ಎನ್ ಸಿಸಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು

13 ರಿಂದ 24 ರವರಿಗೆ ತಾಲೂಕಾ ಕ್ರೀಡಾಂಗಣ

ಎನ್ ಸಿಸಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು  

ಬ್ಯಾಡಗಿ 27: ಬುಧವಾರ ಸ್ಥಳೀಯ ರೋಟರಿ ಕ್ಲಬ್ ವತಿಯಿಂದ ಎಸ್ ಜೆಜೆಎಂ ಕಾಲೇಜಿನಲ್ಲಿ ಎನ್ ಸಿಸಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ನ. 13 ರಿಂದ 24 ರವರಿಗೆ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಎಸ್ ಜೆಜೆಎಂ ಕಾಲೇಜಿನ   ಉಪನ್ಯಾಸಕರು ಹಾಗೂ ಎನ್ ಸಿಸಿ ಕ್ಯಾಪ್ಟನ್ ಡಿ ಬಿ ಕುಸಗೂರ ಅವರ ನೇತೃತ್ವದಲ್ಲಿ 96 ಎನ್ ಸಿಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿ ಕ್ರೀಡಾಂಗಣದ ಆವರಣದಲ್ಲಿ ಪ್ರವಚನ  ಕೇಳಲು ಬಂದ ಜನತೆಯನ್ನು ಶಾಂತ ಹಾಗೂ ಶಿಸ್ತು ಬದ್ಧತೆಯಿಂದ ಕೂರಿಸುವಲ್ಲಿ ಶ್ರಮಿಸಿ ಮತ್ತು ಶ್ರೀಗಳ ಪ್ರವಚನಗಳು ಯಶಸ್ವಿಯಾಗಿ ಜರುಗಲು  ನಿಶ್ವಾರ್ಥತೆಯಿಂದ ಸೇವೆ ಸಲ್ಲಿಸಿದಎನ್ ಸಿಸಿ ಕೆಡೆಟ್  ವಿದ್ಯಾರ್ಥಿಗಳಿಗೆ  ಹಾಗೂ ಉಪನ್ಯಾಸಕರಿಗೆ ಧನ್ಯತೆ ಅರ​‍್ಿಸುವ ಜೊತೆಗೆ ರೋಟರಿ ಕ್ಲಬ್ ವತಿಯಿಂದ ನೋಟ್ಸ್‌ ಬುಕ್ ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ  ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ,ಅಧ್ಯಕ್ಷ ಎಸ್ ಎಂ ಬೂದಿಹಾಳಮಠ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಜಂಟಿ ಕಾರ್ಯದರ್ಶಿ ಚಂದ್ರಶೇಖರ ಗಾಣಿಗೇರ, ಅನಿಲಕುಮಾರ ಬೊಡ್ಡಪಾಟಿ, ವಿಶ್ವನಾಥ ಅಂಕಲಕೋಟಿ, ಪವಾಡಪ್ಪ ಆಚನೂರ, ಕಿರಣ ಮಾಳೇನಹಳ್ಳಿ, ಸತೀಶ ಅಗಡಿ ಆರ್ಮಿಯ ಜೆ ಸಿ ಓ ರಾಜು ಗೌಡರ, ವಿಜಯಕುಮಾರ  ಉಪಸ್ಥಿತರಿದ್ದರು.