಿದ್ದರು. ಜತೆಗೆ, 82ನೇ ಯುಎಸ್ ಪಿಜಿಎ
ಟೂರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ದೀರ್ಘ
ಅವಧಿಯ ಸಾಧನೆ ಮಾಡಿರುವ ಸ್ಯಾಮ್ ಸ್ನೀಡ್ ಅವರ ದಾಖಲೆಯನ್ನು ವುಡ್ ಸರಿದೂಗಿಸಿದರು. ಇತ್ತೀಚೆಗೆ ಟೈಗರ್ ವಡ್ ನಾಯಕತ್ವದ ತಂಡ ಮೆಲ್ಬೋರ್ನ್
ನಲ್ಲಿ ಪ್ರೆಸಿಡೆಂಟ್ ಕಪ್ ಗೆದ್ದಿತ್ತು. ಫೈನಲ್ ಸುತ್ತಿನಲ್ಲಿ ವುಡ್ ತಂಡ 16-14 ಅಂತರದಲ್ಲಿ ಗೆದ್ದಿತ್ತು. 3. ಲೆವಿಸ್ ಹ್ಯಾಮಿಲ್ಟನ್: ಪ್ರಸಕ್ತ ಆವೃತ್ತಿಯಲ್ಲಿ ಬ್ರಿಟಿಷ್
ಚಾಲಕ ಲೆವಿಸ್ ಹ್ಯಾಮಿಲ್ಟನ್ ಫಾರ್ಮುಲಾ ರೇಸ್
ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 2019ರಲ್ಲಿ ಆರನೇ ಫಾರ್ಮುಲಾ ಓನ್ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಅಬುದಾಬಿ ಗ್ರ್ಯಾಂಡ್ ಫ್ರಿಕ್ಸ್ ಸೇರಿದಂತೆ 2019ರಲ್ಲಿ ಒಟ್ಟು 11 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ವೃತ್ತಿಜೀವನದಲ್ಲಿ ೮೪ ಪ್ರಶಸ್ತಿ ಗೆದ್ದಿದ್ದಾರೆ. 91 ಬಾರಿ ಎಫ್-1 ಗೆದ್ದಿರುವ ಮಿಚೆಲ್ ಅವರನ್ನು
ಹಿಂದಿಕ್ಕಲು ಹ್ಯಾಮಿಲ್ಟನ್ ಗೆ ಇನ್ನೂ 7 ಗೆಲುವು ಅಗತ್ಯವಿದೆ.