ಬಳ್ಳಾರಿ,ಏ.03: ಕೋವಿಡ್-19ನ ಈ ಸಂಕಷ್ಟದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್ಎಂಡಿಸಿ ಲಿಮಿಟೆಡ್ ತನ್ನ ಸಿಎಸ್ಆರ್ ನಿಧಿ ಅಡಿ 60 ಲಕ್ಷ ರೂ.ದೇಣಿಗೆಯನ್ನು ನೀಡಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ಟಿಬಿ ಸ್ಯಾನಿಟೋರಿಯಂನಲ್ಲಿ ಆಕ್ಸಿಜನ್ ಲೈನ್ ವಿಸ್ತರಣೆ, ಹಾಸಿಗೆಗಳ ಖರೀದಿಗಾಗಿ ಇದನ್ನು ನೀಡಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಶುಕ್ರವಾರ ಚೆಕ್ ಎನ್ಎಂಡಿಸಿ ಜನರಲ್ ಮ್ಯಾನೇಜರ್ ಸಂಜೀವ್ ಸಾಹಿ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಬಿ.ಎನ್.ದಾಶ್(ಜೆಜಿಎಂ), ಜೋಸೆಯ್ ಥಾಮಸ್(ಡಿಜಿಎಂ ಸಿಎಸ್ಆರ್), ಎಸ್.ಕೆ.ಬನ್ಸೋದ್(ಡಿಜಿಎಂ) ಇದ್ದರು.