ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ

ಲೋಕದರ್ಶನವರದಿ

ರಾಣೇಬೆನ್ನೂರು29: ರಾಜ್ಯದಲ್ಲಿಯೇ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಹಿತ ದೃಷ್ಠಿಯಿಂದ ಅವಶ್ಯಕ ಮೂಲಭೂತ ಸೌಲಭ್ಯಗಳೊಂದಿಗೆ ನಗರ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಸವರ್ಾಂಗೀಣ ಅಭಿವೃದ್ದಿಗಾಗಿ ಸ್ವಯಂ ಪ್ರೇರಿತರಾಗಿ ಹಗಲಿರುಳು ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ಅವರು ಬುಧವಾರ ತಾಲೂಕಿನ ಕರೂರು ಗ್ರಾಮದಲ್ಲಿ ಟಿಎಸ್ಪಿ ಯೋಜನೆಯಡಿಯಲ್ಲಿ ಅಂದಾಜು.25 ಲಕ್ಷ ರೂಗಳ ವೆಚ್ಚದ ಕರಿಯಪ್ಪಜ್ಜನ ಮಠದಿಂದ ಮುಖ್ಯರಸ್ತೆಯವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಯೇ ನನ್ನ ಮೂಲ ಗುರಿಯಾಗಿದ್ದು, ಇದರ ಜೊತೆಗೆ ರಾಣೇಬೆನ್ನೂರ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವ ಮಹದಾಶೆ ನನ್ನದಾಗಿದೆ ಸಾರ್ವಜನಿಕರು ಸಹಕರಿಸಬೇಕು ಎಂದರು.

     ತಾಲೂಕಿನ ಜನರು ನನ್ನನ್ನು ಶಾಸಕನನ್ನಾಗಿ ಮಾಡಿದ್ದಾರೆ. ಆದರೆ ನಾನು ಶಾಸಕನಲ್ಲ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸುತ್ತೇನೆ ಎಂದು ಹೇಳುತ್ತ ಬಂದಿರುವೆ. ಸೇವಕನಾಗಿಯೇ ನಾನು ಕಾರ್ಯವನ್ನು ಮುಂದು ವರೆಸುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಹಾರೈಕೆ ಮತ್ತು ಆಶೀವರ್ಾದ ಸದಾ ಹೀಗೆ ಇರಲಿ. ನಿಮ್ಮಗಳ ಸೇವೆಯೆ ನನ್ನ ಕಾಯಕ ಎಂದು ಪೂಜಾರ ಹೇಳಿದರು. 

  ಇಂದು ಒಟ್ಟು 9 ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನ ನದಿಹರಳಳ್ಳಿ, ಕವಲೆತ್ತು, ಖಂಡೇರಾಯನಹಳ್ಳಿ, ಮಾಕನೂರ, ಐರಣಿ, ಕರೂರ, ಹಿರೇಬಿದರಿ, ಹುಲಿಕಟ್ಟಿ, ನಲವಾಗಲ, ಹೊನ್ನತ್ತಿ, ತುಮ್ಮಿನಕಟ್ಟಿ, ದೇವನಗೊಂಡನಕಟ್ಟಿ, ಕೃಷ್ಣಾಪುರ, ಮುಷ್ಟೂರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

  ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ ಮಾತನಾಡಿ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿ ಎಂದರು.  ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ವಿಶ್ವನಾಥ ಪಾಟೀಲ, ಮಂಜುನಾಥ ಓಲೇಕಾರ, ತಾಪಂ ಸದಸ್ಯ ರಾಮಣ್ಣ ಬೆನ್ನೂರು, ಗ್ರಾಪಂ ಅಧ್ಯಕ್ಷ ಚೋಳಪ್ಪ ಕಚ್ಚರಬಿ, ಉಪಾಧ್ಯಕ್ಷೆ ಸುಮಾ ಬಕ್ಕಜ್ಜಿ, ವಿಜಯ ಹಿತ್ತಲಮನಿ, ಪ್ರವೀಣ ಪೂಜಾರ ರಾಘವೇಂದ್ರ ಕುಲಕಣರ್ಿ, ಕೆಂಚಪ್ಪ ಸೂವರ್ೆ, ಬಸವರಾಜ ಬಾಕರ್ಿ, ಪಿಡಿಓ ಜ್ಯೋತಿ ಕಮ್ಮಾರ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಶಾಸಕ ಅರುಣಕುಮಾರ ಪೂಜಾರ ಮತ್ತು ಮಂಗಳಗೌರಿ ಪೂಜಾರ ದಂಪತಿಗಳನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.