ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಮುತಾಲಿಕ್ ಆಗ್ರಹ
Muthalik demands protection of Hindus in Bangladesh
ಧಾರವಾಡ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತವಾಗಿ ನಡೆಯುತ್ತಿರುವ ಕೋಮು ದೌರ್ಜನ್ಯದ ವಿರುದ್ಧ ಭಾರತ ಮುತುವರ್ಜಿ ವಹಿಸಿ ಅಲ್ಲಿನ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ಬಲಿಷ್ಠ ಸರ್ಕಾರವಿದೆ. ಕೇಂದ್ರದ ಮೌನ ಶೋಭೆ ತರುವಂತಿಲ್ಲ, ದೇಶದಲ್ಲಿ ಈಗಿರೋದು ಇಂದಿರಾ ಗಾಂಧಿ ಕಾಂಗ್ರೆಸ್ ಸರಕಾರವಲ್ಲ, ಮನಮೋಹನ್, ಸೋನಿಯಾ, ರಾಹುಲ್ ಸರಕಾರವಲ್ಲ 56 ಇಂಚು ಎದೆಯ ಮೋದಿ ಸರಕಾರವಿದೆ. ಇದಕ್ಕಾಗಿ ನಮಗೆ ಸಿಟ್ಟು ಬರುತ್ತಿದೆ ಇದಕ್ಕೆ ಸರಿಯಾದ ಉತ್ತರ ಕೊಡಲೇಬೇಕು.ಹೀಗೆ ಮೌನವಾಗಿದ್ದರೆ ಭಾರತದಲ್ಲಿನ ಇಸ್ಲಾಮಿಕ್ ಜಿಹಾದಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದರು.
ಬಾಂಗ್ಲಾದಲ್ಲಿ ಒಂದೂವರೆ ಕೋಟಿ ಜನ ಹಿಂದೂಗಳನ್ನು ರಕ್ಷಣೆ ಮಾಡಲು ಆಗದಿದ್ದರೆ ಹೇಗೆ? ಇದರಿಂದಾಗಿ ಈ ದೇಶದಲ್ಲಿ ಅವರಿಗೆ ಕುಮ್ಮಕ್ಕು ಸಿಗುವಂತಾಗುತ್ತೆ ಮೋದಿಯವರೇ, ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಕಾಣುತ್ತಿಲ್ಲವೇ? ದೀಪುನನ್ನು ಪೆಟ್ರೋಲ್ ಹಾಕಿ ಸುಡೋದೆಂದರೆ ಏನು? ಇದಕ್ಕೆ ಉತ್ತರ ಕೊಡದಿದ್ದರೆ ಭಾರತದ ಹಿಂದೂಗಳ ಗತಿ ಏನು?
ನಿಮ್ಮ ಮೌನ ಮುರಿದು ಉತ್ತರ ಕೊಡಿ, ಅಲ್ಲಿನ ಹಿಂದೂಗಳಿಗೆ ರಕ್ಷಣೆ ಕೊಡಬೇಕು. 1971 ರ ಯುದ್ಧವನ್ನು ಅವರಿಗೆ ನೆನಪು ಮಾಡಿಕೊಡಿ.ಅವರಿಗೆ ಪ್ರತ್ಯೇಕ ದೇಶ ಮಾಡಿಕೊಟ್ಟಿದ್ದೇವೆ ಎಂದು ಕಿಡಿ ಕಾರಿದರು.
ಪಾಕಿಸ್ತಾನಕ್ಕೆ ನಮ್ಮ ದೇಶದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅಲ್ಲಿರೋ ಹಿಂದೂಗಳನ್ನು ಕೊಂದು ಹಾಕಿದ್ದೀರಿ. ಶೇ.23 ರಷ್ಟಿದ್ದ ಹಿಂದೂಗಳನ್ನು ಶೇ.1.5 ಗೆ ತಂದಿದ್ದೀರಿ.ಅಲ್ಲಿನ ಎಲ್ಲ ದೇವಸ್ಥಾನ ಕೆಡವಿ ಹಾಕಿದ್ದೀರಿ.ಅಲ್ಲಿನ ಹಿಂದೂಗಳ ರಕ್ಷಣೆ ಮಾಡದ ನೀವು ಇಲ್ಲಿನ ಮುಸ್ಲಿಮರ ಬಗ್ಗೆ ಮಾತಾಡುತ್ತೀರಿ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೋಗಿಲ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರ ಮಾಡಿದ್ದು ಅಭಿನಂದನೀಯ. ಆದರೆ ಅದೇ ರೀತಿ ಅನೇಕ ಕಡೆ ಇದೆ.ಜಮೀರ್ ಅಮ್ಮದ್ ಕ್ಷೇತ್ರದಲ್ಲಿ 25 ಸಾವಿರ ಬಾಂಗ್ಲಾದವರಿದ್ದಾರೆ. ಅವರಿಗೆ ಸರಕಾರಿ ಜಾಗ ಕೊಡಲಾಗಿದೆ.ಅದನ್ನೆಲ್ಲ ಕಿತ್ತು ಹಾಕಬೇಕು.ರಾಜ್ಯದಲ್ಲಿ ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮುಸ್ಲಿಮರು ಕಾರ್ಮಿಕರ ಹೆಸರಿನಲ್ಲಿದ್ದಾರೆ.ಅವರೆಲ್ಲ ಅನಧಿಕೃತವಾಗಿ ಇದ್ದಾರೆ.ಅಂಥವರನ್ನೂ ಒದ್ದು ಹೊರ ಹಾಕಿ.ಅವರ ಮನೆಗಳನ್ನು ಕೂಡ ಒಡೆದು ಹಾಕಿ.ಇದೀಗ ಕೋಗಿಲದಲ್ಲಿದ್ದವರಿಗೆ ಹೊಸ ಮನೆಯನ್ನು ಕೊಡೋದಾಗಿ ಹೇಳುತ್ತಿದ್ದಾರೆ.ಪರಪ್ಪನ ಅಗ್ರಹಾರದ ಜೈಲಿನ ಕಟ್ಟಡಕ್ಕೆ ಹತ್ತಿಕೊಂಡೇ 5 ಸಾವಿರ ಬಾಂಗ್ಲಾ ಮುಸ್ಲಿಮರಿದ್ದಾರೆ ಎಂದು ಆಪಾದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 