ಶೇಡಬಾಳ 27: ನವೆಂಬರ್ 25 ಯುವಕರಲ್ಲಿ ಧೈರ್ಯ, ಸಾಹಸ ಮತ್ತು ದೇಶ ಸೇವೆಯಂತಹ ಉತ್ಕೃಷ್ಠ ಗುಣಗಳನ್ನು ಎನ್.ಸಿ.ಸಿ ಯು ನಿಶ್ಚಿತವಾಗಿ ತುಂಬುತ್ತದೆ. ಇದು ವಿದ್ಯಾಥರ್ಿಗಳಲ್ಲಿ ಸರ್ವತೋಮುಖ ಬೆಳವಣಿಗೆಯಾಗಿ ಸಮಾಜಕ್ಕೆ ಉತ್ತಮ ನಾಗರೀಕರನ್ನು ನೀಡುತ್ತದೆ. ಈ ಘಟಕದ ಕೆಡೆಟ್ಗಳಲ್ಲಿ ಇರುವಂತಹ ನಿಯತ್ತು ಇತರರಿಗೆ ಮಾದರಿಯಾಗುತ್ತದೆಯೆಂದು ಮಹಾವಿದ್ಯಾಲಯದ ಹಳೆಯ ವಿದ್ಯಾಥರ್ಿ ಹಾಗೂ ನ್ಯಾಯವಾದಿಗಳಾದ ಸ್ನೇಹಲ್ ನಾಂದ್ರೆಯವರು ಅಭಿಪ್ರಾಯ ಪಟ್ಟರು.
ಅವರು ರವಿವಾರ ದಿ. 25 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕದವರು ಆಯೋಜಿಸಿದ್ದ ಎನ್.ಸಿ.ಸಿ. 70 ನೇ ವಾಷರ್ಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ, ತಾವು ಎನ್.ಸಿ.ಸಿ.ಯಿಂದ ಅಳವಡಿಸಿಕೊಂಡ ಮುಂದಾಳುತ್ವದ ಗುಣವೇ ತಮ್ಮ ವೃತ್ತಿಯಲ್ಲಿ ಸಹಕಾರಿಯಾಗುತ್ತಿದೆಯೆಂದು ಹೇಳಿದರು.
ಇನ್ನೋರ್ವ ವಿಶೇಷ ಅತಿಥಿಯಾಗಿದ್ದ ಡಾ.ಎಸ್.ಓ.ಹಲಸಗಿಯವರು ಮಾತನಾಡಿ ಎನ್.ಸಿ.ಸಿ.ಯೆಂದರೆ ನೋಟ್ವಧರ್ಿ ಕಾಂಟ್ರಿಬುಶನ್ ಟು ಕಂಟ್ರಿ - ರಾಷ್ಟ್ರಕ್ಕೆ ಅಪ್ರತಿಮ ಸಮರ್ಪಣೆಯಾಗಿದೆಯಂದು ಹೇಳಿದರು ಅಲ್ಲದೆ, ನಮ್ಮ ಮಹಾವಿದ್ಯಾಲಯದ ಈ ಘಟಕದ ಕಾರ್ಯಗಳನ್ನು ನ್ಯಾಕ್ ತಂಡದವರು ಎರಡೂ ಸಾರಿ ಪ್ರಶಂಸೆ ಮಾಡಿದ್ದಾರೆ. ಇದರಿಂದ ಉತ್ತಮ ಶ್ರೇಣಿ ಪಡೆಯಲು ಸಹಕಾರಿಯಾಗಿದೆಯೆಂದು ಹೇಳಿ ದೇಶ ಸೇವೆಗೆ ಸನ್ನದ್ಧರಾಗಿರೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿಯವರು ತಮ್ಮ ಸಮಾರೋಪದಲ್ಲಿ ಎನ್.ಸಿ.ಸಿ. ಯಿಂದ ಕರ್ತವ್ಯ, ಅರ್ಪಣೆ ಮತ್ತು ಶಿಸ್ತಿನಂತಹ ಗುಣಗಳು ಹೇರಳವಾಗಿ ದೊರೆಯುತ್ತವೆ. ಇವುಗಳಿಂದ ಸೇನೆಯ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿ ನಮ್ಮ ಮಹಾವಿದ್ಯಾಲಯದ ಕೀತರ್ಿಯು ಹೆಚ್ಚುತ್ತದೆಯೆಂದು ಹೇಳಿದರು.
ಮಹಾವಿದ್ಯಾಲಯದ ಶ್ರೇಷ್ಠ ಎನ್.ಸಿ.ಸಿ. ಘಟಕದ ಅಧಿಕಾರಿಗಳಾದ ಮೇಜರ್ ವ್ಹಿ.ಎಸ್. ತುಗಶೆಟ್ಟಿಯವರು ಬಹಳಷ್ಟು ಅಚ್ಚುಕಟ್ಟಿನಿಂದ ಧ್ವಜಾರೋಹಣ, ಮತ್ತು ಪರೇಡದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ ಅವರು ಈ ವರ್ಷದ ಸಾಧನೆಗಳ ವರದಿಯನ್ನು ನೀಡಿದರು. ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಫೈರಿಂಗ್ದಲ್ಲಿ ರಾಷ್ಟ್ರ ಮಟ್ಟದ ಸಾಧನೆಗೆ ಚಿನ್ನಗಳಿಸಿದ ಜಿನಾಶ್ರೀ ಗಣೆ, ಸೇನೆ ಸೇರಿದ ಅಮೋಲ ಅವಟಿ, ಸಂಜು ಕುಂಬಾರ, ಮೇಘಾ ಜಾಧವ, ಪ್ರಿಯಾಂಕಾ ನಾಗಾವಿ ಹಾಗೂ ಉತ್ತಮ ಪ್ಲಾಟೂನ ಕಮಾಂಡರ್ ಶ್ರೇಯಸ್ ಪಾಟೀಲ, ಉತ್ತಮ ಸಾಮಾಜಿಕ ಕಾರ್ಯಕರ್ತ ಸಾರ್ಜಂಟ್ ಬಾಹುಬಲಿ ಮೋಳೆ ಮತ್ತು ಶ್ರೇಯಾ ಪಾಟೀಲ ಮತ್ತು ಉತ್ತಮ ಮಹಿಳಾ ಕೆಡೆಟ್ ಜಿನಾಶ್ರೀ ಗಣೆ ಹಾಗೂ ನಿತಿನ್ ಶಿರದವಾಡೆ ಹಾಗು ಇತರ ಸಾಧಕರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ "ಬೇಟಿ ಬಚಾವೋ - ಬೇಟಿ ಪಢಾವೋ" ಮತ್ತು "ಕ್ಲೀನ್ ಸಿಟಿ - ಗ್ರೀನ್ ಸಿಟಿ" ರ್ಯಾಲಿಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ.ಬಿ.ನಂದಾಳೆ, ಪ್ರಾಧ್ಯಾಪಕರಾದ ಡಾ.ಎಸ್.ಎ.ಕಕರ್ಿ, ಮಿತ್ರರಾದ ಪ್ರಕಾಶ ಬೋಕಾರೆ, ರಾಹುಲ ಕಟ್ಟಿ, ಬಸವರಾಜ ಪರುತಗಾಲೆ, ಬಾಹುಬಲಿ ಖೋತ, ವರ್ಧಮಾನ ನಾಂದಣಿ, ಬಾಹುಬಲಿ ಧೋತ್ರೆ, ವೃಷಭ ಚೌಗಲೆ, ಮಹೇಶ ಜಾಧವ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸರಸ್ವತಿ ಬಾಡಗೆ ಹಾಗೂ ತಂಡದವರು ಸ್ವಾಗತಗೀತೆ ಹಾಡಿದರು. ಪೂಜಾ ತೇಲಿ ಸ್ವಾಗತಿಸಿದರು ಮತ್ತು ಶ್ರೇಯಾ ಪಾಟೀಲ ವಂದಿಸಿದರು.