ಎನ್‌.ಎಂ.ಎಂ.ಎಸ್‌. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತರಬೇತಿ

 ಎನ್‌.ಎಂ.ಎಂ.ಎಸ್‌. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತರಬೇತಿ NMMS students get training for exams

ಲೋಕದರ್ಶನ ವರದಿ 

ಎನ್‌.ಎಂ.ಎಂ.ಎಸ್‌. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತರಬೇತಿ      

ಧಾರವಾಡ 27: ‘ಮಕ್ಕಳ ಪ್ರತಿಭೆಗೆ ಮಾನ್ಯತೆ ನೀಡುವುದು ಎನ್‌ಎಂಎಂಎಸ್ ಪರೀಕ್ಷೆಯ ಉದ್ದೇಶವಾಗಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ವಿದ್ಯಾರ್ಥಿವೇತನ ಬರುತ್ತದೆ ಹಾಗೂ ಜ್ಞಾನ ವೃದ್ದಿಯಾಗುತ್ತದೆ  ಎಂದು ಪ್ರಾಚಾರ್ಯರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ಬಸವರಾಜ ನಾಲತವಾಡ ಹೇಳಿದರು. 

ಬಿಆರಸಿ ಧಾರವಾಡ ಗ್ರಾಮೀಣ ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ಪರೀಕ್ಷೆಯ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಾ ‘ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆಯಿದೆ. ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಬೇಕು. ತಾಲ್ಲೂಕಿನಿಂದ ಅತಿಹೆಚ್ಚಿನ ಮಕ್ಕಳು ಈ ಪರೀಕ್ಷೆಗಳಲ್ಲಿ ಸಾಧಕರಾಗಿ ಹೊರಹೊಮ್ಮಲು ತರಬೇತಿ ನೀಡಿ. ಶಾಲಾ ಮಕ್ಕಳಲ್ಲಿ ಈ ಪರೀಕ್ಷೆಗಳ ಭಯ ಹೋಗಲಾಡಿಸಲು ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಮಕ್ಕಳು ತರಬೇತಿಯ ಪ್ರಯೋಜನ ಪಡೆದು ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆಯಬೇಕು’ ಎಂದರು. 


ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಮಾತನಾಡಿ ವಿದ್ಯಾರ್ಥಿಗಳ ಜ್ಞಾನಕ್ಕೆ ಪೂರಕವಾದ ಪರೀಕ್ಷೆಯೇ ಎನ್‌.ಎಂ.ಎಂ.ಎಸ್‌. ಎಂದರು. 2008 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಜಾರಿಗೊಳಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 8 ನೇ ತರಗತಿಯಿಂದ ಹೊರಗುಳಿಯುವುದನ್ನು ತಡೆಯಲು ಮತ್ತು ದ್ವಿತೀಯ ಹಂತದಲ್ಲಿ ಅಧ್ಯಯನವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿವೇತನವನ್ನು ನೀಡುವುದು ಯೋಜನೆಯ ಉದ್ದೇಶವಾಗಿದೆ. ವಿದ್ಯಾರ್ಥಿ ವೇತನ ರೂ. ರಾಜ್ಯ ಸರ್ಕಾರ, ಸರ್ಕಾರಿ ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ವರ್ಷಕ್ಕೆ 12000/- (ತಿಂಗಳಿಗೆ ರೂ. 1000/-) ನೀಡಲಾಗುತ್ತದೆ ಎಂದರು. 


ಪ್ರಾಚಾರ್ಯರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ಬಸವರಾಜ ನಾಲತವಾಡ, ಉಪ- ಪ್ರಾಚಾರ್ಯರಾದ ಜೆ ಜಿ ಸೈಯದ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಉಪನ್ಯಾಸಕರು ಹಾಗೂ ಜಿಲ್ಲಾ ಎನ್ ಎನ್ ಎಮ ಎಸ್ ನೋಡಲ್ ಅಧಿಕಾರಿಯಾದ ಮೇನಕಾ ಮಠದ ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ. ಎಫ್‌. ಶಿಕ್ಷಣ ಸಂಯೋಜಕರಾದ  ಹಾಗೂ ತಾಲೂಕ  ಎನ್ ಎನ್ ಎಮ ಎಸ್ ನೋಡಲ್ ಅಧಿಕಾರಿಯಾದ ಶ್ರೀಕಾಂತ್ ಗೌಡ್ರ,  ಸಿ ಎಮ ಲಾಳನವರ, ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರಾದ  ಎ ಎಚ್ ನದಾಫ, ಸುಭಾಸ ತಿಗಡೋಳ್ಳಿ,ಸಂನ್ಮೂಲ ವ್ಯಕ್ತಿಗಳಾದ ಶ್ರೀಪಾದ್ ಗೊಂಬಿ, ಕಾಶೀರಾಜ್ ,ಬಸವರಾಜ್ ಕರೂರ್ ತಾಲೂಕಿನಿಂದ ಆಗಮಿಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. 

      

ಪೋಟೊ ಕ್ಯಾಪ್ಷನ್‌: ಪ್ರಾಚಾರ್ಯರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡದ ಬಸವರಾಜ ನಾಲತವಾಡ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಮಾತನಾಡುತ್ತಿರುವುದು. ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವುದು.