ಮುಧೋಳ18: ರಾಷ್ಟ್ರೀಯ ಸೇವಾ ಯೋಜನೆಯು ನಿಸ್ವಾರ್ಥ ಸೇವಾ ಮನೋಭಾವನೆಯ ಒಬ್ಬ ಸ್ವಯಂ ಸೇವಕನನ್ನು ಹುಟ್ಟು ಹಾಕುತ್ತದೆ, ಶಿಬಿರದಲ್ಲಿ ಅನುಭವಿಸಿದ ಕೌಶಲ್ಯ, ಜೀವನ ಪಾಠ ಭವಿಷ್ಯದ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ, ನಾವು ಭಾರತೀಯರಾಗಿದ್ದುಕೊಂಡು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಳ್ಳಬೇಕು, ಹಾಗೆಯೇ ಭಾರತೀಯ ಶಿಕ್ಷಣ ಕ್ರಮವನ್ನು ಅರಿತುಕೊಳ್ಳುವುದರೊಂದಿಗೆ ಶಿಸ್ತುಬದ್ದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ಪ್ರಜೆಯಾಗಲು ಎನ್.ಎಸ್.ಎಸ್ ಸಹಕಾರಿಯಾಗಲಿದೆ ತಹಶೀಲ್ದಾರ ಸಂಗಮೇಶ ಬಾಡಗಿ ಹೇಳಿದರು.
ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಜ.16ರಿಂದ 22ರ ವರೆಗೆ ತಾಲೂಕಿನ ಉತ್ತೂರ ಗ್ರಾಮದಲ್ಲಿ ಹಮ್ಮಿ ಕೊಂಡಿರುವ ಎನ್ಎಸ್ಎಸ್ ವಾರ್ಷಿಕ ಸೇವಾ ಶಿಬಿರ 2019-20 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂದೀಜಿಯವರ ಕನಸಿನ ಕೂಸು ಇದರಿಂದ ಗ್ರಾಮಗಳ ಉದ್ದಾರ ಸಾಧ್ಯ ಮತ್ತು ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ ಹೊಂದಬಹುದು ಏಕೆಂದರೆ ಮಹಾತ್ಮ ಗಾಂಧೀಜಿಯವರು ಮತ್ತು ಸ್ವಾಮಿ ವಿವೇಕಾನಂದರು ತಮ್ಮ ವ್ಯಕ್ತಿತ್ವ ವಿಕಸನವನ್ನು ಬೆಳೆಸಿಕೊಳ್ಳಲು ಯಾವುದೇ ತರಬೇತಿ ಕೇಂದ್ರಗಳು ಇದ್ದಿದಿಲ್ಲಾ ಅವರು ಇಂತಹ ಸಮೂಹ ಗಳೊಂದಿಗೆ ಕೂಡಿ ಜಗತ್ ಪ್ರಸಿದ್ಧ ವ್ಯಕ್ತಿಗಳಾಗಿ ಬಾಳಿದರು, ಶಿಬಿರಾರ್ಥಿಗಳು ಸಹ ಇತಂಹ ವ್ಯಕ್ತಿತ್ವ ವಿಕಸನ ಹೊಂದಲು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮವು ಉಪಯುಕ್ತವಾದದು ಇದರ ಪ್ರಯೋಜನ ವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿದ್ದ ಎಸ್.ಆರ್.ಕಂಠಿ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ತ್ಯಾಗ ಮತ್ತು ನಿಸ್ವಾರ್ಥ ಸೇವೆಯಿಂದ ದುಡಿದರೆ ಮಾತ್ರ ಅದು ಸಮಾಜ ಸೇವೆಯೆಂದು ತಿಳಿಯಬಹುದು,ಈ ಎರಡು ಅಸಗಳು ಕೇವಲ ರಾಷ್ಟ್ರೀಯ ಸೇವಾ ಯೋಜನೆ ಯಿಂದ ಮಾತ್ರ ಸಾಧ್ಯ, ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುವುದರಿಂದ ನಾವೆಲ್ಲರೊಂದೆ ಎಂಬ ಭಾವನೆ ಬೆಳೆಯುತ್ತದೆ ಮತ್ತು ಜನರ ಸಮಸ್ಯಯನ್ನು ತಿಳಿಯಬಹುದು,ಶ್ರಮವು ಶಾಶ್ವತವಾಗಿ ಉಳಿಯುವಂತ ಕಾರ್ಯಗಳನ್ನು ಹಮ್ಮಿಕೊಂಡು ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಬೇಕು ಮತ್ತು ನಿಮ್ಮಿಂದ ಸಮಾಜಕ್ಕೆ ಏನನ್ನಾದರು ಸಲ್ಲಿಸುವುದಿದ್ದರೆ ಅದು ಕೇವಲ ರಾಷ್ಟ್ರೀಯ ಸೇವಾ ಯೋಜನೆಯಿಂದ ಮಾತ್ರ ಸಾಧ್ಯ ಹಾಗೂ ಮಹಾತ್ಮ ಗಾಂಧೀಜಿ ಯವರು ಹೇಳಿದಂತೆ ದೇಶಗಳ ಭವಿಷ್ಯವು ಕೇವಲ ಹಳ್ಳಿಗಳಿಂದ ಕೂಡಿದೆ ಅವುಗಳ ಉದ್ದಾರವು ಇಂತಹ ಯೋಜನೆಯಿಂದ ಮಾತ್ರ ಸಾಧ್ಯವಾಗಲಿವೆ ಎಂದರು.
ಪ್ರಾಚಾರ್ಯ ಡಾ.ಎನ್.ಎಂ.ತೋಟದ ಅಧ್ಯಕ್ಷತೆವಹಿಸಿ ಮಾತನಾಡಿದರು, ನೂರಂದಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು, ವಕೀಲ ಎಸ್.ಡಿ.ಚಿನಿವಾಲ, ಜಿ.ಪಂ ಸದಸ್ಯೆ ಕವಿತಾ ತಿಮ್ಮಾಪೂರ, ಗ್ರಾ.ಪಂ ಅಧ್ಯಕ್ಷೆ ಮಲ್ಲವ್ವ ಚಿಗರಿ,ಪೀಕಾರ್ಡ ಬ್ಯಾಂಕ್ ಮಾಜಿ ಅಧ್ಯಕ್ಷ ಸದಾಶಿವ ಪೋತರಡ್ಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಕಣ್ಣ ಮಾಯಪ್ಪನವರ, ಹಣಮಂತ ಗಿರಗಾಂವಿ, ಪತ್ರಕರ್ತ ವ್ಹಿ.ಎಸ್.ಮುನವಳ್ಳಿ, ದೈಹಿಕ ನಿದರ್ೇಶಕ ಎ.ವೈ.ಮುನ್ನೋಳ್ಳಿ ಅತಿಥಿ ಸ್ಥಾನವಹಿಸಿದ್ದರು.
ಎನ್ಎಸ್ಎಸ್ ಶಿಬಿರಾಧಿಕಾರಿ ಪ್ರೊ.ಎಸ್.ಎನ್.ರಾಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸ್ವ-ಆಥರ್ಿಕ ಘಟಕದ ಶಿಬಿರಾಧಿಕಾರಿ ಪ್ರೊ.ಎಸ್.ಜಿ.ಅಂಟಿನ ಸ್ವಾಗತಿಸಿದರು, ಪ್ರೊ.ಎ.ಎಂ.ಖಾನಾಪೂರ ಅತಿಥಿಗಳನ್ನು ಪರಿಚಯಿಸಿದರು, ಪ್ರೊ.ಎ.ಎನ್.ಬಾಗೇವಾಡಿ ವಂದಿಸಿದರು,ಪ್ರಾಪ್ತಿ ನಲವಾಡೆ ಪ್ರಾರ್ಥನೆ ಹೇಳಿದರು. ಅಕ್ಷತಾ ಬಿಸನಾಳ ಸಂಗಡಿಗರು ಎನ್ಎಸ್ಎಸ್ ಗೀತೆ ಹೇಳಿದರು.