ಸಿಂದಗಿ 14: ವಿಜಯಪುರದ ತನು ಫೌಂಡೇಶನ್ ಕೊಡ ಮಾಡುವ ರಾಜ್ಯಮಟ್ಟದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಪಟ್ಟಣದ ಸಾಮಾಜಿಕ ಹೋರಾಟಗಾರ ಮುತ್ತು ಪಟ್ಟಣಶೆಟ್ಟಿ. ಇದೇ ಡಿಸೆಂಬರ್ 15 ರಂದು ಸಂಜೆ 4 ಗಂಟೆಗೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಲಿದೆ.
ಈ ವೇಳೆ ಲೇಖಕ ಮಂಜುನಾಥ್ ಜುನಗೊಂಡ ವಿರಚಿತ ಕೃತಿಗಳ ಲೋಕಾರೆ್ಣ ಕಾರ್ಯಕ್ರಮ ನೆರವೇರಲಿದೆ. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮುತ್ತು ಪಟ್ಟಣಶೆಟ್ಟಿಯವರಿಗೆ ಶಾಸಕ ಅಶೋಕ್ ಮನಗೂಳಿ, ಗುತ್ತಿಗೆದಾರ ಮುತ್ತು ಮುಂಡೇವಾಡಗಿ ಮತ್ತು ಅವ್ವ ಫೌಂಡೇಶನ್, ರಾಗ ರಂಜಿನಿ ಸಂಗೀತ ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.