ಶಿಸ್ತು ಒಗ್ಗಟ್ಟಿಗೆ ಎನ್ಸಿಸಿ ಅತ್ಯುತ್ತಮ ಸಂಘಟನೆ: ಅನಂತಕುಮಾರ್ ಹೆಗಡೆ

ದೇಶದ ಧ್ವಜ ಹೃದಯದಲ್ಲಿರಲಿ

ಕಾರವಾರ 15: ಎನ್ಸಿಸಿ ಸಮವಸ್ತ್ರವೇ ಅತ್ಯಂತ ಶಕ್ತಿಶಾಲಿ. ಶಿಸ್ತು, ಸಂಘಟನೆ ಮತ್ತು ಒಗ್ಗಟ್ಟಿಗೆ ಎನ್ಸಿಸಿ ಅತ್ಯುತ್ತಮ ಸಂಘಟನೆಯಾಗಿದೆ. ಅತ್ಯಂತ ಕಷ್ಟದ ಸಂದರ್ಭಗಳಲ್ಲಿ ಎನ್ಸಿಸಿ ಸೇವೆ ದೇಶಕ್ಕೆ ಸಮರ್ಪಣೆಯಾಗಿದೆ. ಹಾಗಾಗಿ ಎನ್ಸಿಸಿ ಯಿಂದ ಸಮಾಜಮುಖಿ ಸೇವೆತ ಜೊತೆಗೆ ದೇಶದ ಬದ್ಧತೆ ಮನೋಭಾವ ಬೆಳೆಯುತ್ತದೆ ಎಂದು ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.

                ಅವರು ಕಾರವಾರದಲ್ಲಿ ಏಳು ದಿನಗಳ ಕಾಲ ಆರಂಭವಾಗಿರುವ ಎನ್ಎಯು-ಸೈನಿಕ ಕ್ಯಾಂಪ್ನಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇಶಸೇವೆಯ ಮಾದರಿಯನ್ನು ಕ್ಯಾಂಪ್ನಲ್ಲಿ ಕಲಿಸಲಾಗುತ್ತಿದೆ. ದೇಶಕ್ಕೆ ಸೇವೆ ಸಲ್ಲಿಸಲು ಎನ್ಸಿಸಿ ಮಾದರಿ ಸಂಸ್ಥೆಯಾಗಿದೆ ಎಂದರು.

  ಕಾರವಾರದಲ್ಲಿ ಪ್ರಾರಂಭವಾಗಿರುವ 7 ದಿನಗಳ ರಾಷ್ಟ್ರಮಟ್ಟದ ಎನ್ಎಯು-ಸೈನಿಕ ಕ್ಯಾಂಪ್ಗೆ ಕನರ್ಾಟಕ ಗೋವಾ ರಾಜ್ಯಗಳ ಎನ್ ಸಿಸಿ ಡಿಪ್ಯೂಟಿ ಡಿಜಿ ಡಿ.ಎಂ.ಪೂವರ್ಿಮಠ ಚಾಲನೆ ನೀಡಿದರು.

                ಕಮೋಡೊರ್ ದಿನೇಶ್ ಸಿಂಗ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಉಪಸ್ಥಿತರಿದ್ದರು. ನಜೀಮುಲ್ಲಾ ಹೂಡಾ ಅವರು ಆರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ  17 ಎನ್ಸಿಸಿ ಬಟಾಲಿಯನ್ 7 ದಿನಗಳ ರಾಷ್ಟ್ರಮಟ್ಟದ ಶಿಬಿರ ಆಯೋಜಿಸಿದೆ. ಶಿಬಿರ 7 ದಿನಗಳ ಕಾಲ ನಡೆಯಲಿದೆ. 590 ವಿದ್ಯಾಥರ್ಿ ಯುವಕರು ಕ್ಯಾಂಪ್ನಲ್ಲಿ ಭಾಗವಹಿಸಿದ್ದು, ನೇವಿ ಪುಲ್ಲಿಂಗ್, ನೇವಿ ಮಾಡಲಿಂಗ್ ಮಾದರಿ ರೂಪಿಸುವುದು, ಸ್ವಿಮ್ಮಿಂಗ್, ಬೋಟ್ ರೈಡಿಂಗ್, ಐಎನ್ಎಸ್ ಕಾತರ್ಿಕ ನೌಕೆಯ ಭೇಟಿ ಮತ್ತು ಅದರ ಪರಿಚಯ ಸೇರಿದಂತೆ ಅನೇಕ ರಚನಾತ್ಮಕ ತರಬೇತಿ ಶಿಬಿರದಲ್ಲಿ ಕಲಿಸಲಾಗುವುದು ಎಂದರು .