ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳಕ್ಕೆ ಚಾಲನೆ

ಧಾರವಾಡ 06: ಕನರ್ಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆ.ಎಸ್.ಐ.ಸಿ) ಕನರ್ಾಟಕದ ಪಾರಂಪಾರಿಕ ಉತ್ಪನ್ನವಾದ "ಮೈಸೂರ್ ಸಿಲ್ಕ್" ಸೀರೆಗಳಿಗೆ ಹೆಸರುವಾಸಿಯಾಗಿದೆ. ಧಾರವಾಡದಲ್ಲಿ ಇವುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿರುವುದು ಸಂತಸದ ಸಂಗತಿ. ಗುಣಮಟ್ಟ ಮತ್ತು ಮೌಲ್ಯಕ್ಕೆ ಖಾತ್ರಿ ಇರುವ ಈ ಉತ್ಪನ್ನಗಳನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಹಳೆಯ ಡಿ.ಎಸ್.ಪಿ. ಕಛೇರಿ ಎದುರಿನ ಭಾವಸಾರ ಮಂಗಲ ಕಾಯರ್ಾಲಯದಲ್ಲಿ ಇಂದಿನಿಂದ ಆರಂಭವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ "ಮೈಸೂರ್ ಸಿಲ್ಕ್" ವಿಭಿನ್ನವಾಗಿದೆ. ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡುತ್ತದೆ. ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳು ಸ್ಪಧರ್ಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ಅದರಲ್ಲೂ ಮಹಿಳೆಯರಿಗೆ ವಿವಾಹಗಳ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯ ಸೀರೆ "ಮೈಸೂರು ಸಿಲ್ಕ್" ಸೀರೆಗಳಾಗಿವೆ ಎಂದರು.

  ಸಂಸ್ಥೆಯ ವ್ಯವಸ್ಥಾಪಕ ಭಾನುಪ್ರಕಾಶ ಮಾತನಾಡಿ, ಕೆ.ಎಸ್.ಐ.ಸಿ.ಯ "ಮೈಸೂರ್ ಸಿಲ್ಕ್" ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ಉ-11 (ಉಜಠರಡಿಚಿಠಿಛಿಚಿಟ ಟಿಜಛಿಚಿಣಠಟಿ ಖಜರಣಡಿಚಿಣಠಟಿ) ಪಡೆದುಕೊಂಡಿದೆ. ಇದು ಸರಕುಗಳ ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999 ರಲ್ಲಿ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಈ ನೋಂದಣಿಯ ಪ್ರಕಾರ ಕೆ.ಎಸ್.ಐ.ಸಿ.ಯು "ಮೈಸೂರ್ ಸಿಲ್ಕ್"ನ ಏಕೈಕ ಮಾಲೀಕತ್ವ ಹೊಂದಿದೆ. ಇದಲ್ಲದೆ ಕಂಪನಿಯು ಖಔ 9001-2015, ಇಒಖ 14001-2015 ಹಾಗೂ ಔಊಖಂಖ 18001-2007 ರ ದೃಢೀಕರಣ ಪತ್ರವನ್ನು ಹೊಂದಿದೆ. ಕೆ.ಎಸ್.ಐ.ಸಿ ನಿಗಮಕ್ಕೆ 2016-17ನೇ ಆಥರ್ಿಕ ವರ್ಷದಲ್ಲಿ ಕನರ್ಾಟಕ ಸಾರ್ವಜನಿಕ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ "ಮುಖ್ಯ ಮಂತ್ರಿಗಳ ವಾಷರ್ಿಕ ರತ್ನ" ಪ್ರಶಸ್ತಿ ಲಭಿಸಿದೆ ಎಂದರು.   

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ಉಪಸ್ಥಿತರಿದ್ದರು. 

ಇಂದಿನಿಂದ ಡಿಸೆಂಬರ್ 11 ರವರೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆರು ದಿನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.