ಬಾರಾಮುಲ್ಲಾ, ಜನವರಿ 3, ಗಡಿನಾಡಿನ ಕುಪ್ವಾರಾದಲ್ಲಿ ನಿಗೂಡ ಕಾಯಿಲೆಗೆ 200 ಜಾನುವಾರುಗಳು, ವಿಶೇಷವಾಗಿ ಹಸುಗಳು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ. "ಕಳೆದ ಕೆಲವು ದಿನಗಳಲ್ಲಿ ಇಲ್ಲಿ ಕೆಲವು ನಿಗೂಡ ಕಾಯಿಲೆಯಿಂದಾಗಿ ನೂರಾರು ಪ್ರಾಣಿಗಳು, ಹೆಚ್ಚಾಗಿ ಹಸುಗಳು ಅನಾರೋಗ್ಯಕ್ಕೆ ಒಳಗಾಗಿದ್ದವು. ಇಲ್ಲಿಯವರೆಗೆ ಸುಮಾರು 200 ಪ್ರಾಣಿಗಳು ಮೃತಪಟ್ಟಿವೆ ಎಂದು ಅವರು ಹೇಳಿದರು. ಈ ನಡುವೆ ಪಶುಸಂಗೋಪನಾ ಇಲಾಖೆಯು ತಂಡಗಳನ್ನು ಪೀಡಿತ ಗ್ರಾಮಗಳಿಗೆ ಕಳುಹಿಸಲಾಗಿದೆ ಅವರು ಹೇಳಿದರು, ರೈತರ ಪ್ರಾಣಿಗಳಿಗೆ ಲಸಿಕೆ ನೀಡದ ಕಾರಣ ಜಾನುವಾರುಗಳು ಸಾವುಗಳು ಸಂಭವಿಸಿವೆ.ಆದರೂ ಸಾವಿಗೆ ನಿಖರ ಕಾರಣ ಇನ್ನು ಗೊತ್ತಾಗಿಲ್ಲ ಎಂದರು.