ಎ ದರ್ಜೆಯ ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆ ಮಾಡಲು ಮುಜರಾಯಿ ಸಚಿವರ ಸೂಚನೆ

ಬೆಂಗಳೂರು,‌ ಮಾ‌ 28, ರಾಜ್ಯವನ್ನು ಕಾಡುತ್ತಿರುವ ಕೋವಿಡ್‌-19 ಸೋಂಕು ತಡೆ ಉದ್ದೇಶದಿಂದ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಜನಜೀವನ ಸ್ತಬ್ಧವಾಗಿರುವುದರಿಂದ ಪಟ್ಟಣವೂ ಸೇರಿದಂತೆ ಅನೇಕ ಪ್ರದೇಶಗಳಲ್ಲಿರುವ ನಿರ್ಗತಿಕರು, ಕೂಲಿಕಾರ್ಮಿಕರ ಹಸಿವು ತಣಿಸಲು  ಧಾರ್ಮಿಕ ದತ್ತಿ‌ ಇಲಾಖೆ ಮುಂದಾಗಿದೆ.ಧಾರ್ಮಿಕ ದತ್ತಿ ಇಲಾಖೆಯ ಎ ದರ್ಜೆಯ ದೇವಸ್ಥಾನಗಳ ಮೂಲಕ ಊಟೋಪಚಾರ ಸರಬರಾಜು ಮಾಡಲು ಸಂಬಂಧಪಟ್ಟ ಜಿಲ್ಲಾಡಳಿತವನ್ನು ಸಂಪರ್ಕ ಮಾಡಿ ಯಾವ ಪ್ರದೇಶದಲ್ಲಿ ಹೀಗೆ ಸಂಕಷ್ಟಕ್ಕೊಳಗಾಗಿದ್ದಾರೆಯೋ ಅವರಿಗೆ ಊಟ ಉಪಹಾರ ಸಿದ್ಧಪಡಿಸಲು ನಿರ್ಗತಿಕರು, ಬಡವರು, ದುರ್ಬಲರಿಗೆ ಊಟೋಪಾಚಾರ ವ್ಯವಸ್ಥೆ ಮಾಡಿ ಪ್ರಾದೇಶಿಕವಾರು ಪ್ಯಾಕೇಟ್ ಗಳ ಮೂಲಕ ಅಥವಾ ಜಿಲ್ಲಾಡಳಿತ ನಿರ್ದೇಶಿಸಿದಂತೆ ಆಹಾರ ವಿತರಿಸುವಂತೆ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ