ಶ್ರೀನಗರ, ಫೆ 17, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಆಗಸ್ಟ್ 5 ರಿಂದ ಹೈಸ್ಪೀಡ್ ಇಂಟರ್ ನೆಟ್ ಮತ್ತು ಬ್ರಾಡ್ಬ್ಯಾಂಡ್ ಸೇವೆಗಳ ಸ್ಥಗಿತ ಮುಂದುವರೆದಿದೆ.ಆದರೂ, ಎಲ್ಲ ಮೊಬೈಲ್ ಸೇವಾ ಕಂಪನಿಗಳ ಪ್ರೀ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ನ 2 ಜಿ ಇಂಟರ್ ನೆಟ್ ಸೇವೆ ಮುಂದುವರೆದಿದೆ. ಆದರೆ ಕೇಂದ್ರಾಡಳಿತ ಪ್ರದೇಶ ಅನುಮೋದಿಸಲ್ಪಟ್ಟಿರುವ ಸೈಟ್ಗಳನ್ನು ಬಳಕೆ ಮಾಡಬಹುದಾಗಿದೆ. ಹೈಸ್ಪೀಡ್ ಇಂಟರ್ ನೆಟ್ ಮತ್ತು ಬ್ರಾಡ್ಬ್ಯಾಂಡ್ ಸೇವೆ ಪುನರಾರಂಭದ ಬಗ್ಗೆ ಶನಿವಾರ ನಡೆದ ವಾರದ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಮುಂದಿನ ವಾರ ಮೊಬೈಲ್ ಫೋನ್ಗಳಲ್ಲಿ 2 ಜಿ ಇಂಟರ್ ನೆಟ್ ಸೇವೆಯನ್ನು ಮುಂದುವರಿಸಲು ಸಭೆ ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ವಾರದ ಪರಿಶೀಲನಾ ಸಭೆ ನಡೆಯುತ್ತಿದೆ. ಆದರೂ ಈಗಾಗಲೇ ಬಿಳಿಪಟ್ಟಿಯಲ್ಲಿರುವ 300 ಸೈಟ್ಗಳ(ಜಾಲತಾಣಗಳು) ಪಟ್ಟಿಗೆ ವೆಬ್ಸೈಟ್ಗಳನ್ನು ಸೇರಿಸಿದೆ. ವಿಪಿಎನ್ ದುರುಪಯೋಗದ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಜಾಲ ತಾಣಗಳ ಮೇಲೆ ನಿಷೇಧ ಮುಂದುವರೆದಿದೆ. ಸಾಮಾಜಿಕ ಮಾಧ್ಯಮ ತಾಣಗಳ ಮೌಲ್ಯಮಾಪನಕ್ಕಾಗಿ ವಿಪಿಎನ್ ಬಳಸುತ್ತಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಎಚ್ಚರಿಸಿದೆ. 2 ಜಿ ಇಂಟರ್ ನೆಟ್ ಸೇವೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಕಡಿಮೆ ವೇಗದಿಂದ ಮೇಲ್ ಗಳನ್ನೂ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಆಗಸ್ಟ್ 5 ರಿಂದ ಕಾಶ್ಮೀರ ಕಣಿವೆಯಲ್ಲಿ ಹೈಸ್ಪೀಡ್ ಇಂಟರ್ ನೆಟ್ ಮತ್ತು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸೇವೆ ಸ್ಥಗಿತಗೊಂಡಿದೆ.