ನೀಟ್ ಪರೀಕ್ಷೆ : 109 ವಿದ್ಯಾರ್ಥಿಗಳು ಗೈರು; ಪರೀಕ್ಷಾ ಕೇಂದ್ರಕ್ಕೆ ಡಿಸಿ ಸಂಗಪ್ಪ ಬೇಟಿ

ನೀಟ್ ಪರೀಕ್ಷೆ : 109 ವಿದ್ಯಾರ್ಥಿಗಳು ಗೈರು; ಪರೀಕ್ಷಾ ಕೇಂದ್ರಕ್ಕೆ ಡಿಸಿ ಸಂಗಪ್ಪ ಬೇಟಿ NEET exam: 109 students absent; DC Sangappa visits exam center

    ಬಾಗಲಕೋಟೆ 03 :  ಬಾಗಲಕೋಟೆ ನಗರದ 10 ಕೇಂದ್ರಗಳಲ್ಲಿ ರವಿವಾರ ನಡೆದ ನೀಟ್ ಪರೀಕ್ಷೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಅವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ನವನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜನಲ್ಲಿ ಸ್ಥಾಪಿಸಲಾದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಭದ್ರತಾ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಪ್ರವೇಶ ನಿಯಂತ್ರಣ ಕ್ರಮಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವೀಕ್ಷಣೆ ಮಾಡಿದರು.       

   ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಸಿ.ಮನ್ನಕೇರಿ ಸೇರಿದಂತೆ ಇತರರು ಇದ್ದರು.  ರವಿವಾರ ನಡೆದ ನೀಟ್ ಪರೀಕ್ಷೆಗೆ ಒಟ್ಟು 3727 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 3618 ವಿದ್ಯಾರ್ಥಿಗಳು ಹಾಜರಾಗಿ 109 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ ಎಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪಾಟೀಲ ತಿಳಿಸಿದ್ದಾರೆ.