ಲೋಕದರ್ಶನ ವರದಿ
ಬೆಳಗಾವಿ 03: ನಗರದ ಮಂದಾರ ದೇಸೂರಕರ್ ಇವರು 2018 ರ ಸಪ್ಟೆಂಬರ 4 ರಿಂದ 8 ರವರಗೆ ಇಸ್ರೇಲ್ ನ ಎಲಿಯಟ್ ನಲ್ಲಿ ನಡೆಯಲಿರುವ ಪಿನಾ ವಿಶ್ವ ಜ್ಯೂನಿಯರ ಒಪನ್ ವಾಟರ ಸ್ವಿಮಿಂಗ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ. ಈ ಸ್ಪಧರ್ೆಯಲ್ಲಿ ಭಾರತೀಯ ತಂಡದಿಂದ ಒಟ್ಟು 11 ಸದಸ್ಯರು ಆಯ್ಕೆಯಾಗಿದ್ದು, ಅದರಲ್ಲಿ ಕನರ್ಾಟಕದ ಬೆಳಗಾವಿಯ ಮಂದಾರ ಕೂಡ ಒಬ್ಬರು. ಮಂದಾರ ಇವರು ಮಾರುತಿ ಮತ್ತು ಲಕ್ಷ್ಮಿ ದಂಪತಿಯ ಪುತ್ರರು. ಇವರು ತಮ್ಮ ಐದನೇ ವಯಸ್ಸಿನಿಂದ ಈಜು ತರಬೇತಿಗೆ ಸೇರಿಕೊಂಡಿದ್ದರು.
ಮಂದಾರ ಇವರು ಕೆ ಎಲ್ ಇ ಇಂಟರ್ ನ್ಯಾಷನಲ್ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2017 ಡಿಸೆಂಬರ 30 ಮತ್ತು 31 ರಂದು ಉಡುಪಿಯ ಮಲ್ಪೆಯಲ್ಲಿ ಆಯೋಜಿಸಿದ್ದ 1 ನೇ ನ್ಯಾಷನಲ್ ಜ್ಯೂನಿಯರ್ ಒಪನ್ ವಾಟರ್ ಸ್ವಿಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡರು. ನಂತರ ಗುಜರಾತ ಹಾಗೂ ಗೋವಾ ರಾಜ್ಯದಲ್ಲಿ ನಡೆದ ಆಲ್ ಇಂಡಿಯಾ ಓಪನ್ ವಾಟರ್ ಸ್ವಿಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡರು.
ಇವರು ಲೋಕಮಾನ್ಯ ಜಿಮ್ ಹಾಗೂ ಈಜು ತರಬೇತುದಾರರಾದ ಉಮೇಶ ಕಲಘಟಗಿ, ಪ್ರಸಾದ ತೆಂಡೋಲಕರ್, ಗುರುಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ದಿನಕ್ಕೆ 10-12 ಕಿ.ಮೀ ದೂರದವರೆಗೆ ಈಜುವುದನ್ನು ಅಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಸಂಸ್ಥೆಯ ಮುಖ್ಯಸ್ಥ ಡಾ. ಪ್ರಭಾಕರ ಕೋರೆ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.