ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಎನ್‌.ಆರ್‌.ಎಲ್‌.ಎಂ.ಯೋಜನೆ ಪೂರಕ: ಗವಳಿ

NRLM Scheme Supplement for Women's Economic Empowerment: Gawali

ತಾಳಿಕೋಟಿ  9 : ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಎನ್ ಆರ್ ಎಲ್ ಎಂ ಯೋಜನೆ ಬಹಳ ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಯಾಗಿದೆ ಈ ಯೋಜನೆಯಡಿ ಮಹಿಳೆಯರಿಗೆ ಉತ್ತಮ ಆರ್ಥಿಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅಮೋಘ ಗವಳಿ ಹೇಳಿದರು.

ತಾಲೂಕಿನ ಬ.ಸಾಲವಾಡಗಿ ಗ್ರಾಮದ ಗ್ರಾಮ ಪಂಚಾಯತ್ ಕಾರ್ಯಾಲಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಮಾರ್ಚ-08 ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ-2025 ಪ್ರಯುಕ್ತ" ಎನ್ ಆರ್‌.ಎಲ್‌.ಎಮ್ ಯೋಜನೆಯಡಿ ವಿಶೇಷ "ಸಂಜೀವಿನಿ"- ಮಾಸಿಕ ಸಂತೆ ಮೇಳ ಹಾಗೂ ಆರ್ಥಿಕ ಸಾಕ್ಷರತೆ-ಸಕ್ಷಮ್ ಕೇಂದ್ರದ ಉದ್ಗಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಜೀವನ ನಡೆಸಲು ಸಾಲದ ರೂಪದಲ್ಲಿ ಅಋ ಹಣ ನೀಡುವುದರೊಂದಿಗೆ ಅವರ ಉದ್ಯಮ ಚಟುವಟಿಕೆ ಮತ್ತು ಸ್ವತಃ ವ್ಯಾಪಾರ ವಹಿವಾಟು ಮಾಡಲು ಬ್ಯಾಂಕ್ ವ್ಯವಹಾರ, ಆರ್ಥಿಕ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುತ್ತದೆ ಎಂದ ಅವರು ಮಹಿಳೆಯರು ಸಂಘದಲ್ಲಿ ಸೇರೆ​‍್ಡ ಆಗುವುದರಿಂದ ಮತ್ತು ಸಂಘದ ಸಭೆ,ತರಬೇತಿ ಭಾಗವಹಿಸುವುದರಿಂದ ಸರ್ಕಾರದ 10 ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ದೊರಕುತ್ತಿದೆ, ಇದರಿಂದ ಮಹಿಳೆಯರು ಮನೆಯಿಂದ ಹೊರ ಬಂದು ತಾವು ಎಲ್ಲಾ ರೀತಿಯಲ್ಲಿ ಕೆಲಸ ಕಾರ್ಯ ಮಾಡಲು ಅನೂಕೂಲವಾಗಿದೆ, ಇನ್ನೂ ಹೆಚ್ಚು ಹೆಚ್ಚು ಸಂಘ ರಚನೆ ಮಾಡಲು ಮತ್ತು ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ತಿಳಿಸಲು ಆರ್ಥಲ ಸಾಕ್ಷರತಾ ಕೇಂದ್ರ- ಸಕ್ಷಮ್ ಸೆಂಟರ್ ಬಹಳ ಸಹಕಾರಿಯಾಗಿದೆ ಎಂದರು. 

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಓಖಐಒ ಯೋಜನೆಯಡಿ ಸಾವಿರಾರು ಕೋಟಿಗಳ ಅನುದಾನ ನೀಡುತ್ತಿದ್ದು, ಮಹಿಳೆಯರಿಗೆ ಸ್ವಂತ ಊರಿನಲ್ಲಿ ಕೆಲಸ ನಿರ್ವಹಣೆ ಮಾಡಲು ಹತ್ತು ಹಲವಾರು ಹುದ್ದೆಗಳನ್ನು ಸಹ ಹುಟ್ಟು ಹಾಕಿದೆ.MBK/LCRL/KS/PS/BC Shaki/FLCRP/BRP-EP/ನಲ್ ಜಲ್ ಮಿತ್ರರು, ಮಹಿಳಾ ಡ್ರೈವರ್ ಕಸ ವಿಂಗಡಣಗಾರರು ಹೀಗೆ ಎಲ್ಲಾ ತರನಾದ ಹುದ್ದೆಗಳನ್ನು ಓಖಐಒ ಯೋಜನೆಯಡಿ ನಿರ್ಮಿಸಿ ಆಯಾ ಕೆಲಸಕ್ಕೆ ತಕ್ಕಂತೆ ಮಹಿಳೆಯರಿಗೆ ಗೌರವಧನ ನಿಗದಿಮಾಡಿ ಎಲ್ಲಾ ಸರ್ಕಾರಿ ಕೆಲಸಕಾರ್ಯಗಳನ್ನು ಮಹಿಳೆಯರಿಂದ ಮಾಡಿಸಿ ಗೌರವಧನ ಕೊಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು.ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರರಾದ ಪ್ರವೀಣ ಕುಮಾರ್ ಗೊಳಸಂಗಿ ಅವರು ಸ್ವಸಹಾಯ ಸಂಘದ ಮಹಿಳೆಯರಿಗೆ ಬಿ ಸಾಲವಾಡಗಿ ಗ್ರಾಮಸ್ಥರಿಗೆ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಿಗೆ "ಸಾಮಾಜಿಕ ಭದ್ರತಾ ಜೀವ ವಿಮೆಗಳ" ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು..ಕೇವಲ 20 ಮತ್ತು 436  PMJJBY/PMSBU/APY ಅಟಲ್ ಪಿಂಚಣಿ ಯೋಜನೆ ಮಾಟಿಕೊಳುವುದರಿಂದ ಮತ್ತು ವಿಮೆಗಳು ಮಾಡಿಕೊಳ್ಳುವುದರಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು, ಜೋತೆಗೆ ಸೈಬರ್ ಅಪರಾಧಗಳು ಬ್ಯಾಂಕಿಗ್ ಪ್ರಾರ್ಡ ಪೋನ ಕರೆಗಳ ವಂಚಕರಿಂದ ನಮ್ಮ ಖಾತೆಯಲ್ಲಿ ಹಣ ಯಾವ ರೀತಿ ಸುರಕ್ಷಿತೆ ಮಾಡಿಕೊಳ್ಳಬೇಕು ಮತ್ತು ಸಹಾಯಕ ದೂರವಾಣಿ ನಂ 1930 ಬಳಸಿ ಸೈಬರ್ ಅಪರಾಧ ತಡೆಗಟ್ಟುವ ಕ್ರಮದ ಕುರಿತು ಮಾಹಿತಿ ನೀಡಿದರು.

ಹಾಗೆ ರುಡಸೆಟ್ ಸಂಸ್ಥೆಯಲ್ಲಿ ಬೆಸಿಗೆ ರಜೆ ಸಂಧರ್ಭದಲ್ಲಿ ಮಹಿಳೆಯರಿಗೆ ಗ್ರಾಮೀಣ ಭಾಗದ ನಿರುದ್ಯೋಗ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಗಳ ಬಗ್ಗೆ ಮಹಿಳೆಯರಿಗೆ ಬ್ಯೂಟಿಪಾರ್ಲರ್ ಟೇಲರಿಂಗ್, ಅಣಬೇ ಬೇಸಾಯ ತರಬೇತಿ ಮತ್ತು ಹತ್ತು ಹಲವಾರು ತರಬೇತಿ 15 ದಿನಗಳ ಕಾಲ1 ತಿಂಗಳುಗಳ ಕಾಲ ಊಚಿತ ಊಟ/ವಸತಿಯೊಂದಿಗೆ  NRLM  ಯೋಜನೆಯಡಿ ರುಡಸೆಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ನೀಡಲಾಗುತ್ತದೆ ಎಂದು ಅಮೋಘ ಗವಳಿ ಜಿಲ್ಲಾ ಪಂಚಾಯತ ಓಖಐಒ ವ್ಯವಸ್ಥಾಪಕರು ಮಾಹಿತಿ ನೀಡಿದರು. ಬಿ.ಸಾಲವಾಡಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರಿಬಾಯಿ ದೇ. ಬಿದರಕುಂದಿ ಹಾಗೂ ಉಪಾಧ್ಯಕ್ಷೆ ಸವೀತಾ ಸಾ.ಗುಡಗಂಟಿ ಕಾರ್ಯಕ್ರಮ ಉದ್ಘಾಟಿಸಿದರು.ಪಂಚಾಯತಿ ಕಾರ್ಯದರ್ಶಿ ಎಸ್‌.ಜಿ. ಅಲ್ಲಾಪೂರ ತಾಳಿಕೋಟಿ ತಾಲೂಕಿನ NRLM ವಲಯ ಮೇಲ್ವಿಚಾರಕ ಯಶವಂತ ಕಲಾಲ, ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರ ಪ್ರವೀಣಕುಮಾರ ಗೊಳಸಂಗಿ ಮನರೇಗಾ ಯೋಜನೆಯ ತಾಲೂಕಾ ಐಇಸಿ ಸಂಯೋಜಕ ಮಲಕಪ್ಪ, ಬಿ.ಸಾಲವಾಡಗಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದMBK/LCRP/KS/PS/FLCRP/ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.