ಎನ್.ಎಂ.ಎಂ.ಎಸ್. ಪರೀಕ್ಷಾ ಫಲಿತಾಂಶ ಸುಧಾರಣೆಗೆ ತರಬೇತಿ
NMMS Training to improve exam results
ಲೋಕದರ್ಶನ ವರದಿ
ಅಳ್ನಾವರ 31; ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಜ್ಞಾನಕ್ಕೆ ಪೂರಕವಾದ ಪರೀಕ್ಷೆಯೇ ಎನ್.ಎಂ.ಎಂ.ಎಸ್ ಆಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಕುಮಾರ್.ಕೆ.ಎಫ್ ಹೇಳಿದರು.
ಎಇಎಸ್ ಎ,ಸಿ, ಹಿರೇಮಠ ಆಂಗ್ಲ ಮಾಧ್ಯಮ ಅಳ್ನಾವರ ಇವರ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಅಳ್ನಾವರ ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ಪರೀಕ್ಷೆಯ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಶ್ಯವಿರುವ ಸೃಜನಶೀಲತೆಯನ್ನು ಕಲಿಯಲು ಎನ್.ಎಂ.ಎಂ.ಎಸ್. ಪರೀಕ್ಷೆ ಸಹಾಯವಾಗುತ್ತದೆ. "ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆಯಿದೆ ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಬೇಕು. ತಾಲ್ಲೂಕಿನಿಂದ ಅತಿ ಹೆಚ್ಚಿನ ಮಕ್ಕಳು ಈ ಪರೀಕ್ಷೆಗಳಲ್ಲಿ ಸಾಧಕರಾಗಿ ಹೊರಹೊಮ್ಮಲು ತರಬೇತಿ ನೀಡಿ. ಶಾಲಾ ಮಕ್ಕಳಲ್ಲಿ ಈ ಪರೀಕ್ಷೆಗಳ ಭಯ ಹೋಗಲಾಡಿಸಲು ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಮಕ್ಕಳು ತರಬೇತಿಯ ಪ್ರಯೋಜನ ಪಡೆದು ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆಯಬೇಕು"ಎಂದರು.
ಶಿಕ್ಷಣ ಸಂಯೋಜಕರಾದ ಹಾಗೂ ತಾಲೂಕ ಎನ್ ಎನ್ ಎಮ ಎಸ್ ನೋಡಲ್ ಅಧಿಕಾರಿಯಾದ ಶ್ರೀಕಾಂತ್ ಗೌಡ್ರ ಮಾತನಾಡುತ್ತಾ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಹಾಗೂ ಎನ್.ಸಿ.ಇ.ಆರ್.ಟಿ ದೆಹಲಿ ಇವರು ಪ್ರತಿವರ್ಷ ಎಂಟನೆಯ ತರಗತಿ ವಿದ್ಯಾರ್ಥಿಗಳಿಗೆ (NMMS) ನಡೆಸುತ್ತಾರೆ. ಈ ಪರೀಕ್ಷೆಯಲ್ಲಿ 2 ಭಾಗಗಳಿರುತ್ತದೆ- ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ(GMAT) ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆ (GMAT). ಇಲ್ಲಿ ನೀಡುವ ಪ್ರಶ್ನೆಗಳ ವಿಷಯ, ವಿಧಾನ ಹಾಗೂ ಕೌಶಲಗಳನ್ನು ವಿದ್ಯಾರ್ಥಿಗಳು ಶಾಲಾ ಪಠ್ಯಪುಸ್ತಕಗಳಿಂದ ಕಲಿತಿರುವುದಿಲ್ಲ. ಹೀಗಾಗಿ ಈ ಪರೀಕ್ಷೆಯನ್ನು ಎದುರಿಸಲು ಪ್ರತ್ಯೇಕ ತರಬೇತಿ, ಅಭ್ಯಾಸ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ವೇಗ ಮತ್ತು ನಿಖರತೆ ಈ ಪರೀಕ್ಷೆಯ ಯಶಸ್ಸಿಗೆ ಬಹಳ ಮುಖ್ಯ ಎನ್‌ಎಂಎಂಎಸ್ ಪರೀಕ್ಷೆ ಗೈರುಹಾಜರಿ ತಡೆಗಟ್ಟಲು ಮತ್ತು ಮಾಧ್ಯಮಿಕ ಹಂತದಲ್ಲಿ ಅವರ ಶಿಕ್ಷಣವನ್ನು ಮುಂದುವರಿಸಲು ಹಾಗೂ ಪ್ರೋತ್ಸಾಹಿಸಲು ವಿದ್ಯಾರ್ಥಿವೇತನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದರು. ಎನ್.ಎಂ.ಎಂ.ಎಸ್ ಎಂದರು. ಇದನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿವೇತನವು ರಾಜ್ಯ ಸರ್ಕಾರ, ಸರ್ಕಾರಿ ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ವರ್ಷಕ್ಕೆ 12000/-(ತಿಂಗಳಿಗೆ ರೂ. 1000/-) ನೀಡಲಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಕುಮಾರ್.ಕೆ.ಎಫ್, ಎಇಎಸ್ ಎ,ಸಿ,ಹಿರೇಮಠ ಆಂಗ್ಲ ಮಾಧ್ಯಮ ಅಳ್ನಾವರ ಮುಖ್ಯಾಧ್ಯಾಪಕರಾದ ಶೋಭಾ ದೇಸಾಯಿ ಸಂಯೋಜಕರಾದ ಹಾಗೂ ತಾಲೂಕ ಎನ್ ಎನ್ ಎಮ ಎಸ್ ನೋಡಲ್ ಅಧಿಕಾರಿಯಾದ ಶ್ರೀಕಾಂತ್ ಗೌಡ್ರ, ಸಿ ಎಮ ಲಾಳನವರ,NMMS ಸಂಪನ್ಮೂಲ ವ್ಯಕ್ತಿಗಳಾದ ಶ್ರೀಪಾದ ಗೊಂಬಿ, ಬಸವರಾಜ ಕರೂರ, ಸುಧಾ ಜೋಶಿ ತಾಲೂಕಿನಿಂದ ಆಗಮಿಸಿದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಉಪಸ್ಥಿತರಿದ್ದರು.
ಎಇಎಸ್ ಎ,ಸಿ,ಹಿರೇಮಠ ಆಂಗ್ಲ ಮಾಧ್ಯಮ ಅಳ್ನಾವರ ಮುಖ್ಯಾಧ್ಯಾಪಕರಾದ ಶೋಭಾ ದೇಸಾಯಿ ಸ್ವಾಗತಿಸಿದರೆ. ಸುಧಾ ಜೋಶಿ ನಿರುಪಿಸಿ ವಂದಿಸಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 