ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರ ನೆನಪಿನ ದೋಣಿಯಲ್ಲಿ ಸಂಗೀತ ನಮನ ಕಾರ್ಯಕ್ರಮ
Musical tribute program on the memorial boat of Dr. S.P. Balasubramaniam
ಹೊಸಪೇಟೆ 22: ಗಾನಗಂಗ ಕಲಾ ಪ್ರತಿಷ್ಠಾನ ಹೊಸಪೇಟೆ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನಾಚರಣೆಯ ಸ್ಮರಣೆಯ ಅಂಗವಾಗಿ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರ ನೆನಪಿನ ದೋಣಿಯಲ್ಲಿ ಸಂಗೀತ ನಮನ ಕಾರ್ಯಕ್ರಮವನ್ನು ಹೊಸಪೇಟೆಯ ಗೌತಮ ಬುದ್ದ ಪಂಕ್ಷನ್ ಹಾಲ್ ನಲ್ಲಿ ವಿಜಯನಗರ ಜಿಲ್ಲೆ ಪೋಲಿಸ್ ವರೀಷ್ಠಾಧಿಕಾರಿಗಳಾದ ಬಿ.ಎಲ್.ಹರಿಬಾಬು ಅವರು ಹಾರ್ಮೋನಿಯಂ ಬಾರಿಸುವುದರ ಮುಖಾಂತರ ಮಾತನಾಡುತ್ತಾ ಬಾಲಸುಬ್ರಮಣ್ಯ ಇವರ ಮೂಲ ಹೆಸರು ಶ್ರೀಪತಿ ಪಂಡೀತ ಆರಾದ್ಯ ಬಾಲಸುಬ್ರಮಣ್ಯಂ ಇವರು ಹುಟ್ಟಿದ್ದು ಆಂದ್ರ ಪ್ರದೇಶ ನೆಲ್ಲೂರು ಜಿಲ್ಲೆಯ ಕೋನೇಟಿಪೇಟಂ, ನಲ್ಲಿ ದಿ. : 04-ಜೂನ್-1946 ರಂದು ಜನಿಸಿದರು. ಇವರು ಬಾಲ್ಯದಲ್ಲಿದ್ಧಾಗ ಹಾರ್ಮೋನಿಯಂ ಮತ್ತು ಕೊಳಲು ನುಡಿಸುತ್ತಿದ್ದರು.
ಇವರ ತಂದೆ ಹರಿಕಥೆ ವಿದ್ವಾಂಸರು, ಇವರು ಮುಂದೆ ಹಾಡುತಾ ಹಾಡುತ್ತಾ, ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದರು. ನಂತರ ಇವರಿಗೆ ಸಿನಿಮಾ ಶ್ರೀಶ್ರೀಮರಿಯಾದ ರಾಮಣ್ಣ ತೆಲುಗು ಚಿತ್ರಕ್ಕೆ ಮೊದಲನೇ ಬಾರಿ ಹಾಡಿದರು. ನಂತರ ಇವರು 16-ಬಾಷೆಯಲ್ಲಿ 50-ಸಾವಿರ ಹಾಡುಗಳನ್ನು ಹಾಡಿದ್ದಾರೆ. ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳು ಇವರಿಗೆ ಪದ್ಮಭೂಷಣ, ರಾಷ್ಟ್ರ್ರಶಸ್ತಿ, ಡಾಕ್ಟರೇಟ್ ಪ್ರಶಸ್ತಿಗಳೂ ಸಹ ಲಭಿಸಿವೆ ಎಂದು ಮಾತನಾಡಿದರು. ನಂತರ ಇವರು ಕೋವಿಡ್ ಸಂದರ್ಭದಲ್ಲಿ ತೀರಿಕೊಂಡರು ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೋಲಿಸ್ ಅಧಿಕಾರಿಗಳ ವಿಜಯನಗರ ಜಿಲ್ಲಾ ಸಂಘದ ಅಧ್ಯಕ್ಷರಾದ ಕುಮಾರಸ್ವಾಮಿ, ನಿವೃತ್ತ ಸರ್ಕಾರಿ ನೌಕರರಾದ ಬಿ.ಮಾರೆಣ್ಣ, ನಿವೃತ್ತ ಪೋಲಿಸ್ ಅಧಿಕಾರಿಗಳಾದ ಗಜಾನಂದ ನಾಯಕ, ಬುಡ್ಗಜಂಗಮ್/ ಅಲೆಮಾರಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಸಣ್ಣ ಮಾರೆಪ್ಪ, ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷರಾದ ಪಿ.ವೆಂಕಟೇಶ್, ಮುಂತಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಯಲ್ಲಪ್ಪ ಬಂಡಾರ್‌ದಾರ್ ಮಾತನಾಡಿದರು. ಹೊಸಪೇಟೆಯ ಅಂಜಲಿ ಭರತನಾಟ್ಯ ತಂಡದ ವಿದ್ಯಾರ್ಥಿನಿಯರು ಸಮೂಹನೃತ್ಯವನ್ನು ಮಾಡಿ ರಂಜಿಸಿದರು, ಹೊಸಪೇಟೆಯ ವಿವಿಧ ಸಂಗೀತ ಗಾಯಕ, ಗಾಯಕಿಯರಿಂದ ಸಂಗೀತ ನಮನ ಕಾರ್ಯಕ್ರಮ ಜರುಗಿತು. ಕೊನೆಯಲ್ಲಿ ವಕೀಲರಾದ ಹೆಚ್.ಬಿ.ಕಲ್ಲಂಭಟ್ ನಿರೂಪಿಸಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 