ಪುರಸಭೆ ಸದಸ್ಯೆ ಭಾಗವ್ವ ಕುಟುಂಬಸ್ಥರ ಧರಣಿ ನಿರಾಶೆಯಲ್ಲಿ ಅಂತ್ಯ

ಲೋಕದರ್ಶನ ವರದಿ

ಮುಗಳಖೋಡ 10: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮುಗಳಖೋಡ ಪುರಸಭೆ ಸದಸ್ಯೆ ಶ್ರೀಮತಿ ಭಾಗವ್ವ ಭೀಮಪ್ಪ ಶೇಗುಣಸಿ ಅಪಹರಣಕ್ಕೋಳಗಾದ ಮಹಿಳೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರು ಪುರಸಭೆ ಸದಸ್ಯೆ ಜಯಶ್ರೀ ಶಿವಾನಂದ ಗೋಕಾಕ ಅವರ ಪತಿ ಶಿವಾನಂದ ಗೋಕಾಕ ಎಂಬುವರು ನಮ್ಮ ತಾಯಿಯನ್ನು ಅಪಹರಿಸಿದ್ದಾರೆಂದು ಅವರ ಪುತ್ರ ಅಪ್ಪಾಸಾಬ ಶೇಗುಣಸಿ ಆರೋಪಿಸಿದ್ದಾರೆ. ಹಾಗಾಗಿ ಶಿವಾನಂದ ಗೋಕಾಕ ಅವರೇ ಅಪಹರಣ ಮಾಡಿದರೆಂದು ಕುಟುಂಬಸ್ಥರು ತಮ್ಮ ತಾಯಿಯವರನ್ನು ಮರಳಿ ತನ್ನಿ ಎಂದು ಗೋಕಾಕ ಅವರ ಮನೆಯ ಮುಂದೆ ಗುರುವಾರ ದಿ 07ರಿಂದ ಅಹೋರಾತ್ರಿಯಿಂದ ಧರಣಿ ನಡೆಸುತ್ತಿದ್ದರು.

      ನಿನ್ನೆ ಸಾಯಂಕಾಲ 06 ಘಂಟೆಗೆ ಹಾರೂಗೇರಿ ಪಿ. ಎಸ್.ಐ ಯಮನಪ್ಪ ಮಾಂಗ್ ತಮ್ಮ ಸಿಬ್ಬಂದಿಯೊಂದಿಗೆ ಮುಗಳಖೋಡಕ್ಕೆ ಆಗಮಿಸಿ ಕಾನೂನಬಾಹಿರವಾಗಿ ಮಾಲ್ಕಿಯ ಜಾಗದಲ್ಲಿ ನೀವು ಧರಣಿ ನಡೆಸುವುದು ಅಪರಾದವಾಗುತ್ತದೆ. ನೀವು ಕಾನೂನ ರೀತಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಈ ಧರಣಿಯನ್ನು ಹಿಂತೆಗೆದುಕೋಳ್ಳಿ ಎಂದು ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ ಅಗಷ್ಟ 2019 ರಂದು ಮಾನ್ಯ ಎಸ್.ಪಿ ಅವರಲ್ಲಿ ನಮ್ಮ ತಾಯಿಯನ್ನು ಹುಡಿಕಿಕೊಡಿ ಎಂದು ವಿನಂತಿಸಿಕೊಂಡಿದ್ದೇವೆ.  ನಮ್ಮ ತಾಯಿ ಸಿಗುವವರೆಗೆ ನಮ್ಮ ಧರಣಿ ಕೈಬಿಡುವುದಿಲ್ಲ ಎಂದು ಹೇಳಿದರು. ಪ್ರಕರಣ ಬೇರೆ ತಿರುವು ಪಡೆದು ರವಿವಾರ ದಿ 10 ರಂದು ಹಾರೂಗೇರಿಯ ಪೋಲೀಸ್ ಠಾಣೆಯಲ್ಲಿ ಅಪಹರಣಗೊಂಡ ಪುರಸಭೆ ಸದಸ್ಯೆ ಬಾಗವ್ವ ಅವರ ನಾನು ಅಪಹರಣವಾಗಿಲ್ಲ, ನನಗೆ ಯಾವುದೇ ರೀತಿ ತೊಂದರೆಯಿಲ್ಲ. 

ನಮ್ಮ ಕುಂಟುಬಸ್ಥರು ತಪ್ಪು ತಿಳಿದುಕೊಂಡು ನನಗೆ ಹಿಂಸೆ ಕೊಡುತ್ತಿರುವದರಿಂದ ನನ್ನ ಸಂಬಂಧಿಕರಲ್ಲಿ ನೆಮ್ಮದಿಯಾಗಿದ್ದೇನೆ ಅವರ ಇದೇ ರೀತಿ ಮುಂದುವರೆದರೆ ಅವರ ಮೇಲೆ ಫಿರಿಯಾಧಿ (ಕಂಪ್ಲೇಂಟ್) ನೀಡುವುದಾಗಿ ಭಾಗವ್ವ ಅವರ ಹೇಳಿಕೆಯ ವಿಡೋಯೋವನ್ನು ತೋರಿಸಿ ನೀವು ಇದೇ ರೀತಿಯಾಗಿ ಮುಂದುವರೆದರೆ ಕಾನೂನಿನ ರೀತಿ ಕ್ರಮಕೈಗೋಳ್ಳುತ್ತೇನೆ ಎಂದು ಪಿ.ಎಸ್.ಐ ಹೇಳಿ ಅವರನ್ನು ಒತ್ತಾಯ ಪೂರ್ವಕವಾಗಿ ಧರಣಿಯಿಂದ ಎಬ್ಬಿಸಿ ಪೋಲೀಸ್ರು ತಮ್ಮ ಜೀಪಿನಲ್ಲಿ ಅವರ ಮನೆಗೆ ಕರೇದ್ಯೋಯ್ಯುತ್ತಿರುವಾಗ ಕುಟುಂಬಸ್ಥರೇಲ್ಲರೂ ಪುರಸಭೆ ಸದಸ್ಯೆ ಭಾಗವ್ವ ಶೇಗುಣಸಿ ಅವರ ಮಗ ಅಪ್ಪಾಸಾಬ ಶೇಗುಣಸಿ, ಮಗಳು ಸಂಗೀತಾ ಕಾಮಾನಿ, ಪುಂಡಲೀಕ ಶೇಗುಣಸಿ, ರಾಜಶ್ರೀ ಶೇಗುಣಸಿ, ಲಕ್ಕವ್ವ ಕುಲ್ಲೋಳ್ಳಿ, ಶ್ರೀಕಾಂತ ಶೇಗುಣಸಿ, ರುಕ್ಮವ್ವ ಯತ್ತಿನಮನಿ, ಭಾರತಿ ಕರೇನ್ನವರ, ಪ್ರತಾಪ ಶೇಗುಣಸಿ ದು:ಖದಿಂದ ಹೊರಟರು.