ಸವದತ್ತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಸಂಕಲ್ಪ: ವಿಶ್ವಾಸ ವೈದ್ಯ
My resolve is to develop the charitable sector comprehensively: Vishwas Vaidya
ಯರಗಟ್ಟಿ 15 : ತಾಲೂಕಿನ ಸೋಮಾಪುರ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ರವಿವಾರ ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು ?ಸನ್ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (5054 ಯೋಜನೆಯಡಿ), ಯರಗಟ್ಟಿ ತಾಲೂಕಿನ ತಲ್ಲೂರ-ಸೋಮಾಪುರ ಮುಖ್ಯ ರಸ್ತೆಯಿಂದ ರಾಜಪ್ಪಜ್ಜನ ದೇವಸ್ಥಾನದವರೆಗೆ ನಿರ್ಮಾಣವಾಗಲಿದೆ ಅಂದಾಜು ವೆಚ್ಚ: ?25 ಲಕ್ಷ ರೂಪಾಯಿಗಳು ಸಿ.ಸಿ ರಸ್ತೆ ಕಾಮಗಾರಿಯ ಚಾಲನೆ ನೀಡಲಾಗಿದೆ.
ಈ ರಸ್ತೆ ನಿರ್ಮಾಣದಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.?ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸುಸಜ್ಜಿತ ರಸ್ತೆಗಳ ನಿರ್ಮಾಣ ಮಾಡುವುದು ನಮ್ಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ರಾಜ್ ಇಲಾಖೆ ಎಇಇ ಎಚ್. ಎ. ಕದ್ರಾಪೂರಕರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಫಕೀರ್ಪ ಗೋಟಿ, ಭೀಮಶಿ ಗೋಟಿ, ಪ್ರಕಾಶ ಮುರಗೋಡ, ರಮೇಶ ಹಮ್ಮಿನಿ, ಸಹದೇವ ನಾಯ್ಕರ, ಸಿದ್ದಾರ್ಥ ಗೋಟಿ, ಶಶಿಧರ ತಳವಾರ, ಮಹಾಂತೇಶ ಶೀಲವಂತರ, ಅದೃಶ್ಯ ಶೀಲವಂತರ, ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ,ಸಿ. ಬಿ ಬಾಳಿ, ಡಿ. ಡಿ. ಕಿನ್ನರಿ, ಪ್ರಕಾಶ ಸುಣ್ಣದೋಳಿ, ಪ್ರಸಾದ ವೀರ್ಪನ್ನವರಮಠ, ಬಸವರಾಜ್ ಕಂಬಾರ ಸೇರಿದಂತೆ ಗ್ರಾಮದ ಹಿರಿಯರು, ಸ್ಥಳೀಯ ಮುಖಂಡರು, ಇಲಾಖೆಯ ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 