ನನ್ನ ಸೇವೆ ತೃಪ್ತಿ ತಂದಿದೆ: ಕುಲಕರ್ಣಿ

ಲೋಕದರ್ಶನ ವರದಿ

ಕೊಪ್ಪಳ: ನೆರೆ ಹಾವಳಿಯ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ಸಮರ್ಪಕವಾಗಿ ಗ್ಯಾಸ್ ವಿತರಿಸಿದ ತೃಪ್ತಿ ನನಗಿದೆ ಎಂದು ಗುರುಪ್ರಸಾದ ಭಾರತ ಗ್ಯಾಸ್ ಮಾಲಕರಾದ ರಾಘವೇಂದ್ರ ಪಿ. ಕುಲಕರ್ಣಿ ಹೇಳಿದರು.

ಅವರು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ, ರಾಘವೇಂದ್ರ ಪಿ.ಕುಲಕಣರ್ಿಯವರು ಬಡತನ ಹಿನ್ನೆಲೆಯಿಂದ ಬಂದಿದ್ದರಿಂದ ಗುರುಪ್ರಸಾದ ಭಾರತ ಗ್ಯಾಸ್ ಕಂಪನಿಯಲ್ಲಿ ಬಹಳಷ್ಟು ಬಡ ಯುವಕರಿಗೆ ಉದ್ಯೋಗ ನೀಡಿರುವುದು ಸಂತಸದ ಸಂಗತಿ ಎಂದರು.

ಶಂಕರ ವೈದ್ಯ, ವಿರೇಶ ಜಾಲಿಹಾಳ, ಬಸವರಾಜ ತಳಕಲ, ಕೃಷ್ಣ ಪಾಪಳೆ, ಯೋಗೇಶ ಹೊಸಪೇಟೆ, ರಹೇಮಾನಸಾಬ ಒಂಟಿ, ಮೆಹಬೂಬ ಮುಜಾವರ, ಸುರೇಶ ಜಾಲಿಹಾಳ, ಶ್ರೀನಿವಾಸ ವಾಲ್ಮೀಕಿ, ಶಿವಕುಮಾರ ಮಡಿವಾಳರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು