ಹಿರಿಯ ನಾಗರಿಕರಿಗಾಗಿ ಸಂಗೀತ ಕಾರ್ಯಕ್ರಮ
Music program for senior citizens
ಹಿರಿಯ ನಾಗರಿಕರಿಗಾಗಿ ಸಂಗೀತ ಕಾರ್ಯಕ್ರಮ
ಬೆಳಗಾವಿ 25: ಇಳಿವಯಸ್ಸಿನಲ್ಲಿ ಸಂಗೀತ, ಸಾಹಿತ್ಯ, ಚಿತ್ರಕಲೆ ಹೀಗೆ ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹವ್ಯಾಸ ಮುಪ್ಪನ್ನು ಮರೆಯಿಸುತ್ತದೆ ಅಲ್ಲದೇ ನನಗೆ ವಯಸ್ಸಾಗಿದೆ ಎಂಬ ಭಾವನೆಯಿಂದ ಹೊರ ತರುತ್ತದೆ ಎಂದು ಸ್ವರಾಂಜಲಿ ಸ್ಥಾಪಕ ಚಂದ್ರಶೇಖರ ಹಿರೇಮಠ ಹೇಳಿದರು.
ಹಿಂದವಾಡಿಯಲ್ಲಿರುವ ಸ್ವರಾಂಜಲಿ ಕರೋಕೆ ಕ್ಲಬ್ ಸಂಘಟನೆಯವರು ಇದೇ ದಿ. 22 ರವಿವಾರದಂದು ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ ಕರೋಕೆ ಹಾಡುಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಂದ್ರಶೇಖರ ಕೌಜಲಗಿಯವರು ನವಿರಾದ ಹಾಸ್ಯ ಚಟಾಕೆಗಳೊಂದಿಗೆ ಜನರನ್ನು ರಂಜಿಸಿದರು. ಜಿ. ಎಸ್. ಸೋನಾರ್ ಮಿಮಿಕ್ರಿ ಮಾಡಿದರು. 1960-70 ನೇ ಇಸ್ವಿಯಲ್ಲಿ ತೆರೆ ಕಂಡಿರುವ ಚಲನಚಿತ್ರಗಳ ಹಾಡುಗಳನ್ನು ಕಲಾವಿದರಾದ ಕಿರಣ ಕುಲಕರ್ಣಿ, ಅನ್ವರ ಝರಿ, ಗಜಾನನ ರತನ, ಗಜಾನನ ಕರ್ೆ, ಛಾಯಾ ಕರ್ೆ, ಸುನಿಲ ಧರ್ಮಾಧಿಕಾರಿ, ಎಸ್ ವಿ. ನಾಯಿಕ, ಚಂದ್ರಶೇಖರ ಕೌಜಲಗಿ, ಹರಿ ಸುತಾರ ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿದರು.
ಪ್ರಭಾಕರ ಕೊಲ್ಹಾರ, ಪಾಂಡರಂಗ, ಕದಮ, ಚಂದ್ರಕಾಂತ ಅಪ್ಪಣ್ಣವರ, ಗುಂಡೇನಟ್ಟಿ ಮಧುಕರ, ಚಂದ್ರಶೇಖರ ಕೆ. ಹಿರೇಮಠ ಸಂಗೀತಾಸಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 