ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹಾಲಪ್ಪ ಆಚಾರ


ಲೋಕದರ್ಶನ ವರದಿ

ಯಲಬುರ್ಗಾ  05: ನಮ್ಮ ತಾಲೂಕನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನ ಹೊಂದಿದ್ದು ಅದಕ್ಕೆ ಸ್ಥಳೀಯರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಸಂಗನಹಾಲ ಗ್ರಾಮದಿಂದ ಕಲ್ಲೂರ ರಸ್ತೆ ಸುಧಾರಣೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಒಂದು ರಸ್ತೆಯು ಜನತೆಗೆ ಹಾಗೂ ರೈತರಿಗೆ ತುಂಬಾ ಅವಶ್ಯಕವಾಗಿತ್ತು ಅದನ್ನು ಮನಗಂಡು ಇಂದು ನಮ್ಮ ಸರಕಾರದಿಂದ 2ಕೋಟಿ ರೂ ಅನುಧಾನವನ್ನು ತಂದು ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಇದರ  ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕಾಮಗಾರಿ ಮಾಡಬೇಕು ಕಳಪೆ ಕಾಮಗಾರಿಗೆ ಅವಕಾಶವಿಲ್ಲಾ ಒಂದು ವೇಳೆ ಕಳಪೆ ಕಾಮಗಾರಿಯಾಗುವದು ಕಂಡು ಬಂದರೆ ಗ್ರಾಮಸ್ಥರೇ ಅದನ್ನು ತಡೆ ಇಡಿಯಬೇಕು ಹಾಗೂ ನನ್ನ ಗಮನಕ್ಕೆ ತಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದರು,

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣನವರ, ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ಸದಸ್ಯರಾದ ರಾಮಣ್ಣ ಹೊಸಮನಿ, ಶರಣಪ್ಪ ಈಳಗೇರ, ಎಪಿಎಂಸಿ ಅದ್ಯಕ್ಷ ಬಸವರಾಜ ಗಡಾದ, ಸದಸ್ಯರಾದ ಹಂಚಾಳಪ್ಪ ತಳವಾರ, ತಾಪಂ ಇಓ ಲಿಂಗನಗೌಡ್ರ ಪಾಟೀಲ, ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಶರಣಪ್ಪ ಬಣ್ಣದಭಾವಿ, ಸಿ ಎಚ್ ಪೋಲಿಸ್ಪಾಟೀಲ, ಕಲ್ಲೂರು, ಸಂಗನಹಾಲ ಗ್ರಾಪಂ ಅದ್ಯಕ್ಷರು ಹಾಗೂ ಸದಸ್ಯರು ಗ್ರಾಮಸ್ಥರು ಅಧಿಕಾರಿಗಳು ಹಾಜರಿದ್ದರು.