ನನ್ನ ವಿದ್ಯಾರ್ಥಿ ಶ್ರೀಮಂತಗೆ ಕೃಷಿ ಖಾತೆ ನೀಡುವುದು ಅಗತ್ಯ

ಲೋಕದರ್ಶನ ವರದಿ

ಕಾಗವಾಡ 06: ರೈತಾಪಿ ಕುಟುಂಬದಲ್ಲಿ ಜನಿಸಿ, ನಿರಂತರ ಒಬ್ಬ ರೈತನಾಗಿ ಬೇಸಾಯದಲ್ಲಿ ತಂದೆಗೆ, ಸಹೋದರರಿಗೆ ಸಹಾಯ ಮಾಡುತ್ತಾ 8 ಕಿ.ಮೀ ಕಾಲುನಡೆಗೆಯಿಂದ ಬಂದು ಅಧ್ಯಯನ ಮಾಡಿ, ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ತೋರಿ ಬಿ.ಎಸ್.ಸಿ ಪದವಿ ಪಡೆದು ಉದ್ಯಮಿಯಾಗಿ, ಈಗ ಕರ್ನಾಟಕ ರಾಜ್ಯದ ಕ್ಯಾಬಿನೇಟ್ ದರ್ಜೆ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನನ್ನ ಜೀವನದಲ್ಲಿ ಅತ್ಯಾನಂದವಾಗಿದೆ. ನನ್ನ ವಿದ್ಯಾರ್ಥಿಗೆ ಕರ್ನಾಟಕ ಸರ್ಕಾರ ಕೃಷಿ ಸಚಿವ ಖಾತೆ ನೀಡಿ, ರಾಜ್ಯದ ರೈತರ ಪರ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸಚಿವ ಶ್ರೀಮಂತ ಪಾಟೀಲರ ನಿವೃತ್ತ ವಿಜ್ಞಾನ ಶಿಕ್ಷಕ ಹನುಮಂತ ತೇಲಸಂಗ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುವಾರ ರಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಕ್ಯಾಬಿನೇಟ್ ದರ್ಜೆಯ ಸಚಿವ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೋಳೆ ಗ್ರಾಮದ ಅಶೋಕ ಶಿಕ್ಷಣ ಪ್ರಸಾರ ಮಂಡಳದ ಸಿದ್ಧೇಶ್ವರ ಶಿಕ್ಷಣ ಸಮೀತಿಯ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕ ಹನುಮಂತ ತೇಲಸಂಗ ಇವರು ಮಾತನಾಡುವಾಗ, 1968 ರಿಂದ 1971 ವರೆಗೆ ಮೂರು ವರ್ಷ ವಿಜ್ಞಾನ ವಿಷಯವನ್ನು ಬೋಧಿಸಿದ ಆದರ್ಶ ಶಿಕ್ಷಕ ತನ್ನ ವಿದ್ಯಾರ್ಥಿಯ ಬಗ್ಗೆ ಆದರ ಭಾವನೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ದಸೆಯಲ್ಲಿದ್ದಾಗ ಕಷ್ಟದಿಂದ ಓದಿದ್ದು. ಅದರಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿ ಬಿ.ಎಸ್.ಸಿ. ಪದವಿ ಪಡೆದು ರೈತರ ಸಮಸ್ಯೆಗಳು ಆಲಿಸಿ ವಿಶೇಷವಾಗಿ ಪ್ರಯತ್ನಿಸಿ ಸಕ್ಕರೆ ಕಾರ್ಖಾನೆ ಶ್ರೀಮಂತ ಪಾಟೀಲ ಸ್ಥಾಪಿಸಿದ್ದರು. ನೀರಿಗಾಗಿ ಪರದಾಡುತ್ತಿರುವ ಗ್ರಾಮಗಳಲ್ಲಿ 100 ನೀರಾವರಿ ಯೋಜನೆಗಳು ಪ್ರಾರಂಭಿಸಿ ಜನರ ಬಾಗಿಲಿಗೆ ನೀರು ತಂದರು. ಬಳಿಕ ಚುನಾವಣೆಯಲ್ಲಿ ಶಾಸಕರಾದರು. ಈಗ ಎರಡನೇ ಬಾರಿ ಶಾಸಕನಾಗಿ ಸಚಿವರಾಗಿದ್ದಾರೆ. ರೈತರ ಬಗ್ಗೆ ಇರುವ ಕಾಳಜಿ ಮುಖ್ಯಮಂತ್ರಿ ಯಡಿಯೂರಪ್ಪಾ ಇವರು ಗಮನಿಸಿ ಕೃಷಿ ಇಲಾಖೆ ನೀಡಬೇಕೆಂದು ಇಲ್ಲಿಯ ರೈತರ ಅಭಿಪ್ರಾಯವಿದೆ. ಇದು ನಾನು ಗಮನಿಸಿದ್ದೇನೆ ಎಂದು ಹನುಮಂತ ತೇಲಸಂಗ ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ವಾಂದಿಮಾಳಿ, ಮುಖ್ಯಾಧ್ಯಾಪಕ ಜಿ.ಡಿ.ಶಿಪೂರೆ, ವಿಜ್ಞಾನ ಶಿಕ್ಷಕ ಶಿವಾನಂದ ಹವಳೆ, ಸೇರಿದಂತೆ ಸಂಚಾಲಕರು, ಶಿಕ್ಷಕರು ಪಾಲ್ಗೊಂಡು ನಮ್ಮ ಸಂಸ್ಥೆ ವಿದ್ಯಾಥರ್ಿ ರಾಜ್ಯದಲ್ಲಿ ಕೀತರ್ಿ ಮೆರೆದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಚಿವ ಸ್ಥಾನಕ್ಕೆ ಸ್ವೀಕರಿಸಿದ ಬಳಿಕ ಕಾಗವಾಡ ಕ್ಷೇತ್ರದ ಶಿರಗುಪ್ಪಿ, ಜುಗೂಳ, ಶೇಡಬಾಳ, ಕಾಗವಾಡ, ಉಗಾರ, ಐನಾಪೂರ, ಮೋಳೆ, ಕೆಂಪವಾಡ, ಮದಬಾವಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.

ಕಾಗವಾಡ ಕ್ಷೇತ್ರಕ್ಕೆ 30 ವರ್ಷಗಳ ಬಳಿಕ ಸಚಿವ ಸ್ಥಾನ:

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಈ ವರೆಗಿನ ಶಾಸಕರು ಚುನಾವಣೆ ಎದುರಿಸಿದ್ದರು. ಅದರಲ್ಲಿ ರಾಯಬಾಗದ ಹುಲಿ ದಿ. ವ್ಹಿ.ಎಲ್.ಪಾಟೀಲ, ಅಥಣಿಯ ದಿ. ಎ.ಬಿ.ಜಕನೂರ ಇವರನ್ನು ಹೊರತು ಪಡಿಸಿ, 30 ವರ್ಷಗಳ ಬಳಿಕ ಶ್ರೀಮಂತ ಪಾಟೀಲ ಇವರಿಗೆ ಕ್ಯಾಬಿನೇಟ್ ದರ್ಜೆ  ಸಚಿವ ಸ್ಥಾನ ಲಭಿಸಿದ್ದರಿಂದ ಕ್ಷೇತ್ರದ ಜನರಲ್ಲಿ ಹರ್ಷ ವ್ಯಕ್ತವಾಗುತ್ತಿದೆ. ಈಗರೆ ನಮ್ಮ ಕ್ಷೇತ್ರ ಅಭಿವೃದ್ಧಿ ಕಾಣಲಿ ಮತ್ತು ಶ್ರೀಮಂತ ಪಾಟೀಲ ಇವರು ಹೇಳುತ್ತಿದ್ದಂತೆ ಮಾದರಿ ಕ್ಷೇತ್ರವಾಗಿ ಪರಿಗಣಿಸಲಿ ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ.