ಅಕಾಲಿಕ ಮಳೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಶಾಸಕಿ ಹೆಬ್ಬಾಳಕರ್ ಸಾಂತ್ವನ

ಲೋಕದರ್ಶನ ವರದಿ

ಬೆಳಗಾವಿ 11:  ಭಾನುವಾರ ಸುರಿದ ಮಳೆಯಿಂದಾಗಿ ಕಮಕಾರಟ್ಟಿ ಗ್ರಾಮದಲ್ಲಿ ನೆಲಗೋಡೆ ಕುಸಿತಕೊಂಡು ಮೃತಪಟ್ಟಿರುವ ಇಬ್ಬರ ಕುಟುಂಬಗಳನ್ನು ಇಂದು ಭೇಟಿ ಮಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಾಂತ್ವನ ಹೇಳುವ ಜೊತೆಗೆ ಧನಸಹಾಯ ಮಾಡಿದರು.

 ಕಲ್ಲಪ್ಪ ಸಿ ಸಾಂಬ್ರೆಕರ್ (ಕೊಂಡಸಕೊಪ್ಪ ನಿವಾಸಿ, 45 ವರ್ಷ) ಹಾಗೂ ಪರಶುರಾಮ ಗ ಶಹಪೂರಕರ್ (ಶಿಂದೋಳಿ ನಿವಾಸಿ,  17 ವರ್ಷ ) ಆಡುಗಳನ್ನು ಮೇಯಿಸುವ ಸಲುವಾಗಿ ಕಮಕಾರಟ್ಟಿ ಹೋಗಿದ್ದರು. 

ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಸುರಿದ ಭಾರಿ ಮಳೆಯಿಂದಾಗಿ ಆಸರೆ ಬಯಸಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಲದಲ್ಲಿನ ಶೆಡ್ ಹತ್ತಿರ ಹೋಗಿದ್ದಾರೆ. ಮಣ್ಣು ನಿಮರ್ಿತ ಗೋಡೆ ಇವರ ಮೇಲೆ ಕುಸಿದು  ಬಿದ್ದ ಕಾರಣ ಇಬ್ಬರೂ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಲಕ್ಷ್ಮಿ ಹೆಬ್ಬಾಳಕರ್ ಮೃತರ ಮನೆಗಳಿಗೆ ತೆರಳಿ, ಕುಟುಂಬಗಳಿಗೆ ಸಾಂತ್ವನವನ್ನು ಹೇಳಿ ಧೈರ್ಯವನ್ನು ತುಂಬಿದರು. ಜೊತೆಗೆ  ಧನ ಸಹಾಯವನ್ನೂ ಮಾಡಿದರು. ಸರಕಾರದಿಂದ ಸಾಧ್ಯವಾದಷ್ಟು ಆಥರ್ಿಕ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. ಹಿರೇಬಾಗೇವಾಡಿ ತಹಸಿಲ್ದಾರ ಕುಲಕಣರ್ಿ ಹಾಗೂ ಸಿಪಿಐ ಅಂಬಿಗೇರ್ ಇದ್ದರು.