ಮೈಸೂರು, ಜ.19: ಪ್ರವಾಸಿಗರ ಬೇಡಿಕೆ ಮತ್ತು ಪ್ರತಿಕ್ರಿಯೆಯ ಮೇರೆಗೆ, ಶತಮಾನದಷ್ಟು ಹಳೆಯದಾದ ಮೈಸೂರು ಮೃಗಾಲಯದ ವೀಕ್ಷಣೆಗೆ ಹೆಚ್ಚಿನ ಬ್ಯಾಟರಿ ಆಧಾರಿತ ವಿದ್ಯುತ್ ವಾಹನ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಶೂನ್ಯ-ಹೊರಸೂಸುವಿಕೆ ವಾಹನಗಳಿಗೆ ಹೆಚ್ಚು ಬೇಡಿಕೆಯಿದೆ, ವಿಶೇಷವಾಗಿ ವಯಸ್ಸಾದ ನಾಗರಿಕರು ಮಕ್ಕಳೊಂದಿಗೆ ಸಂದರ್ಶಕರು ಮತ್ತು ವಿಕಲಾಂಗ ವ್ಯಕ್ತಿಗಳು ಪ್ರಾಣಿಗಳನ್ನು ಬಹಳ ಹತ್ತಿರದಿಂದ ನೋಡಲು ಸಹಾಯಕವಾಗಲಿದೆ.
ಸಾಮಾನ್ಯವಾಗಿ, ಮೃಗಾಲಯವನ್ನು ಕಾಲ್ನಡಿಗೆಯಲ್ಲಿ ನೋಡಲು ಹೊರಟರೆ ಎರಡು ಗಂಟೆ ತೆಗೆದುಕೊಳ್ಳುತ್ತದೆ, 125 ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಹೊಂದಿರುವ ಎಲ್ಲಾ ಆವರಣ ಹಾಗೂ 1,200 ಕ್ಕೂ ಹೆಚ್ಚು ಪ್ರಾಣಿ ಮತ್ತು ಪಕ್ಷಿ ಸಂಕುಲ ಹೊಂದಿರುವ ಮೃಗಾಲಯವು ದೇಶದ ಅತಿದೊಡ್ಡದಾದ ಕಾರಣ ವಯಸ್ಕರಿಗೆ ಹೆಚ್ಚಿನ ಸಮಯಬೇಕಾಗುತ್ತದೆ ಈ ಸಮಸ್ಯೆ ನಿವಾರಿಸಲು , 10 ರಿಂದ 15 ಆಸನ ಸಾಮಥ್ರ್ಯ ಹೊಂದಿರುವ ಪ್ರಸ್ತುತ 11 ವಾಹನಗಳಿದ್ದು ಇವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದ್ದಾರೆ.
ಇದಕ್ಕೆ ಒಬ್ಬರಿಗೆ 150ರೂ ಶುಲ್ಕ ನಿಗದಿ ಪಡಿಸಲಾಗುವುದು ಎಂದು ಅವರು ಹೇಳಿದರು. ವೆಚ್ಚವಾಗುತ್ತದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿ ಸವಾರಿಯಲ್ಲಿ ವಾಹನಗಳು ನಿರಂತರವಾಗಿ ಓಡುತ್ತಿರುವುದರಿಂದ ಮತ್ತು ವಾಹನಗಳಿಗೆ ಕಾಯುವ ಸಮಯ ತಪ್ಪಿಸಲು ಹೆಚ್ಚಿ ವಾಹನ ಸೌಲಬ್ಯ ವ್ಯವಸ್ಥೆ ಮಾಡುವ ಅಲೋಚನೆ ಯಿದೆ ಎಂದು ಅವರು ಹೇಳಿದರು. ಮೇಲಾಗಿ ಜನರು ತಮ್ಮ ಅನುಕೂಲಕ್ಕಾಗಿ ಇಂತಹ ವಾಹನಗಳ ಸಂಖ್ಯೆ ಹೆಚ್ಚಿಸುವಂತೆ ಒತ್ತಾಯ ಬಂದಿತ್ತು.
ಜನರ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ ಮತ್ತು ಅದರ ಪ್ರಕಾರ ನಾವು ವಾಹನಗಳ ಸೌಲಭ್ಯ ವಿಸ್ತರಿಸಲು ನಿರ್ಧರಿಸಿದ್ದೇವೆ. ಮೂರು ವಾಹನಗಳನ್ನು ಕೊಡುಗೆಯಾಗಿ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮೃಗಾಲಯವು ಇನ್ನೂ ಕೆಲವು ವಾಹನ ಖರೀಸಲಿದೆ ಎಂದು ಅವರು ಹೇಳಿದರು.
ಕಾಲ್ನಡಿಗೆಯಲ್ಲಿ ಮೃಗಾಲಯದ ಸುತ್ತಲೂ ಹೋಗುವವವರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ.
ಹೀಗಾಗಿ ಎರಡರ ನಡುವೆ ನಾವು ಸಮತೋಲನ ಸಾಧಿಸಬೇಕು ಮತ್ತು ಪರಿಸ್ಥಿತಿಯು ಏನು ಬಯಸುತ್ತದೆಯೋ ಅದರಂತೆ ಹೋಗಬೇಕು ಎಂದೂ ಅವರು ಹೇಳಿದರು.
ಕಾರಂಜಿ ಲೇಕ್ ನೇಚರ್ ಪಾರ್ಕ್ ಅನ್ನು ಸಹ ನಿರ್ವಹಿಸುವ ಮೃಗಾಲಯವು ತನ್ನ ಕ್ಯಾಂಪಸ್ ಸಹ ದೊಡ್ಡದಾದ ಕಾರಣ ಪ್ರಕೃತಿ ಉದ್ಯಾನವನದಲ್ಲಿಯೂ ಇಂತಹ ಸೌಲಭ್ಯ ಪರಿಚಯಿಸುವಂತೆ ಒತ್ತಾಯಿಸಿತ್ತು .