ನಬೀ ಹುಣಶ್ಯಾಳ ಆಯ್ಕೆ

Nabi Hunshyal elected

ದೇವರಹಿಪ್ಪರಗಿ 29: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಯುವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ನಬೀ ಹುಣಶ್ಯಾಳ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಯುವ ಸಮಿತಿ ಅಧ್ಯಕ್ಷರಾದ ಜನನಿ ವತ್ಸಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಬಗ್ಗೆ ತಮಗಿರುವ ಆಸಕ್ತಿ ಮತ್ತು ಜನಪರ ಕಾಳಜಿ ಬಗ್ಗೆ ಗಮನಿಸಿ ಪಕ್ಷವು ರಾಜ್ಯ ಯುವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಪಕ್ಷದ ಸಿದ್ಧಾಂತಗಳಿಗೆ ಅನುಗುಣವಾಗಿ ರಾಜ್ಯಾದ್ಯಂತ ಪಕ್ಷವನ್ನು ಸದೃಢವಾಗಿ ಸಂಘಟಿಸಿ ಯುವ ಜನರ ಪರವಾಗಿ ಹೋರಾಟವನ್ನು ಮತ್ತು ಕಾರ್ಯಗಳನ್ನು ಈ ಮೂಲಕ ಕೈಗೊಳ್ಳಬೇಕೆಂದು ನೂತನ ರಾಜ್ಯ ಯುವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ನಬೀ ಹುಣಶ್ಯಾಳ ಅವರಿಗೆ ಆದೇಶ ನೀಡುವ ಮೂಲಕ ರಾಜ್ಯದ್ಯಕ್ಷರು ಶುಭ ಹಾರೈಸಿದ್ದಾರೆ.ನೂತನವಾಗಿ ಆಯ್ಕೆಯಾದ ನಬೀ ಹುಣಶ್ಯಾಳ ಅವರಿಗೆ ವಿಜಯಪುರ ಜಿಲ್ಲೆಯ ಯುವ ಜನತೆ ಅಭಿನಂದಿಸಿದ್ದಾರೆ.