ನದಾಫ, ಪಿಂಜಾರ ಸಮಾಜದ ಅಭಿವೃದ್ಧಿಗೆ ಬದ್ಧ: ಜಲೀಲ್ಸಾಬ್

ಬಾಗಲಕೋಟೆ: ದಿ.ಎಚ್.ಇಬ್ರಾಹಿಂಸಾಹೇಬರ ಕಟ್ಟಿ ಬೆಳೆಸಿರುವ ಕನರ್ಾಟಕ ರಾಜ್ಯ ನದಾಫ, ಪಿಂಜಾರ ಸಂಘವನ್ನು ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರು ಒಗ್ಗಟ್ಟಾಗಿ ಸಮಾಜದ ಸಂಘದ ಬೆಳವಣಿಗೆಗೆ ಶ್ರಮಿಸಬೇಕೆಂದು ರುವ ಕನರ್ಾಟಕ ರಾಜ್ಯ ನದಾಫ/ಪಿಂಜಾರ ಸಂಘದ ನೂತನ ರಾಜ್ಯಾಧ್ಯಕ್ಷರಾದ ಹೆಚ್.ಜಲೀಲ್ಸಾಬ್ ಅವರು ಹೇಳಿದರು.

          ಶನಿವಾರ ನವನಗರದ ಅಕ್ಷಯ ಹೋಟೆಲ್ ಸಭಾ ಭವನದಲ್ಲಿ ನಡೆದ ಜಿಲ್ಲಾ ನದಾಫ/ಪಿಂಜಾರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

        ರಾಜ್ಯದಲ್ಲಿ ನಮ್ಮ ಸಮಾಜ ಬಾಂಧವರು ಅತ್ಯಂತ ಕೆಳಸ್ಥರದಲ್ಲಿ ಬದುಕುತ್ತಿದ್ದಾರೆ ಅವರು ರಾಜಕೀಯ, ಶೈಕ್ಷಣಿಕ,ಸಾಮಾಜಿಕವಾಗಿ ಅತೀ ಹಿಂದುಳಿದವರಾಗಿದ್ದು,  ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ನದಾಫ/ಪಿಂಜಾರ ಸಮಾಜದ ಸಂಘಟನೆಯನ್ನು ಗಟ್ಟಿಗೊಳಿಸಬೇಕಿದೆ.

  ಸಮಾಜದ ಬಾಂಧವರು ಸಕರ್ಾರದ ಯೋಜನೆಗಳನ್ನು ಪಡೆದುಕೊಳ್ಳುವಂತಾಗಲು ಅರಿವು ಮೂಡಿಸುವ ಕಾರ್ಯವನ್ನು ಸಮಾಜದ ವಿದ್ಯಾವಂತರು ಮಾಡಬೇಕಿದೆ ಎಂದು ಹೇಳಿದರು.

                ನಮ್ಮ ಸಂಘ ಸ್ಥಾಪನೆಗೊಂಡು 25 ವರ್ಷಗಳಾದರೂ ನಾವು ಅಭಿವೃದ್ಧಿ ಹೊಂದದೇ ಇರುರುವುದು ನಮ್ಮ ದುರಾದೃಷ್ಠ. ಇದಕ್ಕೆ ನಾವೇ ಕಾರಣ. ನಮ್ಮಲ್ಲಿ ಸಂಘಟನಾ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ಸಂಘಕ್ಕಾಗಿ ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

          ಅತಿಥಿಗಳಾಗಿ ಆಗಮಿಸಿದ ದಾದಾ ಖಲಂದರಸಾಹೇಬರು ಮಾತನಾಡಿ ನಮ್ಮ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲ ಸಾಧ್ಯವಾದಲ್ಲಿ ಮಾತ್ರ ನಮ್ಮ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

       ನಾವು ರಾಜಕೀಯವಾಗಿ ಸಾಮಾಜಿಕವಾಗಿ ಮುಂದೆ ಬರಬೇಕು ನಾವೇಲ್ಲ ಸಂಘಟಿತರಾಗಬೇಕು. ಸಮಾಜದ ಉನ್ನತಿಗೆ ಶ್ರಮಿಸಬೇಕು. ನಮ್ಮದು ಅಲೇಮಾರಿ ಜನಾಂಗವಾಗಿದ್ದು ರಾಜ್ಯದಲ್ಲಿ 25 ಲಕ್ಷದಷ್ಟು ನದಾಫ/ಪಿಂಜಾರ ಸಮುದಾಯ ಇದ್ದು, ನಾವು ಸಂಘಟಿತರಾಗದೇ ಇರುವುದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದರು. 

            ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎಸ್.ಎಚ್.ಮುದಕವಿ ಮಾತನಾಡಿ ನದಾಫ/ಪಿಂಜಾರ ಸಮುದಾಯದ ಸಂಘಟನೆಗೆ ಹಾಗೂ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ರಾಜ್ಯದಲ್ಲಿ ಮಟ್ಟದಲ್ಲಿ ನಡೆಯುವ ಹೋರಾಟಕ್ಕೆ ನಮ್ಮ ಜಿಲ್ಲಾ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಸಮುದಾಯದ ಸಂಘಟನೆ ಮಾಡಿ ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಮನವರಿಕೆ ಮಾಡಲಾಗುವುದು ಎಂದು ಹೇಳಿದರು.

        ಗದಗ ವಿಭಾಗೀಯ ಉಪಾಧ್ಯಕ್ಷ ಪಿ.ಇಮಾಮಸಾಬ ಪ್ರಾಸ್ತಾವಿಕವಾಗಿ ಮಾತನಾಡಿ ಕನರ್ಾಟಕ ರಾಜ್ಯ ನದಾಫ/ಪಿಂಜಾರ ಸಂಘವನ್ನು ಸ್ಥಾಪಿಸಿದ ದಿ.ಹೆಚ್.ಇಬ್ರಾಹಿಂ ಸಾಹೇಬರು ಸಮುದಾಯದ ಪರ ಅಪಾರವಾದ ಕಾಳಜಿ ಹೊಂದಿದ್ದರು, ಅವರು ಸಮುದಾಯವನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸಿದ ಹಾದಿ ಬಹಳ ಕಠಿಣವಾಗಿದ್ದು, ನಾವು ನಿವೇಲ್ಲರು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯೋಣ. ಸಮಾಜದ ಪ್ರತಿಯೊಬ್ಬರಿಗೂ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದದರು.

           ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಜಲೀಲ್ಸಾಬ್, ದಾದಾ ಖಲಂದರಸಾಬ, ಬೀಳಗಿ ತಾ.ಪಂ.ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ನೂರಜಹಾನ ನದಾಫ, ಕೆಎಎಸ್ ಅಧಿಕಾರಿ ಸಾಯಿರಾಬಾನು ನದಾಫ, ಶಿಲ್ಪಿ ಅಲ್ಲಿಸಾಬ ನದಾಫ ಅವರನ್ನು ಸನ್ಮಾನಿಸಲಾಯಿತು.

        ಕಾರ್ಯಕ್ರಮದಲ್ಲಿ ಸಾದಿಕ ಕೋಲಾರ, ಚಾಂದ ನದಾಫ, ಎ.ಎ.ತಿಮ್ಮಾಪೂರ, ಸಾಹೇಬಲಾಲ ನದಾಫ, ಎಂ.ಆಯ್.ನದಾಫ, ಹುಸೇನಸಾಬ ನದಾಫ ಸೇರಿದಂತೆ ಎಲ್ಲ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಜಿಲ್ಲಾ, ರಾಜ್ಯ ಸಮಿತಿ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಹಾಜರಿದ್ದರು.

         ಶಬ್ಬೀರ ಬಳಗಾನೂರ ಕುರಾಣ ಪಠಿಸಿದರು. ಸೈದುಸಾಬ ಹೊಸಮನಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು,  ಎಲ್.ಎನ್.ನದಾಫ ವಂದಿಸಿದರು.