ಮೈಲಾರ: ಆನೆ ರಥದಲ್ಲಿ ಮಲ್ಲಣ್ಣ ದೇವರ ಮೆರವಣಿಗೆ

Mylara: The procession of Lord Mallanna

ಬೀದರ್ 23: ಭಾಲ್ಕಿ ತಾಲ್ಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ರವಿವಾರ ರಾತ್ರಿ 10-30 ಗಂಟೆಗೆ ಮಲ್ಲಣ್ಣ ದೇವರ ಮೆರವಣಿಗೆ ಆನೆ ರಥದಲ್ಲಿ ನಡೆಯಿತು. 

ಮೆರವಣಿಗೆಯು ದೇವಸ್ಥಾನದಿಂದ ಹೊರಟು ಗಣೇಶ ಕುಂಡ, ಜ್ಯೋತಿಲಿಂಗ ದೇವಸ್ಥಾನ, ತೆಪ್ಪದ ಕುಂಡ ಹಾದು ಪೃತಮಾರಿ ದೇವಸ್ಥಾನಕ್ಕೆ ತಲುಪಿ ವಗ್ಗೆ ಕಡೆಯಿಂದ ಹಾಡು, ಚಾಬುಕ ನೃತ್ಯ ನಡೆಯಿತು.  

ಮಲ್ಲಣ್ಣ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರತಿರೊಂದಿಗೆ ಮೆರವಣಿಗೆಯ ಸಮಾಪ್ತಿ ಮಾಡಲಾಯಿತು.  

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ, ವ್ಯವಸ್ಥಾಪಕ ಸಂಜೀವಕುಮಾರ ಸುಂದಾಳ, ಪ್ರಧಾನ ಅರ್ಚಕ ಬಸಪ್ಪ ಹಿರಿವಗ್ಗೆ, ಮಲ್ಲಿಕಾರ್ಜುನ ಹಿರಿವಗ್ಗೆ, ಪ್ರಕಾಶ ಹಿರಿವಗ್ಗೆ ಮತ್ತು ಆಕಾಶ ಹಿರಿವಗ್ಗೆ ಸೇರಿದಂತೆ ದೇವಸ್ಥಾನದ ಸಿಬ್ಬಂದಿಗಳು ಕೂಡ ಇದ್ದರು.  

ಜಾತ್ರೆ ನಿಮಿತ್ಯ ಮಹಾರಾಷ್ಟ್ರ, ತೇಲಂಗಾಣ, ಆಂಧ್ರ ಮತ್ತು ಕರ್ನಾಟಕ ಸೇರಿದಂತೆ ವಿವಿಧ ಕಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.