ಹೊಸಪೇಟೆ ಮಾರ್ಗವಾಗಿ ಮೈಸೂರು-ಅಜ್‌ಮೀರ್ ರೈಲು ಸಂಚಾರ

Mysore-Ajmer train service via Hospet

ಲೋಕದರ್ಶನ ವರದಿ 

ಹೊಸಪೇಟೆ ಮಾರ್ಗವಾಗಿ ಮೈಸೂರು-ಅಜ್‌ಮೀರ್ ರೈಲು ಸಂಚಾರ 

ಹೊಸಪೇಟೆ 02: ಪ್ರಯಾಣಿಕರ ದಟ್ಟಣೆಯ ಹಿನ್ನೆಲಯಲ್ಲಿ ನೈರುತ್ಯ ವಲಯದ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಅವರ ವಿನಂತಿಯ ಮೇರೆಗೆ ಗಾಡಿ ಸಂಖ್ಯೆ : 06281/06282. ಹೊಸಪೇಟೆ ಮಾರ್ಗವಾಗಿ ಮೈಸೂರು-ಅಜ್‌ಮೀರ್‌-ಮೈಸೂರು ಬೇಸಿಗೆ ವಿಶೇಷ ರೈಲು ವಾರಕ್ಕೊಮ್ಮೆ ದಿನಾಂಕ : 05.04.2025 ರಿಂದ ಸಂಚಾರ ಆರಂಭಿಸಲಿದೆ.  

ಈ ರೈಲು ಪ್ರತಿ ಶನಿವಾರ ಮೈಸೂರಿನಿಂದ ಬೆಳಿಗ್ಗೆ 8.00 ಗಂಟೆಗೆ ನಿರ್ಗಮಿಸಿ ಹಾಸನ, ಅರಸಿಕೇರೆ, ಚಿತ್ರದುರ್ಗ ಬಳ್ಳಾರಿ ಕಂಟೋನ್ಮೆಂಟ್ ಮಾರ್ಗವಾಗಿ ಹೊಸಪೇಟೆಗೆ ಸಂಜೆ 6.00 ಗಂಟೆಗೆ ತಲುಪುವುದು ಇಲ್ಲಿಂದ ನಿರ್ಗಮಿಸಿ ಹುಬ್ಬಳ್ಳಿ, ಬೆಳಗಾವಿ, ಪುಣೆ, ಕಲ್ಯಾಣ (ಮುಂಬೈ) ಸೂರತ್, ವಡ್ಡೋದರ ಮಾರ್ಗವಾಗಿ ಸೋಮವಾರ ಬೆಳಿಗ್ಗೆ 7.00 ಗಂಟೆಗೆ ಅಜಿಮೀರ್ ಅನ್ನುತಲುಪುತ್ತದೆ.  


ಗಾಡಿ ಸಂಖ್ಯೆ : 06282 ಅಜ್‌ಮೀರ್ ಸೋಮವಾರ ಸಂಜೆ 6.50ಕ್ಕೆ ನಿರ್ಗಮಿಸಿ ಅದೇ ಮಾರ್ಗವಾಗಿ ಹೊಸಪೇಟೆಗೆ ಬುಧವಾರ ಬೆಳಿಗ್ಗೆ 7.40ಕ್ಕೆ ಆಗಮಿಸುವುದು ಇಲ್ಲಿಂದ ನಿರ್ಗಮಿಸಿ ಅದೇ ಮಾರ್ಗವಾಗಿ ಬುಧವಾರ ಸಂಜೆ 5.30ಕ್ಕೆ ಮೈಸೂರನ್ನು ತಲುಪುತ್ತದೆ.  


ಏಪ್ರೀಲ್ 5 ರಿಂದ ಜೂನ್ 14ರವರೆಗೆ ಒಟ್ಟು 11 ಟ್ರಿಪ್‌ಗಳು ಕಾಲ ವಾರಕ್ಕೊಮ್ಮೆ ಸಂಚರಿಸುವ ಈ ರೈಲು ರಾಜಸ್ತಾನ, ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ರಾಜ್ಯದ ಎರಡು ಪ್ರಮುಖ ವಿಶ್ವಪಾರಂಪರಿಕ ತಾಣಗಳಾದ ಹಂಪಿ (ಹೊಸಪೇಟೆ) ಮತ್ತು ಬೇಲೂರು, ಹಳೇಬೀಡು (ಹಾಸನ)ಕ್ಕೆ ನೇರ ಸಂಫರ್ಕ ಕಲ್ಪಿಸುತ್ತದೆ ಎಂದು ನೈರುತ್ಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷರಾದ ವೈ.ಯಮುನೇಶ್ ಹಾಗೂ ಮಹೇಶ್ ಕುಡುತಿನಿ ತಿಳಿಸಿದರು.