ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂರಿಗೆ ತೊಂದರೆ ಇಲ್ಲ

ಲೋಕದರ್ಶನ ವರದಿ

ರಾಯಬಾಗ 20: ಬಿಜೆಪಿ ನೇತೃತ್ವದ ಕೇಂದ್ರ ಮತ್ತುರಾಜ್ಯ ಸರಕಾರಗಳು ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಅಲ್ಪಸಂಖ್ಯಾತ ಬಾಂಧವರು ಪಡೆದುಕೊಂಡು ಆಥರ್ಿಕವಾಗಿ ಸದೃಢರಾಗಬೇಕೆಂದು ಕನರ್ಾಟಕ ರಾಜ್ಯಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಮುಕ್ತಾರ ಹುಸೇನ ಪಠಾಣ ಹೇಳಿದರು.

ದಿ.19ರಂದು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಜೆಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಮುಸ್ಲಿಂ ಸಮಾಜದ ಮುಖಂಡರಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ನಿಗಮದಲ್ಲಿ ಅಲ್ಪಸಂಖ್ಯಾತರಿಗೆ ಅನೇಕ ಸೌಲಭ್ಯಗಳಿವೆ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಯುವಕರು ಸ್ವಯಂಉದ್ಯೋಗ ಮತ್ತು ಉದ್ಯಮಗಳನ್ನು ಸ್ಥಾಪಿಸಿಕೊಂಡು ಏಳ್ಗೆ ಹೊಂದಬೇಕೆಂದರು. ಉನ್ನತ ಶಿಕ್ಷಣ ಪಡೆಯಲು ಶೈಕ್ಷಣಿಕ ಸಾಲ ಸೌಲಭ್ಯವಿದ್ದು, ವಿದ್ಯಾಥರ್ಿಗಳು ವೈದ್ಯಕೀಯ, ಇಂಜನಿಯರಿಂಗ ಸೇರಿದಂತೆ ವೃತ್ತಿಪರ ಕೋಸರ್್ಗಳನ್ನು ಅಧ್ಯಯನ ಮಾಡಿ ಸಾರ್ವಜನಿಕ ಸೇವೆಯಲ್ಲಿ ತೋಡಗಿಕೊಳ್ಳಬೇಕೆಂದರು.ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆ ಇಲ್ಲ. ಕಾಯ್ದೆ ಬಗ್ಗೆ ಹರಡುತ್ತಿರುವ ಸುಳ್ಳ ಸುದ್ದಿಗಳನ್ನು ನಂಬದೇ, ನಿಜವಾದ ಸಂಗತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕೆಂದರು. 

ವಕ್ಫಬೋರ್ಡ ಮಾಜಿ ಅಧ್ಯಕ್ಷ ತಸ್ತದೀರ ಪಟಾಯಿತ, ಅಣ್ಣಾಸಾಹೇಬ ಖೆಮಲಾಪೂರೆ, ಸದಾಶಿವ ಘೋರ್ಪಡೆ, ಮುಸ್ತಾಕ ಮುಲ್ಲಾ, ಮಜ್ಜಿದಡಾಂಗೆ, ಜಿಯಾವುಲ್ಲಾ ಮುಲ್ಲಾ, ಇಫರ್ಾನ ಮುಲ್ಲಾ, ಜಮೀರ ಮುಲ್ಲಾ, ವಾಸಿಂ ಶೇಖ, ಅಲ್ತಾಫಡಾಂಗೆ ಸೇರಿದಂತೆಅನೇಕರು ಉಪಸ್ಥಿತರಿದ್ದರು.