ಕತಾರನಲ್ಲಿ ಮುರಳಿಕಾಂತ್ ಪೇಟ್ಕರ್‌ಗೆ ಸನ್ಮಾನ

Muralikant Petkar honored in Qatar

ಕತಾರ 11: ಪದ್ಮಶ್ರೀ ಪುರಸ್ಕೃತ ಮುರಳಿಕಾಂತ್ ಪೇಟ್ಕರ್ ಅವರಿಗೆ ಕತಾರಿನಲ್ಲಿ ಸನ್ಮಾನಭಾರತಕ್ಕೆ ​‍್ರ​‍್ರಥಮ ಬಾರಿಗೆ. ಪ್ಯಾರಾಲಂಪಿಕ್‌. ಪಂದ್ಯಾವಳಿಗಳಲ್ಲಿ. ಸುವರ್ಣಪದಕ ಸ್ವರ್ಣ ಪದಕವನ್ನು  ತಂದುಕೊಟ್ಟಿರುವ ಶ್ರೀ ಮುರಳಿಕಾಂತ ಪೀಟರ್ ಅವರನ್ನು ಇತ್ತೀಚೆಗೆ ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅವರಣದಲ್ಲಿರುವ ಅಶೋಕ ಸಭಾಂಗಣದಲ್ಲಿ ಗೌರವದಿಂದ ಸನ್ಮಾನಿಸಲಾಯಿತು.  

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತ  ಯುದ್ಧದಲ್ಲಿ ಪರಾಕ್ರಮ ಶೌರ್ಯಗಳಿಂದ ಎಂಟು ಬುಲೆಟ್ ಗಳನ್ನು ಎದುರಿಸಿ, ಜೀವಂತವಾಗಿ ಉಳಿದು 1972 ಪ್ಯಾರಾಲಂಪಿಕ್ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಸ್ವರ್ಣ ಪದಕವನ್ನು ತಂದಿರುವ ಇವರ ಶೌರ್ಯಗಾಥೆ  ಹಲವಾರು ಪೀಳಿಗೆಗಳಿಗೆ ಸ್ಫೂರ್ತಿದಾಯಕ ಐ.ಸಿ.ಸಿ. ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥರಾದ ನಂದಿನಿ ಹಬ್ಬ ಗೋಣಿ ಅವರು ಆಗಮಿಸಿದ್ದ ಗಣ್ಯರು ಹಾಗೂ ಸಭಿಕರನ್ನು ಸ್ವಾಗತಿಸಿದರು. ಕರ್ನಾಟಕ ಮೂಲದವರಾದ ಐ.ಸಿ.ಸಿ ಉಪಾಧ್ಯಕ್ಷರಾದ ಶಿ ಸುಬ್ರಮಣ್ಯ ಹೆಬ್ಬಾಗಿಲು ಅವರು. ಆಗಿ ಆಗಮಿಸಿದ ಪೇಟ್ಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಶ್ರೀಯುತರು. ಭಾರತೀಯ ಯುವಜನಕ್ಕೆ ಸ್ಫೂರ್ತಿಯ ಮೂಲ ಎಂದು ಪುನರುಚ್ಚರಿಸಿದರು. ಐ.ಸಿ.ಸಿ ಆಡಳಿತ ಸಮಿತಿಯ ಇತರ ಸದಸ್ಯರು, ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಸಮುದಾಯದ ಹಿರಿಯ ಮುಖಂಡರು ಹಾಗು ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಅವರ ಪ್ರವಾಸದ ಅಂಗವಾಗಿ ಪೇಟಕರ್ ಅವರು ಭಾರತೀಯ ಸಮುದಾಯದ ಪ್ರತಿನಿಧಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಯುವ ಜನರಿಗೆ ಪ್ರೋತ್ಸಾಹ ನೀಡಿ, ಶ್ರದ್ಧೆ ಹಾಗೂ ಪರಿಶ್ರಮದಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದೆಂದು ಉಲ್ಲೇಖಿಸಿದರು.  ಸುಪುತ್ರ ಅರ್ಜುನ್ ಪೇಟಕರ್ ಅವರು ಸಕ್ರಿಯವಾಗಿ ಯುವಜನರ ಕ್ರೀಡಾ ಪ್ರತಿಭೆಯ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ. ಇವರು ಸಭಿಕರನ್ನು ಉದ್ದೇಶಿಸಿ ಮಾತನಾಡಿ ಮೌಲ್ಯಭರಿತ ಅಂತರಾಳವನ್ನು ನೀಡಿದರು.  

ಇವರು ಸಭಿಕರಲ್ಲಿ ವಿನಂತಿಸಿಕೊಳ್ಳುತ್ತಾ ಯುವ ಪ್ರತಿಭೆಗೆ ಸಹಕಾರ ನೀಡಿ ಕ್ರೀಡಾ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಿದರು.ತಂದೆ  ಮಕ್ಕಳು ಇಬ್ಬರು 3-2-1  ಕತಾರ್ ಒಲಂಪಿಕ್ಸ್‌ ಹಾಗೂ ಕ್ರೀಡಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ. ಅಲ್ಲಿ. ಶ್ರೀಯುತ ಪೇಟಕರ್ ಅವರ. ಅಪ್ರತಿಮ ಸಾಧನೆಗಳು  ಪ್ರದರ್ಶನವನ್ನು ನೋಡಿ, ಸಂತಸ ವ್ಯಕ್ತಪಡಿಸಿದರು. ಕತಾರಿನ ಒಲಂಪಿಕ್ ಹಾಗು ಕ್ರೀಡಾ ಪ್ರಾಧಿಕಾರದ. ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಸಂತಸ ವ್ಯಕ್ತಪಡಿಸಿದರು. ತಮ್ಮ ಸಾಧನೆಗೆ ಪ್ರಪಂಚದಾದ್ಯಂತ  ಗೌರವ ಲಭ್ಯವಾಗಿರುವುದು  ಅತ್ಯಂತ ಸಂತಸಕರ ವಿಚಾರ ಎಂದು ಹೇಳಿದರು. 

ಕ್ರೀಡಾಪಟುವಿಗೆ ಇಂತಹ ಗೌರವವನ್ನು  ನೀಡುವುದರಿಂದ ಕ್ರೀಡೆ, ಹಾಗು ಪರಿಶ್ರಮಕ್ಕೆ ಪ್ರೋತ್ಸಾಹ ನೀಡಿ ಮುಂಬರುವ ಪೀಳಿಗೆಗಳಿಗೆ ನಿದರ್ಶನವಾಗಿ ಉಳಿಯಲು ಸಾಧ್ಯವಾಗುತ್ತದೆ.