ಅಜಿತ್ ಪವಾರ್ ನಿಧರ್ಾರಕ್ಕೆ ಎನ್ಸಿಪಿ ಬೆಂಬಲವಿಲ್ಲ: ಶರದ್ ಪವಾರ್

ಮುಂಬೈ, .23  ಬಿಜೆಪಿ ಜೊತೆ ಸೇರಿ ಸಕರ್ಾರ ರಚಿಸುವ ಅಜಿತ್ ಪವಾರ್ ನಿಧರ್ಾರಕ್ಕೆ ತಮ್ಮ ಬೆಂಬಲವಿಲ್ಲ. ಇದು ಪಕ್ಷದ ನಿಧರ್ಾರವಲ್ಲ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಎನ್ಸಿಪಿ, ಅಜಿತ್ ಪವಾರ್ ಅವರ ನಿಧರ್ಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಮತ್ತು ಎನ್ಸಿಪಿ ಸಕರ್ಾರ ರಚಿಸುವ ನಿಧರ್ಾರವನ್ನು ಕಟುವಾಗಿ ಟೀಕಿಸಿರುವ ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರು, ಅಜಿತ್ ಪವಾರ್ ರಾಜ್ಯದ ಜನತೆ ಮತ್ತು ಅವರ ಚಿಕ್ಕಪ್ಪ ಅವರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಜಿತ್ ಪವಾರ್ ರಾತ್ರಿಯಿಡೀ ನಡೆದ ಸಭೆಯಲ್ಲಿ ನಮ್ಮೊಂದಿಗಿದ್ದರು, ಆದರೆ ಅವರ ಹಾವಭಾವ ಅನುಮಾನಾಸ್ಪದವಾಗಿತ್ತು. ಅವರು ಸಭೆಯಿಂದ ಹೊರಬಂದರು ಮತ್ತು ಅವರ ಫೋನ್ ಸ್ವಿಚ್ ಆಫ್ ಆಗಿತ್ತು" ಎಂದು ರಾವತ್ ದೂರಿದ್ದಾರೆ.  ಶರದ್ ಪವಾರ್ ಅವರಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ, ಮತ್ತು ನಾನು ಅದನ್ನು ವಿಶ್ವಾಸದಿಂದ ಹೇಳಬಲ್ಲೆ. ಅಜಿತ್ ಪವಾರ್ ಅವರು ರಾಜ್ಯದ ಮತದಾರರಿಗೆ ಮಾತ್ರವಲ್ಲದೆ ತಮ್ಮ ಚಿಕ್ಕಪ್ಪ ಅವರಿಗೂ ಮೋಸ ಮಾಡಿದ್ದಾರೆ ಎಂದು ಅವರು ದೂರಿದರು. ಇಂದು ಬೆಳಗ್ಗೆ ಬಿಜೆಪಿ  ಶಾಸಕಾಂಗ ಪಕ್ಷದ  ನಾಯಕ, ಮಾಜಿ  ಮುಖ್ಯಮಂತ್ರಿ  ದೇವೇಂದ್ರ ಫಢ್ನವೀಸ್ ನೂತನ ಮುಖ್ಯಮಂತ್ರಿಯಾಗಿ ಇಂದು ಬೆಳಗ್ಗೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಎನ್ಸಿಪಿ ಹಿರಿಯ ಮುಖಂಡ ಅಜಿತ್ ಪವಾರ್   ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.    ಶನಿವಾರ ಬೆಳಿಗ್ಗೆ ರಾಜ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರು   ನೂತನ  ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಪ್ರಮಾಣ  ಪ್ರಮಾಣ ವಚನ ಬೋಧಿಸಿದ್ದರು.    ಶಿವಸೇನೆ ಜೊತೆ ಸಕರ್ಾರ ರಚಿಸುವುದು  ಖಚಿತ  ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ರಾತ್ರಿ ಹೇಳಿದ್ದರು. ಆದರೆ,  ಶುಕ್ರವಾರ ರಾತ್ರಿ ನಡೆದ  ಹಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ  ಫಡ್ನವೀಸ್ ಎನ್ಸಿಪಿಯಿಂದ  ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸ್ಥಾನ  ಪಡೆಯಲೇಬೇಕು ಎಂದು ಹಠಗೆ ಬಿದ್ದಿದ್ದ  ಶಿವಸೇನೆಗೆ, ಎನ್ಸಿಪಿ ಅನಿರೀಕ್ಷಿತ ಆಘಾತ ನೀಡಿದೆ. ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ  ಎಂದು ಘೋಷಿಸಿದ ನಂತರ  ಎನ್ಸಿಪಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.