ಲೋಕದರ್ಶನ ವರದಿ
ಅಲಾರವಾಡದಲ್ಲಿ ಆರಿ್ಪಡಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಶಿಬಿರ
ಬೆಳಗಾವಿ 03: ಸೌತ್ ಕೊಂಕಣಿ ಶಿಕ್ಷಣ ಸಂಸ್ಥೆಯ ಆರಿ್ಪಡಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕವು ಏಪ್ರಿಲ್, 1ರಿಂದ 7ರವರೆಗೆ ಬೆಳಗಾವಿಯ ಅಲಾರವಾಡ ಗ್ರಾಮದಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ಆಯೋಜಿಸಿದೆ. ಇದು ಸ್ವಯಂಪ್ರೇರಿತ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಪಾತ್ರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮುಖ್ಯ ಉದ್ದೇಶವು ಈ ವಿಶೇಷ ಶಿಬಿರದ್ದಾಗಿದೆ ಎಂದು ಶಿಬಿರದ ಯೋಜನಾಧಿಕಾರಿಗಳು ತಿಳಿಸಿದರು.
ಶಿಕ್ಷಣ, ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಸಾಧಿಸಲು ಭವ್ಯ ಭಾರತಕ್ಕಾಗಿ ಯುವಕರು ಸಬಲಗೊಳ್ಳಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಅದಕ್ಕೆ ತಕ್ಕಂತೆ ಕಾರ್ಯಗಳನ್ನು ಕೈಕೊಳ್ಳಲು ಪ್ರೋತ್ಸಾಹಿಸುವುದು ಶಿಬಿರದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಧ್ಯಾನ ಮತ್ತು ವ್ಯಾಯಾಮದ ಮಹತ್ವ ಆಧುನಿಕ ವಿದ್ಯಮಾನಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಉದ್ಯೋಗ ಮತ್ತು ಸ್ವಾವಲಂಬನೆಯ ಬಗೆಗಳು ಮೈ ಭಾರತ ಮತ್ತು ವಿಕಸಿತ ಭಾರತ ಪೋರ್ಟಲ್‌ಗಳ ಕುರಿತ ಮಾಹಿತಿ ಪತ್ರಿಕೋದ್ಯಮದ ಜೊತೆಗೆ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ತೊಡಗುವ ಬಗೆ, ದೇಶದ ಅಭಿವೃದ್ಧಿಯಲ್ಲಿ ಸಂವಿಧಾನಾತ್ಮಕ ನೆಲೆಗಳು ಇತ್ಯಾದಿ ವಿಷಯಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಶಿಬಿರದಲ್ಲಿ ಅಳವಡಿಸಲಾಗಿದೆ. ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಪ್ಲಾಸ್ಟಿಕ್ ವಿರೋಧಿ ಪ್ರಚಾರ ಮತ್ತು ಸುತ್ತಮುತ್ತಲಿನ ಪ್ರಕೃತಿಯನ್ನು ರಕ್ಷಿಸುವುದು, ದೇವಾಲಯಗಳು ಮತ್ತು ಶಾಲೆಗಳನ್ನು ಸ್ವಚ್ಛಗೊಳಿಸುವುದು, ಆರೋಗ್ಯ ತಪಾಸಣೆ ಶಿಬಿರಗಳು, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಕೊಳ್ಳುವ ಕಾರ್ಯ ನಡೆಯುತ್ತದೆ. ವಿದ್ಯಾರ್ಥಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವಂತೆ ಮಾಡುವುದರ ಮೂಲಕ ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಶಿಬಿರವು ಪ್ರಯತ್ನಿಸುತ್ತದೆ ಅಲ್ಲದೆ ಇದು ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳನ್ನು ಪೂರೈಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿಪಡಿಸಲು ಅವರಿಗೆ ಸಹಾಯ ಮಾಡುತ್ತದೆ. ಎಂದು ಶಿಬಿರದ ಯೋಜನಾಧಿಕಾರಿಗಳು ವಿವರಣೆ ನೀಡಿದ್ದಾರೆ.
2025ರ ಏಪ್ರಿಲ್ 1ರಂದು ಈ ಶಿಬಿರದ ಉದ್ಘಾಟನೆಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಅಧಿಕಾರಿ ಡಾ.ಕನಕಪ್ಪ ಪೂಜಾರ್ ಮತ್ತು ಬೆಳಗಾವಿಯ ನೋಡಲ್ ಅಧಿಕಾರಿ ಬಸವರಾಜ ಮೊದಗೇಕರ ಅವರು ನೆರವೇರಿಸಿದರು.
ಆರಿ್ಪಡಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಕೃಷ್ಣ ಎನ್. ಅವರು ಯೋಗ ಧ್ಯಾನ ಮತ್ತು ವ್ಯಾಯಾಮದ ಮಹತ್ವದ ಕುರಿತು ಮೊದಲ ದಿನ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಅಭಯ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಆರಿ್ಪಡಿ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ.ಇಂದಿರಾ ಹೋಳ್ಕರ ಮತ್ತು ಶಿಬಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.