ಅತ್ಯಂತ ಕಠಿಣ ವಿದ್ಯೆ ಸಂಗೀತ: ದಾನಪ್ಪ ಜಿ ಕೆ

Music is the most difficult subject: Danappa GK

ಭಾಗ್ಯನಗರ 17: ಸಂಗೀತ ಕ್ಷೇತ್ರ ಅತ್ಯಂತ ಮೌಲ್ಯವಾದ ಕ್ಷೇತ್ರ, ಸಂಗೀತ ಅತ್ಯಂತ ಕಠಿಣ ವಿಧ್ಯೆ ರಾಮಚಂದ್ರ​‍್ಪ ಉಪ್ಪಾರ ರವರು 45 ವರ್ಷ ಶ್ರಮಿಸಿದ್ದಾರೆ. ಅದಕ್ಕೆ ಅವರಿಗೆ ಈ ವಿದ್ಯೆ ಒಲಿದಿದೆ ಎಂದು ದಾನಪ್ಪ ಜಿ ಕೆ ಹೇಳಿದರು. 

ಅವರು ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ  (ರಿ) ಭಾಗ್ಯನಗರ, ಇವರ ವತಿಯಿಂದ " ಸ್ವರಾಂಜಲಿ " ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿ.  - 16/03/2025, ಸಂಜೆ 06-15ಕ್ಕೆ ಬಯಲು ವೇದಿಕೆ, ಪಟ್ಟಣ ಪಂಚಾಯಿತಿ ಎದುರುಗಡೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಗ್ಯನಗರದಲ್ಲಿ ಸಂಗೀತ ಇನ್ನೂ ಜೀವಂತವಾಗಿರಲು ಮುಖ್ಯ ಕಾರಣ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ, ಮಾರುತಿ ಬಿನ್ನಾಳ, ಮತ್ತು ನಾಗರಾಜ್ ಶ್ಯಾವಿ ಅವರಿಂದ ಇನ್ನೂ ಜೀವಂತವಾಗಿದೆ. ಈ ಸಂಸ್ಥೆಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು  ಕಲಿತು ಒಳ್ಳೆಯ ಹುದ್ದೆಯಲ್ಲಿದ್ದಾರೆ ಎಂದರು.  

ಪ್ರಾಸ್ತಾವಿಕ ನುಡಿಗಳನ್ನು ಮಾರುತಿ ಬಿನ್ನಾಳ ಅವರು ಮಾತನಾಡಿ, ಈ ಸಂಗೀತ ಸಂಸ್ಥೆ 2000-01 ರಲ್ಲಿ ಸ್ಥಾಪನೆಯಾಯಿತು, ಸ್ಥಾಪನೆಯಾಗಲು ಮುಖ್ಯ ಕಾರಣ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಸವರಾಜ ಹೂಗಾರ್ ಇವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಅಧಿಕೃತವಾಗಿ ಸ್ಥಾಪನೆಯಾಯಿತು, ಕೊಪ್ಪಳ ಜಿಲ್ಲೆಯ ಅತ್ಯಂತ ಹಳೆಯ ಸಂಗೀತ ಶಾಲೆ ಎಂದು ಹೇಳಿದರು. ಅಧ್ಯಕ್ಷತೆಯನ್ನು  ರಾಮಚಂದ್ರ​‍್ಪ ಉಪ್ಪಾರ ವಹಿಸಿದ್ದರು, ಉದ್ಘಾಟನೆ ಕೃಷ್ಣ ಮ್ಯಾಗಳಮನಿ, ಮುಖ್ಯ ಅತಿಥಿಗಳಾದ ದಾನಪ್ಪ ಜಿ ಕೆ, ಯೆರಿಸ್ವಾಮಿ ತಂಬ್ರಳ್ಳಿ, ನಾಗರಾಜ್ ಕುಲಕರ್ಣಿ, ರಾಘವೇಂದ್ರ ಕೋಣಿ,ಈಶಪ್ಪ ಓಜನಹಳ್ಳಿ ಉಪಸ್ಥಿತರಿದ್ದರು.  

ನಂತರ ಸ್ಯಾಕ್ಸೋಫೋನ್ ವಿದ್ವಾನ್ ಯೆರ್ರೀಸ್ವಾಮಿ ತಂಬ್ರಳ್ಳಿ, ಸುಗಮ ಸಂಗೀತ ಜೀ ಕನ್ನಡ ಖ್ಯಾತಿಯಾ ಮೀರಾ ಕೇಶವರಾಜ್ ಹೊಸಪೇಟೆ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಭರತ ಗುಂಡಿ ವಿಜಯನಗರ, ಬಾನ್ಸೂರಿ ಸೋಲೋ ನಾಗರಾಜ್ ಶ್ಯಾವಿ, ರಂಗಗೀತೆಗಳು ಈಶಪ್ಪ ಮಾಸ್ತಾರ್ ಓಜನಹಳ್ಳಿ, ದಾಸವಾಣಿ ಸಮೀರ ಕುಲಕರ್ಣಿ ರಾಯಚೂರು, ಜಾನಪದ ಗೀತೆ ಸ್ನೇಹ ಕೆ ಮ್ಯಾಗಡೆ ಗಂಗಾವತಿ, ಸಮೂಹ ಗೀತೆ ಸಂಜನಾ ಕೊಣಿ ಹಾಗೂ ತಂಡ, ಭರತನಾಟ್ಯ  ದೀಕ್ಷಾ ನಾಟ್ಯ ಕಲಾ ಸಂಸ್ಥೆ ಕೊಪ್ಪಳ, ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೊಳಗಿತು. 

ವಾದ್ಯ ವೃಂದದಲ್ಲಿ, ಕೀಬೋರ್ಡನಲ್ಲಿ ರಾಮಚಂದ್ರ​‍್ಪ ಉಪ್ಪಾರ, ಬಾನ್ಸೂರಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ್, ತಾಳವಾದ್ಯ ಕೃಷ್ಣ ಸೊರಟೂರ, ಮೆರುಗು ನೀಡಿದರು