ಗುಳೇದಗುಡ್ಡ 19: ಸಮೀಪದ ಸುಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಜನರ ಗಮನ ಸೆಳೆಯಿತು.
ಗುಳೇದಗುಡ್ಡ ಪಟ್ಟಣದ ಗಾನಯೋಗಿ ಪಂಚಾಕ್ಷರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ದಾನಮ್ಮ ಮುರನಾಳ, ಅಪರ್ಿಯಾ ಮಕಾನದಾರ, ಸುಪ್ರಿಯ ಅರಕಾಲಚಿಟ್ಟಿ, ನಂದಾ ದೊಡಕುಂಡಿ, ಸುಮತಿ ಹಾಗೂ ವಾಣಿ ಪ್ರಕಾಶ ಮುರಗೋಡ ಅವರಿಂದ ಸುಶ್ರಾವ್ಯವಾಗಿ ಬಸವೇಶ್ವರ ವಚನ ಗಾಯನ ಮೂಡಿಬಂದಿತು.
ಸಂಗೀತ ಶಿಕ್ಷಕಿ ಸುಮಿತ್ರಾ ಪತ್ತಾರ ಅವರು ಬಸವೇಶ್ವರರ ವಚನ, ಪುರಂದರದಾಸರ ಪದಗಳನ್ನು ಭಾವಪೂರ್ಣವಾಗಿ ಹಾಡಿ ರಂಜಿಸಿದರು. ಸಂಗೀತ ವಿದ್ಯಾಲಯದ ಪ್ರಾಚಾರ್ಯ ಅಖಂಡೇಶ್ವರ ಪತ್ತಾರ ಶಿಶುನಾಳ ಷರೀಫರ ಹಾಗೂ ಮುಪ್ಪಿನ ಷಡಕ್ಷರಿಗಳ ಪದಗಳನ್ನು ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ಸಂಗೀತಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಚಂದ್ರಶೇಖರ ಆಲೂರ ಹಾಮರ್ೋನಿಯಂ, ಕಮಕೇರಿಯ ಪಾಂಡು ಬಡಿಗೇರ ತಬಲಾ ಸಾಥ್ ನೀಡಿದರು.