ಸಂಗೀತಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ: ಫಕೀರಪ್ಪ ಎಮ್ಮಿಯಾರ್
Music has its own uniqueness: Fakirappa Emmiyar
ಕೊಪ್ಪಳ 9: ಭಾಗ್ಯನಗರ , ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ (ರಿ) ಕೊಪ್ಪಳದ ವಾಸವಿ ಪ್ರಾಥಮಿಕ ಶಾಲೆ ಕೊಪ್ಪಳ ಶಾಲೆಯ, ರಂಗ ವೇದಿಕೆಯಲ್ಲಿ ದಿ.08ರಂದು "ನಾದಾಮೃತ" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ತಬಲಾ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ವಾಸವಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಫಕೀರಪ್ಪ ಎಮ್ಮಿಯಾರ್ ರವರು, ಪ್ರತಿವರ್ಷ ಶಿಕ್ಷಕರ ದಿನಾಚರಣೆ ಅಂಗವಾಗಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಆಹ್ವಾನಿಸುತ್ತಿದೆವು, ಈ ವರ್ಷ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಆಹ್ವಾನಿಸಿದ್ದೆವೆ, ಸಂಗೀತಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ, ಅದು ಯಾರನ್ನೂ ಬೇಗ ಆವರಿಸುವುದಿಲ್ಲ, ಶ್ರದ್ಧೆ ಮತ್ತು ಭಕ್ತಿ ಇದ್ದರೆ ಮಾತ್ರ ಸಂಗೀತದ ಮಹತ್ವ ತಿಳಿದುಕೊಳ್ಳಬಹುದು, ಸಂಗೀತ ಕಲಿಯಲು ದೃಢ ಮನಸ್ಸು ಇರಬೇಕು, ಸಂಗೀತಕ್ಕೆ ಅಪಾರವಾದ ಶಕ್ತಿ ಇದೆ, ಸಂಗೀತಕ್ಕೆ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಮನಸ್ಸು ನೊಂದಾಗ ಸಂಗೀತ ಮತ್ತು ಪುಸ್ತಕವನ್ನು ಓದುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ, ಸಂಗೀತದಿಂದ ಋಣಾತ್ಮಕ ಚಿಂತನೆಗಳನ್ನು ಧನಾತ್ಮಕ ಚಿಂತನೆಗಳನಾಗಿಸುವ ಶಕ್ತಿ ಇದೆ" ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಸಿಂಹ ದೇಸಾಯಿ ರವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ರಮೀಜಾ , ಸುಮಾ, ಪೂಣೀರ್ಮಾ , ಮತ್ತಿತರರು ಉಪಸ್ಥಿತರಿದ್ದರು,
ನಂತರ ಸುಗಮ ಸಂಗೀತ ವೈದೇಹಿ ವ್ಯಾಸಮುದ್ರಿ, ಭಾವಗೀತೆಗಳು ವಿಜಯಲಕ್ಷ್ಮಿ ಮ್ಯಾಗಡೆ,ಜಾನಪದ ಗೀತೆ ಪರಶುರಾಮ ದಲಭಂಜನ್ ಅವರಿಂದ ಮೊಳಗಿತು.
ವಾದ್ಯವೃಂದದ ಕೀಬೋರ್ಡನಲ್ಲಿ ಶ್ರೀ ರಾಮಚಂದ್ರ್ಪ ಉಪ್ಪಾರ ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ್ , ಮೆರುಗು ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 